ಹುಣಸಗಿ: ‘ಈ ಪ್ರಾಪಂಚಿಕ ಹಾಗೂ ಸಾಂಸಾರಿಕ ಎಂಬ ಭವದಲ್ಲಿನ ಬಂಧನದಿಂದ ಮುಕ್ತರಾಗಿಲು ಶರಣರ ಸಂಗ ಹಾಗೂ ಭಗವಂತನ ಸ್ಮರಣೆ ಮುಖ್ಯ’ ಎಂದು ಅಲ್ಲಮಪ್ರಭು ಹೊಕ್ರಾಣಿ ಹೇಳಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಮಹಲಿನ ಮಠದಲ್ಲಿ ಹಮ್ಮಿಕೊಂಡಿದ್ದ ‘18ನೇ ವಚನ ಹುಣ್ಣಿಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭವ ಬಂಧನ ಕುರಿತು ಮಾತನಾಡಿದರು.

‘ಬಹುತೇಕರು ನಮ್ಮಲ್ಲಿರುವ ಅರಿಷಡ್ವರ್ಗಗಳಿಗೆ ಕಟ್ಟು ಬಿದ್ದು, ಅವುಗಳನ್ನು ತೃಪ್ತಿ ಪಡಿಸಿಕೊಳ್ಳುವುದರಲ್ಲಿಯೇ ಜೀವನದಲ್ಲಿ ಹೆಣಗಾಡುತ್ತೇವೆ. ಆದರೆ, ನಮ್ಮ ನಿಜವಾದ ಸುಖದ ಕುರಿತು ಚಿಂತಿಸದಿದ್ದಲ್ಲಿ ಭವ ಎಂಬುದು ಬಂಧನವಾಗಲಿದೆ’ ಎಂದು ಹೇಳಿದರು.

ಶರಣ ದಾನಪ್ಪ ಅಪ್ಪಾಗೋಳ ಮಾತನಾಡಿ, ‘ಭವ ಎಂಬ ಪ್ರಪಂಚಕ್ಕೆ ಬಂದಿರುವ ಪ್ರತಿಯೊಬ್ಬರು ಬಂಧಿಗಳಿದ್ದು, ಅದರಿಂದ ಮುಕ್ತರಾಗಲು ಇಂತಹ ಸತ್ಸಂಗಗಳು ಅಗತ್ಯ’ ಎಂದು ನುಡಿದರು.

ಮಹಲಿನ ಮಠದ ವೃಷಬೇಂದ್ರ ಅಪ್ಪ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸಂಸಾರ ಎಂಬ ಕೌಟುಂಬಿಕ ಬಂಧನಲ್ಲಿದ್ದುಕೊಂಡರೂ ಶರಣರು ತಮ್ಮ ನಡೆ–ನುಡಿ ಸದ್ಭಾವದ ಮೂಲಕ ಎಲ್ಲದರಿಂದಲೂ ಬಂಧ ಮುಕ್ತರಾಗಿ ನಿಶಬ್ಧದ ಕಡೆಗೆ ತೆರಳುವ ಮೂಲಕ ಶೂನ್ಯ ಸಂಪಾದನೆ ಮಾಡಿದ್ದಾರೆ. ಆದ್ದರಿಂದ ಶರಣ ಜೀವನದಲ್ಲಿ ಬಂಧದಿಂದ ಮುಕ್ತರಾಗುವ ಕಲೆ ತಿಳಿದುಕೊಳ್ಳಬಹುದಾಗಿದೆ’ ಎಂದು ಹೇಳಿದರು.

ಕಸಾಪ ವಲಯ ಅಧ್ಯಕ್ಷ ಕೋರಿಸಂಗಯ್ಯ ಗಡ್ಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಕೊಡೇಕಲ್ಲಮಠ, ಹನುಮಯ್ಯ ಕೆಂಡದ, ಬಸಮ್ಮ ಕೆಂಡದ, ಜನ್ನಮ್ಮ ಡಂಬಳ, ನೀಲಮ್ಮ ಪಂಜಗಲ್ಲ, ಸಂಗಮ್ಮ ಹಾವೇರಿ ಸೇರಿದಂತೆ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-30-1264551128

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.