ಹುಣಸೂರು: ‘ಸಾಮಾಜಿಕ ಹರಿಕಾರ, ಸಮಾನತೆಯ ಸಂದೇಶ ಸಾರಿದ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಒಗ್ಗೂಡಿ ಆಚರಿಸುವ ಮೂಲಕ ಸರ್ವ ಧರ್ಮಿಯರು ಸಮಾನರು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವ ಕಾರ್ಯ ಈ ದಿನ ದೇಶದಾದ್ಯಂತ ನಡೆದಿದೆ’ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದ ಅವರು, ‘ವಚನ ಸಂದೇಶ ಸಾರ್ವಕಾಲಿಕ’ ಎಂದರು.

ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲ ಎಂಬ ತತ್ವಗಳನ್ನು ಸಮಾಜಕ್ಕೆ ಸಾರಿದ ಬಸವಣ್ಣನವರು ಸಮಾಜ ವಿರೋಧಿ ಕಟ್ಟುಪಾಡು ಹೋಗಲಾಡಿಸುವ ದೃಷ್ಟಿಯಲ್ಲಿ ಹಲವು ಸಾಮಾಜಿಕ ಬದಲಾವಣೆ ಕ್ರಾಂತಿಕಾರಿಕ ನಿಲುವು ಕೈಗೊಂಡು ತಳಸಮುದಾಯಗಳಿಗೆ ಲಿಂಗಧಾರಣೆ ಮಾಡುವ ಮೂಲಕ ಜಾತಿಯತೆ ಪದ್ಧತಿ ಬುಡದಿಂದ ಕಿತ್ತು ಹಾಕುವ ಕಾಯಕಕ್ಕೆ ಚಾಲನೆ ನೀಡಿದರು ಎಂದು ತಿಳಿಸಿದರು.

ರಂಗ ಕರ್ಮಿ ಜಯರಾಮ್ ಬಸವಣ್ಣನವರ ವಚನ ಕುರಿತು ಮಾತನಾಡಿದರು. ಜಯಂತಿ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಶಿರಸ್ತೇದಾರ್ ಶ್ರೀಪಾದ್, ವಿ.ಎನ್.ದಾಸ್, ನಿಂಗರಾಜ್ ಮಲ್ಲಾಡಿ, ಹೊಸೂರು ಕುಮಾರ್, ಡಿ.ಕುಮಾರ್, ಹೊನ್ನಪ್ಪ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-38-880191286

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.