ಇಂಡಿ: ‘ಸಾಮೂಹಿಕ ವಿವಾಹಗಳಲ್ಲಿ ಮದುವೆಯಾದರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಈಗಿನ ಯುವ ಸಮೂಹ ಹೆಚ್ಚು ಹೆಚ್ಚಾಗಿ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗಲು ಮುಂದೆ ಬರಬೇಕಿದೆ’ ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯ ಹೇಳಿದರು.

ತಾಲ್ಲೂಕಿನ ಇಂಗಳಗಿಯಲ್ಲಿ ಅಲ್ಲಮಪ್ರಭು, ಹನುಮ ಜಯಂತಿ ಹಾಗೂ ಗೈಬುಸಾಬ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಂತರಾಯಗೌಡ ಪಾಟೀಲ ಮಾತನಾಡಿ, ಇಂಗಳಗಿ ಒಂದು ಚಿಕ್ಕ ಗ್ರಾಮವಾದರೂ ಹಲವು ವರ್ಷಗಳಿಂದ ಪ್ರತಿ ವರ್ಷವೂ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಬಡ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಲ್ಲಮಪ್ರಭು ದೇವಸ್ಥಾನ ಕಮಿಟಿಯವರು ಕಾರ್ಯನಿರ್ವಹಿಸುತ್ತಿದ್ದು, ಅವರ ಈ ಕಾರ್ಯ ಶ್ಲಾಘನೀಯ ಎಂದರು.

ಪ್ರಭು ಹೊಸಮನಿ ಮಾತನಾಡಿದರು. ಕಲ್ಲನಗೌಡ ಬಿರಾದಾರ, ವಜ್ರಕಾಂತ ಹೂಗಾರ, ಅಶೋಕ ಕುಲಕರ್ಣಿ, ಯಲ್ಲಪ್ಪ ಸಾತಲಗಾಂವ, ಅರ್ಜುನ ಜಾಧವ, ಗುರುಬಾಳ ಪೂಜಾರಿ, ಜಲದಪ್ಪ ಪೂಜಾರಿ, ಅಶೋಕ ಬಳಬಟ್ಟಿ, ಭೀಮು ರಾಠೋಡ, ಅಣ್ಣಪ್ಪ ಅಹಿರಸಂಗ, ಸುಭಾಸ ಥೋರಾತ, ಬಸವರಾಜ ಜಾಧವ, ಉಮೇಶ ಬಳಬಟ್ಟಿ, ಭೀಮ ವಾಲೀಕಾರ, ಉಮೇಶ ಚವ್ಹಾಣ, ರಾಜು ಚಾಬುಕಸವಾರ, ಪ್ರಭು ಚಾಬುಕಸವಾರ, ಜಕ್ಕಪ್ಪ ಪೂಜಾರಿ, ಸದಾಶಿವ ಅಹಿರಸಂಗ, ವಿಷ್ಣು ವಾಘಮೋರೆ ಇದ್ದರು. ಏಳು ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-26-1247030877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.