ಹುಲಸೂರ: ‘ಮನುಕುಲದ ಮುಕುಟಮಣಿ ಜಗನ್ಮಾತೆ ಅಕ್ಕಮಹಾದೇವಿ ತಾಯಿ ಸಾವಿಲ್ಲದ, ಕೇಡಿಲ್ಲದ, ರೋಗವಿಲ್ಲದ ಪರಮಾತ್ಮನನ್ನೇ ಪತಿಯಾಗಿ ಪಡೆದ ಮಹಾನ್ ಶರಣೆ’ ಎಂದು ಪ್ರಭುದೇವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗೋರಟಾ (ಬಿ) ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಏಪ್ರಿಲ್ 1 ಮತ್ತು 2ರಂದು ನಡೆಯಲಿರುವ ಜಗನ್ಮಾತೆ ಅಕ್ಕಮಹಾದೇವಿ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿರುವ ಒಂದು ವಾರದ ‘ಅಕ್ಕನ ದರ್ಶನ’ ಪ್ರವಚನ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಶರಣರನ್ನು ಕಾಣುವ ತವಕದಿಂದ ಕಲ್ಯಾಣಕ್ಕೆ ತೆರಳಿ ಬಸವಣ್ಣನವರ ಅಚ್ಚುಮೆಚ್ಚಿನ ಮಗಳಾಗಿ ಬೆಳೆದ ಅಕ್ಕಮಹಾದೇವಿ, ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುದೇವರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಮೂಲಕ ತನ್ನ ಆತ್ಮಜ್ಞಾನ ಮತ್ತು ಲೋಕಚಿಂತನೆಯ ಪಕ್ವತೆಯನ್ನು ತೋರಿದರು’ ಎಂದು ತಿಳಿಸಿದರು.

ಪ್ರವಚನಕಾರ ಶಿವಕುಮಾರ ಮಾಶೆಟ್ಟಿ ಮಾತನಾಡಿದರು.

ಕಾರ್ಯಕ್ರಮವನ್ನು ಬಸವಣ್ಣೆಪ್ಪ ಚಿಕೂರತೆ ಉದ್ಘಾಟಿಸಿದರು. ರಂಗಮ್ಮ ಭೂರೆ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನೀಲಮ್ಮ ಬಳಗದ ಅಧ್ಯಕ್ಷೆ ವಿಜಯಲಕ್ಷ್ಮೀ ರಾಜೋಳೆ, ಚೆನ್ನಬಸಪ್ಪ ಪತಂಗೆ, ಚಂದ್ರಕಾಂತ ಕಣಜೆ, ಬಾಬುರಾವ ರಾಜೋಳೆ, ಸುಭಾಷ ಪತಂಗೆ, ಲಿಂಗಾಯತ ಸೇವಾದಳದ ಅಧ್ಯಕ್ಷ ಸುಪ್ರೀತ ಪತಂಗೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-33-2130461016

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.