ಕಡರನಾಯ್ಕನಹಳ್ಳಿ: ತೀರ್ಥ ಕ್ಷೇತ್ರಗಳ ದರ್ಶನ ಬದುಕಿನಲ್ಲಿ ಸಂವೇದನಾಶೀಲತೆ, ಸಂಸ್ಕೃತಿಯನ್ನು ರೂಢಿಸುತ್ತದೆ. ಸಂತ್ಸಂಗ ಸರ್ವರಲ್ಲೂ ಬಾಂಧವ್ಯ ರೂಪಿಸುತ್ತದೆ ಎಂದು ಯೋಗಾನಂದ ಶ್ರೀ ಅಭಿಪ್ರಾಯಪಟ್ಟರು.

ಯಲವಟ್ಟಿ ಗ್ರಾಮದ ಗುರು ಸಿದ್ದಾಶ್ರಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮ್ಮ ಹಿರಿಯರನ್ನು ಗೌರವದಿಂದ ಕಾಣಬೇಕು ಎಂಬುದನ್ನು ಸತ್ಸಂಗ ತಿಳಿಸುತ್ತದೆ. ಮಠದ 32 ಭಕ್ತರು ಸುಬೇದಾರ್ ಶಿವಕುಮಾರ್ ನೇತೃತ್ವದಲ್ಲಿ ಕಾಶಿ ಯಾತ್ರೆ ಮುಗಿಸಿ ಸತ್ಸಂಗದಲ್ಲಿ ಪಾಲ್ಗೊಂಡಿದ್ದಾರೆ. ಅವರು ಮಠದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದಾರೆ. ಎಲ್ಲರೂ ಕಾಯಕ ಮಾಡಬೇಕು, ದುಡಿಮೆಯ ಅಲ್ಪ ಭಾಗವನ್ನು ಸತ್ಕಾರ್ಯಕ್ಕೆ ಬಳಸಬೇಕು ಎಂಬುದು ಸತ್ಸಂಗ ನೀತಿಯಾಗಿದೆ’ ಎಂದು ಹೇಳಿದರು.

ಆಧ್ಯಾತ್ಮ ಬದುಕಿನಲ್ಲಿ ಪ್ರಾಮಾಣಿಕತೆ ಮೂಡಿಸುತ್ತದೆ. ವೃತ್ತಿಯಲ್ಲಿನ ಪ್ರಾಮಾಣಿಕತೆಯಿಂದ ಭ್ರಷ್ಟಾಚಾರ ದೂರಾಗುತ್ತದೆ. ಜಗತ್ತಿಗೆ ಭಾರತದ ಸಂಸ್ಕೃತಿ, ಸಾಂಸ್ಕೃತಿಕ ಕಲೆಗಳು, ಆಚಾರ, ವಿಚಾರಗಳು ಮಾದರಿಯಾಗಿವೆ ಎಂದು ಆಧ್ಯಾತ್ಮ ಚಿಂತಕ ಡಿ. ಸಿದ್ದೇಶ್ ಅಭಿಪ್ರಾಯಪಟ್ಟರು.

ಆದಾಪುರ ಗ್ರಾಮದ ಉದ್ಯಮಿ ವಿಜಯಕುಮಾರ್, ಹನಗವಾಡಿ ಶರಣಪ್ಪಯ್ಯ, ಹೊಸಮನಿ ಮಲ್ಲಿಕಾರ್ಜುನ್ ಮಾತನಾಡಿದರು. ಶನೈಶ್ಚರ, ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಸಿದ್ದಾರೂಢ ಕತೃ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ಪೂಜಾಲಂಕಾರ ಮಾಡಲಾಗಿತ್ತು. ನಂತರ ಶ್ರೀಗಳ ಸಾಂಪ್ರದಾಯಿಕ ಕಿರೀಟ ಪೂಜೆ ವಿಜೃಂಭಣೆಯಿಂದ ನಡೆಯಿತು.

ಭಜನಾ ತಂಡಗಳ ಸದಸ್ಯರು ಸುಶ್ರಾವ್ಯವಾಗಿ ಹಾಡಿದರು. ಕುಂಬಳೂರು ಕುಬೇರಪ್ಪ ಸಿದ್ದಾರೂಢ ಸಾಹಿತ್ಯವನ್ನು ವಾಚಿಸಿದರು. ವಿಎಸ್ಎಸ್ಬಿಎನ್ ಮುಖ್ಯ ಕಾರ್ಯನಿರ್ವಾಹಕ ಶೇಖರ್ ಕಾರ್ಯಕ್ರಮ ನಡೆಸಿಕೊಟ್ಟರು. ನಿವೃತ್ತ ಸುಬೇದಾರ್ ಶಿವಕುಮಾರ್, ಮಲ್ಲಾಡ್ ಕೃಷ್ಣಪ್ಪ, ಮಾಗೋಡು ಸಿದ್ದಪ್ಪ, ಹೊಸಮನಿ ಮಲ್ಲಪ್ಪ, ಡಿ. ರಾಜಪ್ಪ, ಹೊರಟ್ಟಿ ಕರಿಬಸಪ್ಪ, ಭೂ ನ್ಯಾಯ ಮಂಡಳಿ ಸದಸ್ಯ ಕುಂಬಳೂರು ವಾಸು, ಮಾಳಗಿ ಮಲ್ಲೇಶಪ್ಪ, ಕರಿಬಸಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್, ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ವಿ. ನಾಗೇಂದ್ರಪ್ಪ ಮತ್ತು ವಿವಿಧ ಗ್ರಾಮಗಳ ಭಕ್ತರು ಸೇರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-43-550640884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.