ಹುಬ್ಬಳ್ಳಿ: ಮಹಾವೀರ ಜಯಂತಿ ಅಂಗವಾಗಿ ಹುಬ್ಬಳ್ಳಿಯ ದಿಗಂಬರ ಜೈನ ಸಮಾಜವು ಮಾರ್ಚ್ 29 ಮತ್ತು 30ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಮಾರ್ಚ್ 29ರಂದು ದಿಗಂಬರ ಜೈನ ಸಮಾಜದ ಯುವ ಸಂಘ ಹಾಗೂ ಜೈನ ಯುವತಿಯರ ಸಂಘದಿಂದ ಮಹಾವೀರ ಗಲ್ಲಿಯ ಶಾಂತಿನಾಥ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ರಾಷ್ಟ್ರೋತ್ಥಾನ ರಕ್ತ ಭಂಡಾರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ.

ಸಂಜೆ 5.30ಕ್ಕೆ ಧರ್ಮಸಭೆ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಪ್ರಾಕೃತ ಮತ್ತು ಜೈನಶಾಸ್ತ್ರ ವಿದ್ವಾಂಸ ಮೈಸೂರಿನ ಶುಭಚಂದ್ರ ಉಪನ್ಯಾಸ ನೀಡುವರು. ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ ಅಧ್ಯಕ್ಷತೆ ವಹಿಸುವರು. ನೃತ್ಯ ಪ್ರದರ್ಶನ, ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ದಾನಿಗಳು ಮತ್ತು ಸೇವಾಕರ್ತರ ಸನ್ಮಾನ ನಡೆಯಲಿದೆ.

ತೊಟ್ಟಿಲೋತ್ಸವ: ನಗರದ ಎಲ್ಲ ಜಿನಮಂದಿರಗಳಲ್ಲಿ ಮಾರ್ಚ್ 30ರಂದು ಬೆಳಿಗ್ಗೆ 6ಕ್ಕೆ ವಿಶೇಷ ಪೂಜೆ, ನಾಮಕರಣ, ತೊಟ್ಟಿಲೋತ್ಸವ ನಡೆಯಲಿದೆ. ಹಳೇ ಹುಬ್ಬಳ್ಳಿ ಅನಂತನಾಥ ಜಿನಮಂದಿರದಲ್ಲಿ ಧ್ವಜಾರೋಹಣ, ಬೆಳಿಗ್ಗೆ 7.45ಕ್ಕೆ ಮಹಾವೀರ ಜಿನಬಿಂಬ ಹಾಗೂ ಭಾವಚಿತ್ರ ಮೆರವಣಿಗೆ ನಡೆಯಲಿದೆ. ನಂತರ ಶಾಂತಿನಾಥ ಭವನದಲ್ಲಿ ಧಾರ್ಮಿಕ ಕಾರ್ಯಕ್ರಮನಡೆಯಲಿವೆ ಎಂದು ದಿಗಂಬರ ಜೈನ ಸಮಾಜದ ಆಡಳಿತ ಮಂಡಳಿ ಸದಸ್ಯ ಶಾಂತಿನಾಥ ಕೆ. ಹೋತಪೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-24-911189492

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.