ಹುಣಸೂರು: ‘ಮಹಾನ್ ಮಾನವತಾವಾದಿ ಶಾಂತಿಧೂತ ಗೌತಮ ಬುದ್ಧ ಅವರನ್ನು ವಿಶ್ವವೇ ಅಂಗೀಕರಿಸಿದ್ದರೂ ಭಾರತೀಯರಾದ ನಾವು ಆತನ ತತ್ವ ಸಿದ್ಧಾಂತ ಆಪ್ಪಿಕೊಳ್ಳುವಲ್ಲಿ ವಿಫಲವಾಗಿದ್ದೇವೆ’ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗೌತಮ ಬುದ್ಧ ತಮ್ಮ 35ನೇ ವಯಸ್ಸಿನಲ್ಲಿ ವೈಶಾಖ ಪೂರ್ಣಿಮೆಯ ದಿನದಂದು ಬೋಧಗಯಾದಲ್ಲಿ ಬೋಧಿ ವೃಕ್ಷ ಅಡಿಯಲ್ಲಿ ಧ್ಯಾನಮಗ್ನರಾಗಿ ಕಾಮ, ಕ್ರೋಧ, ಲೋಭ, ಭಯಗಳಿಂದ ಹೊರ ಬಂದರು. ಬುದ್ಧರಾಗಿ ಜೀವಮಾನದುದ್ದಕ್ಕೂ ಶಾಂತಿ ಮತ್ತು ಮಾನವ ಧರ್ಮವನ್ನು ಪ್ರಚಾರದಲ್ಲಿ ತೊಡಗಿದರು’ ಎಂದು ಮಾಹಿತಿ ನೀಡಿದರು.

‘ನೆರೆಯ ದೇಶಗಳಾದ ಶ್ರೀಲಂಕಾ, ನೇಪಾಳ, ಚೀನಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ಇಂದು ಬುದ್ಧ ತತ್ವ, ಸಿದ್ದಾಂತವನ್ನು ಅಪ್ಪಿಕೊಂಡು ಶಾಂತಿ ಮಂತ್ರ ಜಪಿಸುತ್ತಿವೆ. ಆದರೆ ಭಾರತದಲ್ಲಿ ಇಂದಿಗೂ ಅದರ ಆಳ ಅಗಲ ತಿಳಿಯುವ ಹಂತದಲ್ಲಿದ್ದೇವೆ’ ಎಂದರು.

‘ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಬಳಿಕ ದೇಶದಲ್ಲಿ ಹೆಚ್ಚಿನ ಪ್ರಚಾರ ಸಿಕ್ಕಿತು. ಮಹಾತ್ಮ ಗಾಂಧೀಜಿ ಅವರೂ ಬುದ್ಧನ ತತ್ವ ಸಿದ್ದಾಂತಕ್ಕೆ ಮಾರುಹೋಗಿ ಅಹಿಂಸೆಯ ಮಾರ್ಗ ಅಳವಡಿಸಿಕೊಂಡು ಬ್ರಿಟಿಷ್ ವಿರುದ್ಧ ಹೋರಾಟ ನಡೆಸಿದರು. ಶಾಂತ ಸ್ವರೂಪಿಗಳನ್ನು ಗೆಲ್ಲುವುದು ಕಷ್ಟಕರ ಎಂಬುದನ್ನು ತೋರಿದರು’ ಎಂದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರವಿ ಮಾತನಾಡಿದರು. ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ, ಕಿರಂಗೂರು ಸ್ವಾಮಿ, ಡಿ.ಕುಮಾರ್, ಅಶೋಕ್, ಹೊನ್ನಪ್ಪ, ಬಿಳಿಕೆರೆ ಬಸವರಾಜ್, ಕುಮಾರ್, ಪುಟ್ಟರಾಜ್, ಅತ್ತಿಕುಪ್ಪೆ ರಾಮಕೃಷ್ಣ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-38-1376977729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.