ಹುಮನಾಬಾದ್: ‘ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ. ಸಂಗೀತ ಆಲಿಕೆ ಕುರಿತು ಯುವಕಲ್ಲಿ ಆಸಕ್ತಿ ಬೆಳೆಯಬೇಕು’ ಎಂದು ಖೇಳಗಿಯ ವೀರಕ್ತಮಠದ ಶಿವಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಳ್ಳಿಖೇಡ್ (ಕೆ) ಗ್ರಾಮದಲ್ಲಿ ಶ್ರೀ ಕಿನ್ನರಿನಾದರುದ್ರ ಸಂಗೀತ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನಡೆದ ನಾದ ವೈಭವ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜ್ಞಾಪಕ ಶಕ್ತಿ ರಾಗ, ತಾಳ, ಸಾಹಿತ್ಯ ಸಂಗೀತ, ಕಲೆ, ಸಾಹಿತ್ಯ, ಸಂಸ್ಕೃತಿ ಅರಿವು ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಕಲೆ ಹಾಗೂ ಸಂಸ್ಕೃತಿ ಬಗ್ಗೆ ಒಲವು ಮೂಡಿಸುವ ಅಗತ್ಯವಿದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ್ ಚಿಲಶೆಟ್ಟಿ ಮಾತನಾಡಿ, ಸುಖ ದುಃಖ, ಕೋಪ ಎಲ್ಲವನ್ನೂ ಸಂಗೀತದ ಮೂಲಕ ವ್ಯಕ್ತಪಡಿಸಬಹುದಾಗಿದೆ. ಸಂಗೀತ ಕಲಿಯಲು ವಯಸ್ಸಿನ ಮಿತಿ ಇಲ್ಲ. ಎಲ್ಲ ವಯಸ್ಸಿನವರೂ ಸಂಗೀತ ಕಲಿಯಬಹುದಾಗಿದೆ’ ಎಂದು ಹೇಳಿದರು.

ಡೊಂಗರಗಾಂವ ಕ್ರಾಸ್ನ ರೇಣುಕಾಚಾರ್ಯ ಆಶ್ರಮದ ಉದಯರಾಜಯೋಗೆಂದ್ರ ಶಿವಾಚಾರ್ಯರು, ಕಲ್ಲೂರು ಹಿರೇಮಠದ ಮೃತ್ಯುಂಜಯ ಶಿವಾಚಾರ್ಯರು, ಗಂಗಾಧರಯ್ಯ ಚಿಕ್ಕಮಠ, ಲಿಂಗಾನಂದ ಚಿಕ್ಕಮಠ, ಮಲ್ಲಯ್ಯ ಚಿಕ್ಕಮಠ, ಸುಭಾಷ ವಾರದ, ಅಣ್ಣೆಪ್ಪ ರಟಕಲ್, ಭಕ್ತರಾಜ ಚಿತ್ತಾಪೂರ, ಹಣಮಂತ ಬುಕ್ಕಾ, ಗುಂಡಪ್ಪ ಕೋರಿ, ಅರವಿಂದ ಸಿದ್ದೇಶ್ವರ, ಜಗನ್ನಾಥ ಚಿಕ್ಕಪಾಟೀಲ ಸೇರಿದಂತೆ ಇತರರು ಇದ್ದರು.

ಕಲಾವಿದರಾದ ಮಹಾಂತಯ್ಯ ಮಂಠಾಳ, ಗುರುಶಾಂತಯ್ಯ ಸ್ಥಾವರಮಠ, ಮಲ್ಲಿಕಾರ್ಜುನ ಶಾಸ್ತ್ರಿ, ಸೂರ್ಯಕಾಂತ ಶಾಸ್ತ್ರಿ , ಉದಯಕುಮಾರ ಮಠಪತಿ, ಮಲ್ಲಯ್ಯ ಸ್ವಾಮಿ ಡೊಂಗರಗಾಂವ, ಪ್ರಶಾಂತ್ , ತೋಟಯ್ಯ , ಪವಿತ್ರ ವಿಶ್ವನಾಥ, ಓಂಕಾರ ರಾಜೋಳ, ಸೂರ್ಯಕಾಂತ ಹಡಪದ, ಸಾಧನಾ ಬುಕ್ಕಾ, ವಿಕಾಸ ಮಠಪತಿ, ಸವಿತಾ ವೀರಭದ್ರಯ್ಯ, ಜನಾರ್ಧನ ವಾಗ್ಮೋರೆ, ಲೋಕನಾಥ ಕುಂಬಾರ, ಮೃತ್ಯುಂಜಯ ಚಿಕ್ಕಮಠ, ಅಭಿಷೇಕ ಬುಕ್ಕಾ, ಛತೃಜ್ಞ ಹಡಪದ ಅವರ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-33-1738161105

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.