ಹುಬ್ಬಳ್ಳಿ: ‘ಶಿಕ್ಷಣ, ಸಂಘಟನೆಯಿಂದ ಮಾತ್ರ ಯಾವುದೇ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹಳೇ ಹುಬ್ಬಳ್ಳಿಯ ಬಾಂತಿಕಟ್ಟಾದಲ್ಲಿ ನಿರ್ಮಿಸಲಾದ ಶಂಕರ ಶಿವಾಚಾರ್ಯ ಶತಮಾನೋತ್ಸವ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುರುಹಿನಶೆಟ್ಟಿ ಸಮಾಜದವರು ಕಾಯಕವನ್ನು ನಂಬಿ ಬದಕುತ್ತಿದ್ದಾರೆ.ಇತ್ತೀಚೆಗೆ ಹೊಸ ತಲೆಮಾರಿನ ಯುವಕರು ಇತರ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಇಂದಿಗೂ ಹಲವು ಕುಟುಂಬಗಳು ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿವೆ’ ಎಂದರು.

‘ಸಮಾಜ ಸಂಘಟನೆ, ಧಾರ್ಮಿಕ ಕಾರ್ಯಕ್ರಮಗಳ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.

ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ,‘ಸಮಾಜದ ಅಭಿವೃದ್ಧಿಯಲ್ಲಿ ಕಾಯಕ ಸಮಾಜಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕಾಯಕಯೋಗಿಗಳು ದೇಶಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ’ ಎಂದರು.

ಮುಧೋಳದ ರಾಮಾರೂಢಮಠದ ಶಂಕರಾರೂಢ ಸ್ವಾಮೀಜಿ, ಬಿಳ್ಳೂರು ವಿರಕ್ತಮಠದ ರಾಜಯೋಗಿ ಚನ್ನಬಸವ ಸ್ವಾಮೀಜಿ, ಚಿತ್ತಾಪುರದ ಸವಿತಾನಂದ ಸ್ವಾಮೀಜಿ, ಚಿಂಚಲಿ ಸಿದ್ದಪ್ರಸಾದ ಸ್ವಾಮೀಜಿ, ನಾಗಠಾಣ ಪ್ರಜ್ಞಾನಂದ ಸ್ವಾಮೀಜಿ, ಸಿದ್ದಣ್ಣ ಡಂಬಳ, ಈರಣ್ಣ ಜಡಿ, ಮನೋಹರ ಶಿರೋಳ, ಅಂಬಾದಾಸ ಕಾಮೂರ್ತಿ, ಸುಮಿತ್ರಾ ಗುಂಜಾಳ, ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-24-1568736251

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.