ಬೈಲಹೊಂಗಲ: ‘ಜಗತ್ತಿನ ಬಹುತೇಕ ದೇಶಗಳು ಭಾರತೀಯ ಸಂಸ್ಕೃತಿಯತ್ತ ಗಮನ ಹರಿಸುತ್ತಿವೆ. ಇಲ್ಲಿನ ಸಂಸ್ಕಾರ, ಸಂಸ್ಕೃತಿ, ಪದ್ಧತಿ ಅಳವಡಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ತಾರೀಹಾಳ ಅಡವಿ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ನಗರದ ಚನ್ನಮ್ಮ ಉಪನಗರದಲ್ಲಿ ದಾನಮ್ಮದೇವಿ ದೇವಸ್ಥಾನ 17ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಶ್ರೀಗುರು ಸಿದ್ಧಾರೂಢರ ಚರಿತ್ರೆಯ ಆಧಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

‘ಭಾರತದ ಸಂಸ್ಕೃತಿ ಜಗತ್ತಿಗೆ ಮಾರ್ಗದರ್ಶಿಯಾಗಿದೆ. ಹೋಮಹವನ, ಯೋಗ, ಆಯುರ್ವೇದ, ಮಂತ್ರ ಪಠಣ ಸೇರಿದಂತೆ ಹಲವು ಆಚರಣೆಗಳು ಜಗತ್ತಿನಾದ್ಯಂತ ಪ್ರಚಲಿತಗೊಂಡು ಆಚರಣೆ ಮಾಡುತ್ತಿರುವುದು ಭಾರತೀಯ ಸಂಸ್ಕೃತಿಗೆ ಜಗತ್ತು ನೀಡಿದ ಗೌರವವಾಗಿದೆ’ ಎಂದರು.

‘ಯುವಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ವಿಷಾದನೀಯ. ಪಾಲಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ನಮ್ಮ ಆಚಾರ, ವಿಚಾರದ ಕುರಿತು ಮಾರ್ಗದರ್ಶನ ಮಾಡುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಬೇಕು’ ಎಂದು ತಿಳಿಸಿದರು.

ಮುನವಳ್ಳಿ ನಿತ್ಯಾನಂದ ಆಶ್ರಮದ ಮುಕ್ತಾನಂದ ಸ್ವಾಮೀಜಿ ಪ್ರವಚನ ನೀಡಿದರು. ದೇವಸ್ಥಾನ ಕಮಿಟಿ ಅಧ್ಯಕ್ಷ ಪ್ರಮೋದ ಕುಮಾರ ವಕ್ಕುಂದಮಠ, ಕುಮಾರ ರೇಶ್ಮಿ, ಈಶ್ವರ ಶಿಲ್ಲೇದಾರ, ಮಹೇಶ ಅವಟಗಿ ದಂಪತಿ ಇದ್ದರು. ನಿವೃತ್ತ ಶಿಕ್ಷಕ ಜಿ. ಜಿ. ಸಾಲಿ ಸ್ವಾಗತಿಸಿದರು, ಎಸ್.ಎಂ. ರೊಟ್ಟಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-21-704390841

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.