ಇಂಡಿ: ಇಂಚಗೇರಿ ಮಠವು ಆಧ್ಯಾತ್ಮಿಕತೆಯ ಜೊತೆಗೆ ಸ್ವಾತಂತ್ರ್ಯ ಸಂಗ್ರಾಮ, ಗೋರಕ್ಷಾ ಹೋರಾಟ ಮತ್ತು ಸರ್ವೋದಯದ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿನ ಅನೇಕ ಮಹಾತ್ಮರ ಹೋರಾಟವು ಇಂದಿನ ಪೀಳಿಗೆಗೆ ಸ್ಫೂರ್ತಿ ಆಗಿದೆ ಎಂದು ಶಿಕ್ಷಕಿ ಸರೋಜಿನಿ ಮಾವಿನಮರ ಹೇಳಿದರು.

ಭೀಮಾಂತರಂಗ ಆನ್ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಇಂಚಗೇರಿ ಮಾಧವಾನಂದರು’ ಕುರಿತ ಆನ್ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂಚಗೇರಿ ಮಠದ ಮಾಧವಾನಂದರು ಮಠಾಧೀಶರಾಗಿ ಬ್ರಿಟಿಷರ ವಿರುದ್ಧ ಭಕ್ತರೊಂದಿಗೆ ಸಶಸ್ತ್ರವಾಗಿ ಹೋರಾಡಿದ ಕ್ರಾಂತಿಕಾರಿ ಸಂತ. 50 ವರ್ಷಗಳಿಂದ ಈ ಮಠದಲ್ಲಿ ಅಂತರಜಾತಿ ಮತ್ತು ಅಂತರಧರ್ಮದ ವಿವಾಹಗಳನ್ನು ಆಯೋಜಿಸುತ್ತಿದ್ದು, ಈ ವಿಶಿಷ್ಟ ಸಂಪ್ರದಾಯಕ್ಕೆ ಅಡಿಪಾಯ ಹಾಕಿದ್ದೇ ದಾರ್ಶನಿಕ ಮಾಧವಾನಂದರು ಎಂದು ಹೇಳಿದರು.

ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿದರು. ಚಿದಂಬರ ಬಂಡಗರ, ರಾಘವೇಂದ್ರ ಕುಲಕರ್ಣಿ, ಗೀತಯೋಗಿ, ಬಸವರಾಜ ಕಿರಣಗಿ, ಸಿ.ಆರ್. ಮ್ಯಾಕೇರಿ, ಸದಾನಂದ ಈರಣಕೇರಿ, ಭವಾನಿ ಗಲಗಲಿ, ಲಕ್ಷ್ಮಣ ಝಳಕಿ, ರಾಚು ಕೊಪ್ಪ, ನಿಂಗಣ್ಣ ಬಿರಾದಾರ, ಡಾ ರಾಜಶ್ರೀ ಮಾರನೂರ, ರವಿ ಅರಳಿ, ಆರ್.ವಿ. ಪಾಟೀಲ, ಸಂಗನಗೌಡ ಹಚಡದ ಇದ್ದರು. ಸಿ.ಆರ್.ಪಿ ಶ್ರೀಧರ ಹಿಪ್ಪರಗಿ ನಿರೂಪಿಸಿದರು. ಶಿಕ್ಷಕ ವೈ.ಜಿ. ಬಿರಾದಾರ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-26-1112051201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.