ಇಳಕಲ್: 'ತಮಿಳುನಾಡಿನ ಹೊಸ ಮುಖ್ಯಮಂತ್ರಿ ಶಾಲೆ, ದೇವಸ್ಥಾನ ಹತ್ತಿರವಿದ್ದ717 ಮದ್ಯದಂಗಡಿ ಬಂದ್ ಮಾಡಿದ ಮಾದರಿಯಲ್ಲಿ ರಾಜ್ಯದಲ್ಲೂ ಸರ್ಕಾರ ಮದ್ಯದಂಗಡಿಗಳನ್ನು ಮುಚ್ಚಿಸ ಬೇಕು. ಡಾ.ಮಹಾಂತಪ್ಪಗಳ ವ್ಯಸನ ಮುಕ್ತ ಸಮಾಜದ ಕನಸು ನನಸಾಗಬೇಕಾದರೆ ಮದ್ಯ ಮಾರಾಟ ನಿಷೇಧಿಸುವಂತೆ ಹೋರಾಟ ರೂಪಿಸಬೇಕು' ಎಂದು ಹಂದಿಗುಂದದ ಶಿವಾನಂದ ಸ್ವಾಮೀಜಿ ಒತ್ತಾಯಿಸಿದರು.

ಅವರು ಮಂಗಳವಾರ ನಗರದ ಅನುಭವ ಮಂಟಪದಲ್ಲಿ ನಡೆದ ಲಿಂ.ಮಹಾಂತ ಶ್ರೀಗಳ 8ನೇ ಪುಣ್ಯಸ್ಮರಣೆ ನಿಮಿತ್ತ ನಡೆದ ಶರಣ ಸಿದ್ಧಾಂತ ವಿದ್ಯಾ ಪೀಠದ 55ನೇ ಶಿವಾನುಭವ ತರಬೇತಿ ಶಿಬಿರ, ಹಿರೇಮಲ್ಲೂರ ಈಶ್ವರನ್ ಬರೆದ 'ಇಳಕಲ್ಲ ಮಹಾಂತ ಶಿವಯೋಗಿಗಳು' ಪುಸ್ತಕದ ಮರು ಲೋಕಾರ್ಪಣೆ ಹಾಗೂ ಶರಣೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

'ಬಸವಣ್ಣ ಎಲ್ಲರಿಗೂ ಅಕ್ಷರ, ಸಂಸ್ಕಾರ ಕಲಿಸಿ ಕಲ್ಯಾಣ ಕಟ್ಟಿದರು. ಸಮಾಜದಲ್ಲಿ ಮುಂದೊಂದು ದಿನ ಮತ್ತೆ ಕಲ್ಯಾಣ, ಮತ್ತೆ ಬಸವಣ್ಣ, ಮತ್ತೆ ಅನುಭವ ಮಂಟಪ ಅನುರಣಿಸಲಿದೆ. ಬಸವತತ್ವದ ಗಟ್ಟಿ ದನಿಯಾಗಿದ್ದ ಇಳಕಲ್ ಮಹಾಂತ ಶ್ರೀಗಳು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ' ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ವಿಜಯಾ ನಂದ ಕಾಶಪ್ಪನವರ ಮಾತನಾಡಿ, 'ಮಹಾಂತ ಜೋಳಿಗೆಯ ಮೂಲಕ ವ್ಯಸನಗಳ ವಿರುದ್ಧ ಹೋರಾಡಿದ ಮಹಾಂತ ಶ್ರೀಗಳ ಕಾರ್ಯ ಅನುಕರಣೀಯವಾದುದು. ಬಸವಾದಿ ಶರಣರ ಆಶಯಗಳನ್ನು ಜಾರಿಗೆ ತರಲು ಶ್ರಮಿಸುವ ಪೂಜ್ಯರನ್ನು ಗೌರವಿಸಬೇಕು. ಎಲ್ಲರೂ ಬಸವ ತತ್ವ ಅನುಸರಿಸಬೇಕು' ಎಂದರು.

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಶ್ರೀ ಮಾತನಾಡಿದರು.

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಡಾ.ಬಿ.ಎಚ್. ಕೆರೂಡಿ ದಂಪತಿಯನ್ನು ಹಾಗೂ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಾಲಾಪುರ ಅವರನ್ಮು ಸತ್ಕರಿಸಲಾಯಿತು.

ಮಸ್ಕತ್ ಬಸವಕೇಂದ್ರ ತಯಾರಿಸಿದ ಮಹಾಂತ ಶ್ರೀಗಳ ಕುರಿತ ಸಾಕ್ಷ್ಯಚಿತ್ರ ವನ್ನು ಪ್ರದರ್ಶಿಸಲಾಯಿತು. ಶಿವರುದ್ರಪ್ಪ ಗೊಂಗಡಶೆಟ್ಟಿ ವೇದಿಕೆಯಲ್ಲಿದ್ದರು. ಸಂಗಣ್ಣ ಗದ್ದಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-19-652300529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.