ಜಮಖಂಡಿ: ‘ಸನಾತನ ಸಂಸ್ಕೃತಿಯ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು’ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.

ಅನಂತರಾವ ಸಾಬಡೆ ಮೈದಾನದ ಹೊಕ್ಕಳಭಾವಿ ಆವರಣದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮಗಳಲ್ಲಿ ವಟುಗಳಿಗೆ ಬ್ರಹ್ಮೋಪದೇಶ ನೀಡಿ ಮಾತನಾಡಿದರು.

‘ಹೆಣ್ಣುಮಕ್ಕಳಿಗೆ ಲಕ್ಷ್ಮೀ ಸೋಬಾನ ಪದ, ಹರಿಕಥಾಮೃತ ಸಾರ ಮುಂದಾವುಗಳ ಅಧ್ಯಯನ ಪಾರಾಯಣವನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಗಂಡು ಮಕ್ಕಳಿಗೆ ಆತ್ಮ ಉದ್ಧಾರಕ್ಕಾಗಿ ವೇದಾಧ್ಯಯನ, ದೇಹ ಪೋಷಣೆಗೆ ಲೌಕಿಕ ವಿದ್ಯೆ ಎರಡನ್ನೂ ಚನ್ನಾಗಿ ಕಲಿತು ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ವಾಗಬೇಕು, ಸೂರ್ಯನಿಂದ ಹೊರ ಪ್ರಪಂಚದ ಕತ್ತಲು ದೂರವಾಗುತ್ತದೆ. ಒಳಗಿರುವ ಅಜ್ಞಾನ ಎಂಬ ಕತ್ತಲನ್ನು ಹೋಗಲಾಡಿಸಲು ಸೂರ್ಯನಾರಾಯಣನ ಕೃಪೆ ಬೇಕು ಅದಕ್ಕೆ ಗಾಯತ್ರಿ ಮಂತ್ರದ ನಿರಂತರ ಅನುಷ್ಠಾನ ನಡೆಯಬೇಕು, ಸನಾತನ ಸಂಸ್ಕೃತಿಯ ಬಗ್ಗೆ ತಿಳಿಪಡಿಸಲು ಶಿಬಿರಗಳನ್ನು ಏರ್ಪಡಿಸಬೇಕು ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿರಬೇಕು’ ಎಂದರು.

ರಾಜೇಂದ್ರ ಹುಲ್ಯಾಳಕರ ಪ್ರಾಸ್ತಾವಿಕವಾಗಿ ಮಾತನಾಡಿ, ‘5 ವರ್ಷಗಳಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಸಮಾಜದವರ ಸಹಕಾರದಿಂದ 75ಕ್ಕೂ ಹೆಚ್ಚು ವಟುಗಳಿಗೆ ಉಪನಯನ ಮಾಡಿಸಿ, ಯತಿಗಳಿಂದ ಅನುಗ್ರಹ, ಬ್ರಹ್ಮೋಪದೇಶ ಮಾಡಿಸಲಾಗಿದೆ. ಈ ಬಾರಿ 20 ವಟುಗಳಿಗೆ ಉಪನಯನ ನಡೆಸಲಾಗುವುದು’ ಎಂದರು.

ಶುಭಶ್ರೀ ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಮೈಗೂರ ಆಚಾರ ಅನಿಸಿಕೆ ಹಂಚಿಕೊಂಡರು. ಎಸ್.ಎಲ್ ಕುಲಕರ್ಣಿ ನಿರೂಪಿಸಿದರು. ಪ್ರವೀಣ ಕುಲಕರ್ಣಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-19-992378314

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.