ಜೇವರ್ಗಿ: ‘ಭಗವಂತನ ಸೃಷ್ಟಿಯಲ್ಲಿ ಎಲ್ಲರೂ ಬದುಕಿ ಬಾಳುವ ಅವಕಾಶ ಕೊಟ್ಟಿದ್ದಾನೆ. ಸಾಧನೆಯಿಂದ ಶ್ರೇಯಸ್ಸು ಕಾಣಲು ಸಾಧ್ಯ. ಶ್ರಮ ಸಂಸ್ಕೃತಿಯಿಂದ ಬದುಕು ಉಜ್ವಲಗೊಳ್ಳುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.

ಯಡ್ರಾಮಿ ತಾಲ್ಲೂಕಿನ ಬೆಣ್ಣೂರು ಗ್ರಾಮದ ರಂಭಾಪುರಿ ಶಾಖಾ ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ ಮತ್ತು ಶಿವಲಿಂಗ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಪ್ರವಚನ ಪ್ರವೀಣ ಶಿವಲಿಂಗಯ್ಯ ಶಾಸ್ತ್ರಿ ಅವರು ಹಳ್ಳಿಹಳ್ಳಿಗೆ ಸಂಚರಿಸಿ ಭಕ್ತರಲ್ಲಿ ಜಾಗೃತಿ ಮೂಡಿಸಿ ಧರ್ಮ ಸಂಸ್ಕೃತಿಗಳನ್ನು ಪ್ರಸಾರಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಭಕ್ತರು ಭಕ್ತಿಯಿಂದ ಕೊಟ್ಟ ದಾನ ಧರ್ಮಗಳನ್ನು ಮಠದ ಅಭಿವೃದ್ಧಿಗಾಗಿ ಮತ್ತು ಭಕ್ತರ ಒಳಿತಿಗಾಗಿ ವಿನಿಯೋಗಿಸಿರುವುದು ಅವರಲ್ಲಿರುವಂಥ ಧರ್ಮ ನಿಷ್ಠೆಯನ್ನು ಕಾಣಬಹುದು. ಶ್ರೀ ಮಠ ಅಭಿವೃದ್ಧಿಯಾಗಿ ಭಕ್ತರಿಗೆ ಮಾರ್ಗದರ್ಶನ ನೀಡಲಿ’ ಎಂದರು.

ಆಲೂರು ಹಿರೇಮಠದ ಕೆಂಚವೃಷಭೇಂದ್ರ ಶಿವಾಚಾರ್ಯರು, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಸೇರಿದಂತೆ ಅನೇಕ ಸ್ವಾಮಿಗಳು ಮಾತನಾಡಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಉದ್ಯಮಿ ಶಿವಶರಣಪ್ಪ ಸಿರಿ, ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಸಿದ್ದು ಸಾಹು ಅಂಗಡಿ, ಭಗವಂತ್ರಾಯ ಹಿರೇಮಠದ ಸಿದ್ದರಾಮಯ್ಯ ಸ್ವಾಮಿ, ಚಂದ್ರಶೇಖರ ಪುರಾಣಿಕ, ಹಣಮಂತ್ರಾಯಗೌಡ ಮಾಲಿಪಾಟಿಲ, ಭಗವಂತ್ರಾಯ ಬೆಣ್ಣೂರ, ಗೊಲ್ಲಾಳಪ್ಪ ನ್ಯಾವನೂರ, ಭಗವಮತ್ರಾಯ ಮೇಲದಂಟ್, ವಿಜಯಕುಮಾರ ಸೊಲ್ಲಾಪೂರ, ಭೀಮರಾಯ ನೆಲೋಗಿ, ಸಿದ್ದು ನಾಯ್ಕೋಡಿ, ಅಮೃತರಾಯಗೌಡ ಗುಡೂರ, ಬಿ.ಎಚ್.ಮಾಲಿಪಾಟೀಲ, ಯಮನಸಿಂಗ್ ಠಾಕೂರ ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಶಿವಲಿಂಗಯ್ಯ ಶಾಸ್ತ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಭಗವಂತ್ರಾಯ ಬೆಣ್ಣೂರ ನಿರೂಪಿಸಿ ವಂದಿಸಿದರು.

ಸಮಾರಂಭಕ್ಕೂ ಮುನ್ನ ಸಾರೋಟಿನಲ್ಲಿ ಮೆರವಣಿಗೆ ಜರುಗಿತು. ಕುಂಭ ಹೊತ್ತ, ಆರತಿ ಹಿಡಿದ ಮಹಿಳೆಯರು, ಪುರವಂತರರು ಮತ್ತು ಭಜನಾ ಮಂಡಳಿಯವರು ಪಾಲ್ಗೊಂಡು ಮೆರವಣಿಗೆಗೆ ಮೆರುಗು ತಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-31-2092486943

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.