ಹುಣಸೂರು: ‘ಜೀವನದಲ್ಲಿ ಗಳಿಸಿದ ಆದಾಯದಲ್ಲಿ ಧಾರ್ಮಿಕ ಕೆಲಸ ಕಾರ್ಯಗಳಿಗೆ ಅಲ್ಪ ಪ್ರಮಾಣವನ್ನು ವಿನಿಯೋಗಿಸುವುದರಿಂದ ಧರ್ಮ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ’ ಎಂದು ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಿಳಿಕೆರೆ ಹೋಬಳಿ ಬೋಳನಹಳ್ಳಿ ಗ್ರಾಮದ ಮಾಳಿಗೇಶ್ವರಿ ದೇವಸ್ಥಾನದಲ್ಲಿ 12ನೇ ವಾರ್ಷಿಕೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಿದ ಸಪ್ತಪದಿ ಮಂದಿರಕ್ಕೆ ಚಾಲನೆ ನೀಡಿದ ಬಳಿಕ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

‘ಮನುಷ್ಯನಲ್ಲಿ ಆಸೆ ಹೆಮ್ಮರವಾಗಿ ಬೆಳೆಯದೆ ತನ್ನ ವೃತ್ತಿ ಜೀವನದಲ್ಲಿ ಸಂಪಾದಿಸಿದ ಹಣದಿಂದ ಇಂತಿಷ್ಟು ಪ್ರಮಾಣ ಸಾರ್ವಜನಿಕರ ಕ್ಷೇಮಾಭಿವೃದ್ಧಿಗೆ ಅಥವಾ ಧಾರ್ಮಿಕ ಸಂಪ್ರದಾಯವನ್ನು ಮತ್ತಷ್ಟು ಗಟ್ಟಿಗೊಳಿಸಿ ಭವಿಷ್ಯದ ಕುಡಿಗೆ ತಲಪಿಸಲು ಸಂಪತ್ತು ಬಳಕೆ ಆಗುವುದರಿಂದ ಸನಾತನ ಧರ್ಮ ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯ’ ಎಂದರು.

‘ಪ್ರಪಂಚದಲ್ಲಿ ಎಲ್ಲಾ ರೀತಿಯ ಮನಸ್ಸುಗಳ ಜೊತೆ ನಿತ್ಯ ಜೀವನದ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ನಾವು ನಾವಾಗಿಯೇ ಉಳಿಯಬೇಕಾದರೆ ನಮ್ಮ ಮನಸ್ಸಿನ ಮೇಲೆ ಹತೋಟಿ ಹೊಂದಿರಬೇಕು. ಹೀಗಾದಲ್ಲಿ ನಾವು ಕಂಡ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರವಾಗಲಿದೆ’ ಎಂದರು.

‘ಗ್ರಾಮೀಣ ಪ್ರದೇಶದಲ್ಲಿ ಧಾರ್ಮಿಕ ಸಂಪತ್ತು ಸಂರಕ್ಷಿಸುವವರ ಸಂಖ್ಯೆ ವಿರಳವಾಗುತ್ತಿದ್ದು, ಈ ದಿನಮಾನದಲ್ಲಿ ತಾವು ಹುಟ್ಟಿ ಬೆಳೆದ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿರುವ ವಕೀಲ ನಾಗರಾಜ್ ಅವರ ಆಲೋಚನೆ ಮತ್ತಷ್ಟು ಜನರಿಗೆ ಪಸರಿಸಬೇಕು. ಆ ಮೂಲಕ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದಂತಾಗಿ ನಗರಾಭಿವೃದ್ದಿ ಮುಖರಾಗುತ್ತಿರುವ ಯುವಸಮುದಾಯವನ್ನು ಗ್ರಾಮದಲ್ಲೇ ಉಳಿಸಿ ಗ್ರಾಮ ಸಂಪತ್ತು ವೃದ್ಧಿಸಲು ಸಹಕಾರವಾಗಲಿದೆ’ ಎಂದರು.

ಕಾರ್ಯಕ್ರಮದಲ್ಲಿ ವಕೀಲ ನಾಗರಾಜ್, ಶಿಕ್ಷಕ ರಾಮಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲ ಯೋಗಾನಂದಕುಮಾರ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಮಾಧು, ಹನುಮಂತೋತ್ಸವ ಸಮಿತಿ ತಾಲ್ಲೂಕು ಅಧ್ಯಕ್ಷ ವಿ.ಎನ್.ದಾಸ್ ಹಾಗೂ ಮುಖಂಡರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-38-1211112030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.