ಕಡರನಾಯ್ಕನಹಳ್ಳಿ: ‘ಇಂದಿನ ಮಕ್ಕಳಲ್ಲಿ ನಮ್ಮ ದೇಶದ ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಸಮೀಪದ ಕಮಲಾಪುರ ಗ್ರಾಮದಲ್ಲಿ ಗುರುವಾರ ನೂತನವಾಗಿ ನಿರ್ಮಿಸಿರುವ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ, ಸ್ವಾಮಿಯ ಪ್ರಾಣ ಪ್ರತಿಷ್ಠಾನ ಹಾಗೂ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜಾತಿ ನಿಂದನೆ, ಶೋಷಣೆ ಮೆಟ್ಟಿ ನಿಂತು ಭಕ್ತಿಯೊಂದರಿಂದಲೇ ದೇವರನ್ನು ಮೆಚ್ಚಿಸಿ ತನ್ನೆಡೆಗೆ ಕರೆಸಿಕೊಂಡವರು ಭಕ್ತ ಕನಕದಾಸರು. ಅಂತಹ ಹಾಲುಮತ ಸಮುದಾಯದವರು ಇಂದು ಸಮುದಾಯ ಭವನ, ದೇವಸ್ಥಾನ ನಿರ್ಮಾಣ ಮಾಡಿದ್ದು, ಇದು ಎಲ್ಲ ಸಮುದಾಯಗಳಿಗೆ ಸದ್ಬಳಕೆಯಾಗಲಿ’ ಎಂದು ಆಶಿಸಿದರು.

‘ದೇವಸ್ಥಾನ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದಂತೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಬೆಳವಣಿಗೆಗೆ ಆದ್ಯತೆ ನೀಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಡಾ.ಪ್ರಭಾ ಅನಿಸಿಕೆ ವ್ಯಕ್ತಪಡಿಸಿದರು.

‘ಬೀರಲಿಂಗೇಶ್ವರ ದೇವರು ಭಂಡಾರ ಬೇಕು, ವಿಭೂತಿ ಬೇಕು ಎಂದು ಕೇಳುವುದಿಲ್ಲ. ಹಾಗಾಗಿ, ಭಂಡಾರ, ವಿಭೂತಿ ಎರಡನ್ನೂ ಬಳಸಿ ಎಂದು ಸಲಹೆ ನೀಡಿದ ಅವರು, ಮನಃ ಪರಿಶುದ್ಧತೆ ಮೇಲೆ ದೇವರು ಮೆಚ್ಚುತ್ತಾನೆ ವಿನಃ ಭಂಡಾರ, ವಿಭೂತಿಗಳಿಂದಲ್ಲ’ ಎಂದು ಸಾನ್ನಿಧ್ಯ ವಹಿಸಿದ್ದ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.

‘ಹಾಲುಮತ ಸಮಾಜಕ್ಕೆ ಕ್ರಿ.ಪೂ ಕಾಲದಿಂದಲೂ ಬವ್ಯಪರಂಪರೆ ಹೊಂದಿದೆ. ಹಾಲಮತದ ಬದುಕು ಸುಂದರವಾಗಿದ್ದು, ಈ ಕಾರಣಕ್ಕಾಗಿಯೇ ಹಾಲುಮತದ ಎಲ್ಲ ಸಂಪ್ರದಾಯಗಳನ್ನು ಹರಿಜನರು ಸಹ ಹಲವೆಡೆ ಪಾಲಿಸುತ್ತಾರೆ. ಶೋಷಿತರ, ಅಸ್ಪಶ್ಯರ, ನಿರ್ಗತಿಕರಿಗೆ ಧ್ವನಿ ಬಂದಾಗ ಮಾತ್ರ ಕನಕದಾಸರ ಆಶಯಗಳು ಈಡೇರಿದಂತಾಗುತ್ತದೆ. ಇಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನ ಎಲ್ಲ ಸಮುದಾಯಗಳಿಗೆ ದೊರೆಯುವಂತಾಗಬೇಕು’ ಎಂದು ಮಾದಾರ ಚೆನ್ನಯ್ಯ ಶ್ರೀಗಳು ಆಶಯ ವ್ಯಕ್ತಪಡಿಸಿದರು.

‘ದೇವರು ಯಾವುದೇ ಜಾತಿಗೆ ಸೇರಿದವರಲ್ಲ. ದೇವರನ್ನು ಜಾತಿಗೆ ಸೀಮಿತವಾಗಿಸಿದ್ದು ಮನುಜರು. ಸಕಲ ಜೀವ ರಾಶಿಗೆ ಒಳಿತುವ ಮಾಡುವವನೇ ದೇವರು. ದೇವಸ್ಥಾನದಲ್ಲಿ ನಿತ್ಯ ಪೂಜೆ, ಪುನಸ್ಕಾರ ಕೈಗೊಳ್ಳುವ ಮೂಲಕ ಇದೊಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿಸಬೇಕು. ಜೊತೆಗೆ ಸಮುದಾಯ ಭವನ ಧಾರ್ಮಿಕ ಕಾರ್ಯಗಳ ಜತೆಗೆ ಎಲ್ಲ ಸಮುದಾಯ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ಬಿಪಿ ಹರೀಶ್ ಹೇಳಿದರು.

ಶ್ರೀ ಬೀರೇಶ್ವರ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಕೆ.ರೇವಣಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಸ್. ರಾಮಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀನಿವಾಸ ನಂದಿಗಾವಿ, ಸಮಾಜದ ಮುಖಂಡ ಹುಲಿಗೇಶ್ ಸಿ.ಎನ್., ಗ್ರಾಮದ ಮುಖಂಡ ಕೆ.ಈಶ್ವರಪ್ಪ ಮಾತನಾಡಿದರು.

ಸಮಾರಂಭದಲ್ಲಿ ನಿವೃತ್ತ ಡಿಸಿ ವಿರೂಪಾಕ್ಷಪ್ಪ, ಷಣ್ಮುಖಪ್ಪ ಬಿ., ಕೆ. ದೊಡ್ಡಬಸಪ್ಪ, ಸಾಹಿತಿ ಷಣ್ಮುಖಪ್ಪ, ಮುಖಂಡರಾದ ಬಸವನಗೌಡ್ರು, ರಾಜಪ್ಪ, ಪಂಚಾಕ್ಷರಿ, ಭಾನುವಳ್ಳಿ ಕನ್ನಪ್ಪ, ಮಲ್ಲಿಕಾರ್ಜುನ್, ಎಂ. ವಾಸು ಇದ್ದರು.

ಉಪನ್ಯಾಸಕ ಬಿ.ಎಸ್. ಕುಬೇಂದ್ರಪ್ಪ ಸಂಪಾದಕತ್ವದಲ್ಲಿ ಪ್ರಕಟಿತ ‘ಶ್ರೀ ಬೀರೇಶ್ವರ ಚರಿತ್ರೆ’ ಪುಸ್ತಕ ಬಿಡುಗಡೆ ಮಾಡಲಾಯಿತು. ಉಮೇಶ್ ಪ್ರಾರ್ಥನಾ ಗೀತೆ ಹಾಡಿದರು. ಬಿ.ಬಿ. ಮಲ್ಲೇಶ್ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-43-550845914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.