ಜಮಖಂಡಿ: ‘ಭಗವಂತನ ಮೇಲೆ ಗಾಢವಾದ ಪ್ರೀತಿ, ಶ್ರದ್ಧೆ, ಗೌರವವಿಟ್ಟು ನಿಷ್ಠೆ ಮತ್ತು ಅಚಲವಾದ ನಿಜಭಕ್ತಿಯಿಂದ ಆರಾಧನೆ ಮಾಡುವವನು ನಿಜವಾದ ಭಕ್ತ’ ಎಂದು ಯಂಕಂಚಿಯ ಗುರುದೇವಾಶ್ರಮದ ಗುರುಪಾದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀಗುರುದೇವ ಸತ್ಸಂಗ ಮೇ 24ರ ಮಾಸಿಕ ಕಾರ್ಯಕ್ರಮದಲ್ಲಿ ‘ಷಟ್ಸ್ಥಲ: ಭಕ್ತ ಮತ್ತು ಭಕ್ತಿ’ ವಿಷಯ ಕುರಿತು ಮಾತನಾಡಿದರು.

12ನೇ ಶತಮಾನದ ಬಸವಾದಿ ಶಿವಶರಣರು ಕಟ್ಟಿಕೊಟ್ಟಿರುವ ‘ಷಟ್ಸ್ಥಲ’ವು ಸಾಧನೆಯ ಆರು ಮೆಟ್ಟಿಲುಗಳನ್ನು ಹೊಂದಿದೆ. ಭಕ್ತಸ್ಥಲ ಮೊದಲ ಮೆಟ್ಟಿಲಾಗಿದೆ. ಗುರು ಅಥವಾ ಭಗವಂತನ ಮೇಲೆ ಅಚಲವಾದ ನಂಬಿಕೆ, ಪ್ರೀತಿ, ವಿಶ್ವಾಸವಿಡುವುದನ್ನು ಭಕ್ತಿ ಎನ್ನಲಾಗುತ್ತದೆ ಎಂದರು.

ಹುಲ್ಯಾಳ ಶ್ರೀಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ ಮಾತನಾಡಿ, ‘ಷಟ್ಸ್ಥಲವು ಅದ್ಭುತವಾದ ಸಾಧನೆ ಪದ್ಧತಿಯಾಗಿದೆ. ಭಕ್ತಸ್ಥಲ ಸಾಧನೆಯಿಂದ ನನ್ನದೆನ್ನುವುದು ಏನೂ ಉಳಿಯುವುದಿಲ್ಲ. ನನ್ನ ದರ್ಶನ ನನಗೆ ಆಗುತ್ತದೆ. ನಾನು ಲಿಂಗ ಸ್ವರೂಪಿ, ಲಿಂಗಮಯ ಎನ್ನುವ ಭಾವ ಮೂಡುತ್ತದೆ’ ಎಂದರು.

ಬಸವಣ್ಣನವರ ನಿಜವಾದ ಅನುಯಾಯಿ ಆಗಬೇಕಾದರೆ ಷಟ್ಸ್ಥಲದ ಆರು ಮೆಟ್ಟಿಲುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಾಧನೆಯ ಮೊದಲ ಹೆಜ್ಜೆ ಇಡುವವನೆ ಭಕ್ತ. ಲಿಂಗವೇ ಸರ್ವಸ್ವ ಎನ್ನುವುದೇ ಭಕ್ತಿ ಎಂದರು.

ಶ್ರೀಗುರುದೇವಾಶ್ರಮದ ಭಕ್ತ ಯಲ್ಲಪ್ಪ ಶಿವಾಪುರ ಮಾತನಾಡಿದರು. ಹುಲ್ಯಾಳದ ನಿಜಗುಣಶಾಸ್ತ್ರೀ ಮಮದಾಪುರ ಹಾಗೂ ಶ್ರೀಮಠದ ವಿದ್ಯಾರ್ಥಿಗಳಿಂದ ಕೈಸನ್ನೆಯಿಂದಲೇ ಶಬ್ದಗಳನ್ನು ಗುರುತಿಸುವ ‘ತರ್ಕಶಾಸ್ತ್ರ ಜ್ಞಾನ’ ಪ್ರದರ್ಶನ ಜರುಗಿತು.

ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು, ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿರುವ ಹಿರಿಯರು, ವಿಶೇಷ ಸಾಧಕ ಕಲಾವಿದರು ಹಾಗೂ ಶ್ರೀಗುರುದೇವ ಸಂಗೀತ ಬಳಗದ ಕಲಾವಿದರನ್ನು ಸನ್ಮಾನಿಸಲಾಯಿತು.

ಯರಗಟ್ಟಿ ತಾಲ್ಲೂಕಿನ ಅಕ್ಕಿಸಾಗರ ಮಠದ ರುದ್ರೇಶ ಸ್ವಾಮೀಜಿ, ಗೋಕಾಕ ತಾಲ್ಲೂಕಿನ ತುಕಾನಟ್ಟಿ ಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-19-1808021699

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.