ಹುಣಸಗಿ: ‘ನಾಡಿನೆಲ್ಲಡೆ ದಾಸರ ಪದಗಳನ್ನು ಗ್ರಾಮೀಣ ಜನತೆಗೆ ಮುಟ್ಟಿಸುವಲ್ಲಿ ನಮ್ಮ ಚನ್ನದಾಸರ ಜನಾಂಗದ ಕೊಡುಗೆ ವಿಶಿಷ್ಟ ಮತ್ತು ಅಪಾರವಾಗಿದೆ’ ಎಂದು ಸಂಘದ ಜಿಲ್ಲಾ ಗೌರವ ಅಧ್ಯಕ್ಷ ವೆಂಕೋಬ ಕಂಚಗಾರಹಳ್ಳಿ ಹೇಳಿದರು.

ಹುಣಸಗಿ ಪಟ್ಟಣದದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಚನ್ನದಾಸರ (ಪ.ಜಾ) ಸಂಘದ ಹುಣಸಗಿ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಸಮುದಾಯವು ಸಾಂಪ್ರದಾಯಿಕವಾಗಿ ತಿರುಪತಿ ವೆಂಕಟೇಶ್ವರ ಸ್ವಾಮಿಯ ಆರಾಧಕರಾಗಿದ್ದು, ರಾಜ್ಯದಲ್ಲಿ ಒಂದು ವಿಶಿಷ್ಟವಾದ ಭಕ್ತಿ ಸಂಪ್ರದಾಯ, ಸಮುದಾಯದ ಮೂಲಕ ಹೆಸರನ್ನು ಸೂಚಿಸುತ್ತದೆ. ಕೃಷ್ಣಾ ಹಾಗೂ ತುಂಗಭದ್ರಾ ನದಿಯ ಆಸುಪಾಸಿನಲ್ಲಿ ದಾಸರ ಹಾಡುಗಳು ಜನಪ್ರಿಯಗೊಳಿಸುವಲ್ಲಿ ನಮ್ಮ ಸಮುದಾಯದವರ ಸೇವೆ ಅನನ್ಯವಾಗಿದೆ. ಕರ್ನಾಟಕದ ಧಾರವಾಡ, ರಾಯಚೂರು, ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ’ ಎಂದು ತಿಳಿಸಿದರು.

ಚನ್ನದಾಸರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕನಕಪ್ಪ ದಾಸರ ಕಾಮನಟಗಿ ಮಾತನಾಡಿ, ‘ತಾಲ್ಲೂಕಿನಲ್ಲಿನ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತೇವೆ’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ನೂತನ ತಾಲ್ಲೂಕು ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಜಿ.ಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಬಸವರಾಜ ಮಲಗಲದಿನ್ನಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮರಲಿಂಗಪ್ಪ ನಾಟೆಕಾರ, ಸದಸ್ಯರಾದ ಸಿದ್ರಾಮಪ್ಪ ಮುದುಗಲ್, ಮಲ್ಲಣ್ಣ ಕಟ್ಟಿಮನಿ, ರಮೇಶ ವಾಲಿ, ಭೀಮಣ್ಣ ನಾಟೆಕರ, ಶರಣಪ್ಪ ಗುಳಬಾಳ, ಗಿರೆಪ್ಪ ದಾಸರ, ದೇವೆಂದ್ರ ಹೊಸಮನಿ, ಖಾಸೀಂ ಚೌದರಿ ಇತರರು ಇದ್ದರು.

ತಿರುಪತಿ ಕಲ್ಲದೇವನಹಳ್ಳಿ ಸ್ವಾಗತಿಸಿದರು. ಹನುಮಂತ ದಾಸರ ನಿರೂಪಿಸಿದರು. ರವಿಕುಮಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-30-46287731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.