ಜಮಖಂಡಿ: ಯುವಕರಲ್ಲಿ ಉತ್ತಮ ವಿಚಾರ, ಒಳ್ಳೆಯ ಚಿಂತನೆ ಹಾಗೂ ಧಾರ್ಮಿಕ ಭಾವನೆ ಬೆಳೆಸುವ ಉದ್ದೇಶದಿಂದ ಓಲೆಮಠ ಎಲ್ಲ ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸ್ತುತ್ಯಾರ್ಹವಾಗಿದೆ. ಧಾರ್ಮಿಕ ಭಾವನೆ ಬೆಳೆಸಿಕೊಂಡ ಯುವಕರು ದಾರಿ ತಪ್ಪುವುದಿಲ್ಲ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

ತಾಲ್ಲೂಕಿನ ತುಂಗಳ ಗ್ರಾಮದಲ್ಲಿ ಭಾನುವಾರ ಓಲೆಮಠದ ಆಶ್ರಯದಲ್ಲಿ ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪದೊಂದಿಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಕುರಿತು ಜನಜಾಗೃತಿ ಯಾತ್ರೆಯ ಏಳು ದಿನಗಳ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಓಲೆಮಠದ ಆನಂದ ದೇವರು ಮಾತನಾಡಿ, ದುಶ್ಚಟಗಳಿಗೆ ಬಲಿಯಾಗಿ ತಮ್ಮ ಶರೀರವನ್ನು ಹಾಳು ಮಾಡಿಕೊಂಡು ಕುಟುಂಬ ಮತ್ತು ಸಮಾಜಕ್ಕೆ ಕಂಟಕವಾಗಿರುವ ಯುವಕರ ಮನ ಪರಿವರ್ತನೆಗಾಗಿ ಓಲೆಮಠ ಶ್ರಮಿಸುತ್ತಿದೆ. ತಂಪು ಪಾನಿಯಗಳನ್ನು ಸೇವಿಸಿ ಶ್ರೀಮಂತರನ್ನೇ ಶ್ರೀಮಂತರನ್ನಾಗಿ ಮಾಡಬಾರದು. ಬದಲಾಗಿ ಎಳೆನೀರು, ಮಜ್ಜಿಗೆ ಸೇವಿಸಿ ರೈತರನ್ನು ಶ್ರೀಮಂತರನ್ನಾಗಿಸಬೇಕು. ರೈತರನ್ನು ಕೀಳಾಗಿ ಕಾಣದೆ ಗೌರವ ಕೊಡಬೇಕು. ಸರ್ಕಾರ ಕೈಬಿಟ್ಟರೂ ರೈತ ಕೈಬಿಡುವುದಿಲ್ಲ. ರೈತರ ರೈತ ಮಕ್ಕಳಿಗೆ ಹೆಣ್ಣು ಕೊಡಬೇಕು ಎಂದರು. ಮುಖಂಡ ಸುಶೀಲಕುಮಾರ ಬೆಳಗಲಿ ಮಾತನಾಡಿ, ಇಂದು ತಮ್ಮ ತಂದೆ-ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸುವ ಮಕ್ಕಳು ನಾಳೆ ತಾವೆ ಅನಾಥಾಶ್ರಮ ಸೇರಬೇಕಾಗಹುದು ಎಂದರು.

ಝುಂಜರವಾಡದ ಬಸವರಾಜ ಶರಣರು, ಮುಖಂಡ ರಮೇಶ ಕಲಶೆಟ್ಟಿ, ಕಲ್ಲಪ್ಪ ಗಿರಡ್ಡಿ, ಪರಮಾನಂದ ಗವರೋಜಿ, ಅರ್ಜುನ ದಳವಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-19-1985024914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.