ಹುಣಸಗಿ: ‘ನಿತ್ಯದ ವ್ಯವಹಾರಗಳು ನಮ್ಮನ್ನು ಸಂಸಾರದ ಜಂಜಾಟದಲ್ಲಿ ಮುಳುವಂತೆ ಮಾಡಿದರೆ ಆಧ್ಯಾತ್ಮಿಕ ಚಿಂತನೆಗಳು ನಮ್ಮನ್ನು ನಿರಾಳ ಮತ್ತು ನಿರ್ಲಿಪ್ತತೆಯೆಡೆಗೆ ಕೊಂಡೊಯ್ಯುತ್ತವೆ’ ಎಂದು ಶಿಕ್ಷಕ ಗುರಣ್ಣಗೌಡ ಹೊರಗಿನಮನಿ ಅಭಿಪ್ರಾಯ ಪಟ್ಟರು.

ಪಟ್ಟಣದಲ್ಲಿ ‘ತಾಲ್ಲೂಕು ವಿಕ್ರಮಪುರ ಓದುಗರ ಬಳಗ’ದ ವತಿಯಿಂದ ಆಯೋಜಿಸಲಾಗಿದ್ದ ಕಲ್ಲದೇವನಹಳ್ಳಿಯ ರೇವಣಸಿದ್ದಯ್ಯ ಹಿರೇಮಠ ಅವರ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಲ್ಲದೇವನಹಳ್ಳಿಯ ರೇವಣಸಿದ್ದಯ್ಯ ಹಿರೇಮಠ ಅವರು ಎಲೆಮರೆಯ ಕಾಯಿಯಂತೆ ಸಾಹಿತ್ಯ ಕೃಷಿಯನ್ನು ಮಾಡಿಕೊಂಡಿದ್ದರು. ಆದರೆ, ಅವರ ಕೃತಿಗಳಿಗೆ ಹೆಚ್ಚಿನ ಪ್ರಚಾರ ಸಿಗಲಿಲ್ಲ. ಅವರ ಅನುವಾದಿಸಿರುವ ಕೃತಿಗಳಾದ ವಿವೇಕ ಚೂಡಾಮಣಿ, ಪಂಚದಶಿ, ಕರಿಯು ಕನ್ನಡಿಯೊಳಗೆ, ಅನುಭವ ಮುಕುರ ಕೃತಿಗಳು ಶ್ರೇಷ್ಠ ಕೃತಿಗಳಾಗಿವೆ’ ಎಂದರು.

‘ನಮ್ಮ ಭಾಗದ ಕವಿ – ಸಾಹಿತಿಗಳ ಕೃತಿಗಳ ಕುರಿತು ಹೆಚ್ಚು ಅಧ್ಯಯನ ನಡೆಯಲಿ. ಸಂಸಾರದಲ್ಲಿದ್ದುಕೊಂಡು ಕೂಡಾ ನಾವು ಹೇಗೆ ನೆಮ್ಮದಿಯ ಜೀವನ ನಡೆಸಬಹುದು ಎಂದು ಶರಣ ಚರಿತ್ರೆಯ ಮೂಲಕ ತಿಳಿದುಕೊಳ್ಳಬಹುದಾಗಿದೆ’ ಎಂದು ವಿವರಿಸಿದರು.

ವಿಕ್ರಮಪುರ ಓದುಗರ ಬಳಗದ ಸಂಚಾಲಕ ಮಹೇಶ ಸ್ಥಾವರಮಠ ಮಾತನಾಡಿ, ‘ಈ ಓದುಗರ ಬಳಗದ ಮೂಲಕ ಯುವಕರಲ್ಲಿ ಓದುವ ಹವ್ಯಾಸ ಬೆಳೆಸುವುದು, ಸ್ಥಳೀಯ ಲೇಖಕರನ್ನು ಪ್ರೋತ್ಸಾಹಿಸುವ ಕೆಲಸವನ್ನು ಬಳಗ ಮಾಡಲಿದೆ. ಮೊಬೈಲ್ ಬಳಕೆ ಕಡಿಮೆ ಮಾಡಿ, ಪುಸ್ತಕಗಳನ್ನು ಹೆಚ್ಚು ಬಳಸೋಣ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯಂಕನಗೌಡ ಅರಕೇರಿ, ಶಿವಕುಮಾರ ಬಂಡೋಳಿ, ನಾಗನಗೌಡ ಪಾಟೀಲ, ರಾಘವೇಂದ್ರ ಜಹಗಿರದಾರ, ವೆಂಕಟಗಿರಿ ದೇಶಪಾಂಡೆ, ಬಸವರಾಜ ಚಂದಾ, ಸೋಮನಗೌಡ ಬಳವಾಟ, ಸಹಾಯಕ ಗ್ರಂಥಪಾಲಕ ಬಸನಗೌಡ ಪಾಟೀಲ, ಬಾಲಪ್ಪ ಕುಪ್ಪಿ, ಮಾಹಾದೇವಿ ಬೇನಾಳಮಠ, ಜ್ಯೋತಿ ಹಿರೇಮಠ, ಬಾಪುಗೌಡ ಮೇಟಿ, ಚಂದ್ರಕಾಂತ, ರವಿ ಬಂಟನೂರ, ಸಿದ್ದನಗೌಡ ಬಿರಾದಾರ, ಮಹಾಂತೇಶ ಮುರಾಳ ಇತರರಿದ್ದರು.

ಶಿವಲೀಲಾ ಹಾದಿಮನಿ ಪ್ರಾರ್ಥಿಸಿದರು. ಸವಿತಾ ಬೆಳ್ಳಿ ಸ್ವಾಗತಿಸಿದರು. ಅಕ್ಕಮಹಾದೇವಿ ದೇಶಮುಖ ನಿರೂಪಿಸಿದರು. ವೀರೇಶ ಹಡಪದ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-30-1267923801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.