ಇಂಡಿ: ‘ಮಠ, ಮಾನ್ಯಗಳಿಂದಲೇ ಇಂಡಿ ತಾಲ್ಲೂಕು ಪ್ರಸಿದ್ಧಿ ಪಡೆದಿದೆ. ಹಲವಾರು ಮಠಗಳು ಅನ್ನ ಪ್ರಸಾದ, ಉಚಿತ ಶಿಕ್ಷಣ, ಹುಣ್ಣಿಮೆ ಕಾರ್ಯಕ್ರಮದಂತಹ ಸತ್ಸಂಗ ಕಾರ್ಯಕ್ರಮಗಳಿಂದ ಸಂಸ್ಕಾರ ನೀಡುತ್ತಿವೆ. ಸತ್ಸಂಗದಿಂದ ಜೀವನದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಶಿರಶ್ಯಾಡದ ಅಭಿನವ ಮುರಘೇಂದ್ರ ಸ್ವಾಮೀಜಿ ಹೇಳಿದರು.

ನಗರದ ಶಿರಶ್ಯಾಡದ ಅಭಿನವ ಮುರಘೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಗುರುವಾರ ನಡೆದ ಪ್ರಥಮ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸನಾತನ ಧರ್ಮದಲ್ಲಿ ವೇದ ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಪುಣ್ಯ ಕಥೆಗಳು ಮಾನವನಿಗೆ ಸನ್ಮಾರ್ಗದಲ್ಲಿ ತೊಡಗಿಸಲು ಉಪಯೋಗವಾಗಿವೆ. ಅಂತಹವುಗಳ ಸಾರವನ್ನು ತಿಳಿಸಿಕೊಡಲು ಪ್ರತೀ ತಿಂಗಳೂ ಹುಣಿಮೆ ದಿನ ಮಠದಲ್ಲಿ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಇತಿಹಾಸ, ಸಾಂಸ್ಕೃತಿಕ, ಧಾರ್ಮಿಕ, ಭಜನೆ, ಪುರಾಣ ಹಾಗೂ ಪ್ರವಚನ ಮಾಡುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ’ ಎಂದರು.

ಶ್ರೀಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ‘ಧಾರ್ಮಿಕತೆಯನ್ನು ಬೆಳೆಸಿಕೊಂಡು ಹೋಗಲು ಇಂದಿನ ಯುವ ಪೀಳಿಗೆ ಮುಂದಾಗಬೇಕಿದೆ. ಯಾವುದೇ ಕೆಲಸ ಇರಲಿ ಕೀಳಾಗಿ ನೋಡದೆ ಕಾರ್ಯಗಳನ್ನು ಮಾಡಿದಾಗ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ. 12ನೆಯ ಶತಮಾನದಲ್ಲಿಯೇ ಬಸವಣ್ಣನವರು ಕಾಯಕದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ದುಡಿದು ತಿನ್ನುವವರಿಗೆ ಭೇದ ಇಲ್ಲ, ಕಾಯಕವೇ ಶ್ರೇಷ್ಠ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಡಿನ ಸಂಸ್ಕೃತಿ ಕಾಪಾಡಿಕೊಂಡು ಹೋಗಬೇಕಿದೆ. ಸಮಾನತೆ ಪರಂಪರೆಯಲ್ಲಿ ಮಠಗಳು ಕಾರ್ಯನಿರ್ವಹಿಸುತ್ತಿದ್ದು ಇದನ್ನು ಅರಿತು ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದರು.

ಮುಖ್ಯಗುರು ರಾಘವೇಂದ್ರ ಕುಲಕರ್ಣಿ ಉಪನ್ಯಾಸ ನೀಡಿದರು. ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಉದ್ದಿಮೆದಾರ ಅನೀಲಪ್ರಸಾದ ಏಳಗಿ ಇದ್ದರು.

60 ವರ್ಷ ಪೂರೈಸಿದ ರಾಚಮ್ಮ ಬಸಯ್ಯ ನಿಂಬರಗಿಮಠ, ಚೆನ್ನಮ್ಮ ಚಂದ್ರಕಾಂತ ಉಪ್ಪಿನ, ಸುಗಲಾಬಾಯಿ ಭೀಮನಗೌಡ ಪಾಟೀಲ, ಮಹಾದೇವಿ ಚನ್ನಗೌಡ ಪಾಟೀಲ, ಪಾರ್ವತಿ ಶಂಕರ ಮಜ್ಜಗಿ ದಂಪತಿಗಳನ್ನು ಸನ್ಮಾನಿಸಲಾಯಿತು. ರಾಜೇರ್ಶವರಿ ಕ್ಷತ್ರಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಬುರಕುಲೆ ನಿರೂಪಿಸಿದರು. ಬಾಬು ಹಂಗಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-26-29739061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.