ಕಡೂರು: ‘ಧರ್ಮ, ಭಾಷೆ, ಸಂಸ್ಕೃತಿ.. ಹೀಗೆ ವಿವಿಧತೆಯಲ್ಲಿ ಏಕತೆಯನ್ನು ಪಸರಿಸುವ ಪರಿಮಳದ ಹೂಗಳ ಸಹಬಾಳ್ವೆಯೇ ಭಾರತದ ಆತ್ಮವಾಗಿದೆ’ ಎಂದು ನಿವೃತ್ತ ಪ್ರಾಂಶುಪಾಲ ಗಫಾರ್ ಬೇಗ್ ನುಡಿದರು.

ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ‘ಧರ್ಮ ಸಾಮರಸ್ಯ- ಸಾಹಿತ್ಯದೃಷ್ಟಿ’ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಸುಮಾರು 5 ಸಾವಿರ ವರ್ಷಗಳ ಹಿಂದೆ ಅಸ್ತಿತ್ವ ಕಂಡುಕೊಂಡ ಸನಾತನ ಧರ್ಮವು ಸಾಮರಸ್ಯ ಮತ್ತು ಸಹಬಾಳುವಿಕೆಯನ್ನು ಜನರಿಗೆ ಕಲಿಸುವಲ್ಲಿ ಯಶಸ್ವಿಯಾಗಿದೆ. ಸಂಸ್ಕೃತಿ, ಭಾಷೆ, ಧರ್ಮ ವಿಭಿನ್ನವಿದ್ದರೂ ಕೂಡಿ ಬಾಳುವುದು ಭಾರತೀಯರಲ್ಲಿ ಹಾಸು ಹೊಕ್ಕಾಗಿದೆ. ಪರಂಪರೆಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಆ ಚೌಕಟ್ಟನ್ನು ಮೀರದಿರುವುದೇ ಧರ್ಮ. ಸಮನ್ವಯ, ಪ್ರೀತಿ ಮತ್ತು ಸಾಮರಸ್ಯದಿಂದ ಜನರು ಬದುಕಲು ಅವಕಾಶ ಮಾಡಿಕೊಟ್ಟಿರುವುದೇ ಭಾರತದ ವೈಶಿಷ್ಟ್ಯವಾಗಿದೆ ಎಂದು ತಿಳಿಸಿದರು.

ಗೋಷ್ಠಿಯ ನೇತೃತ್ವ ವಹಿಸಿದ್ದ ತರೀಕೆರೆಯ ಕನ್ನಡಶ್ರೀ ಭಗವಾನ್, ‘ಮನುಷ್ಯರ ನಡುವೆ ಸದಾಚಾರ, ಸನ್ನಡತೆ ಬಿತ್ತುವುದೇ ಸನಾತನ ಧರ್ಮದ ವಿಶೇಷತೆ. ಧರ್ಮವು ಭಾಷೆ- ಕಾಲ-ಸ್ಥಳಗಳ ಸನ್ನಿವೇಶದಿಂದ ಮತಗಳ ಹುಟ್ಟುವಿಕೆಗೆ ಕಾರಣವಾಗಿದೆ. ಮತ- ಪಂಥ- ಆಚಾರ ಎಲ್ಲದರ ಅನುಸರಿಸುವಿಕೆಯ ನಡುವೆಯೂ ಮಾನವತೆ ಮತ್ತು ಮನುಷ್ಯತ್ವವೇ ಮುಖ್ಯವಾಗಿದೆ. ಸರಿಯಾದ ಮಾರ್ಗದರ್ಶಕರಿಲ್ಲದೆ ಸಮಾಜ ಅಧಃಪತನದತ್ತ ಸಾಗುತ್ತಿದ್ದು, ಇದರಿಂದ ಧರ್ಮಕ್ಕೂ ಚ್ಯುತಿ ಉಂಟಾಗುವ ಅಪಾಯವಿದೆ. ಆದ್ದರಿಂದ ನಾವು ಮನಸ್ತಾಪಗಳನ್ನು ಹೊರಗಿಟ್ಟು ಸಹಬಾಳ್ವೆಗೆ ಹೆಚ್ಚು ಒತ್ತುಕೊಟ್ಟು ಎಲ್ಲರೊಳಗೆ ಒಂದಾಗಿ ಬಾಳಬೇಕು’ ಎಂದರು.

‘ಸಾಹಿತ್ಯದ ಕಣ್ಣಲ್ಲಿ ಧರ್ಮದ ಸ್ವರೂಪ’ ವಿಷಯವಾಗಿ ಉಪನ್ಯಾಸ ನೀಡಿದ ಚಟ್ನಳ್ಳಿ ಮಹೇಶ್, ‘ಮಾನವರಾಗಿ ನಮಗೆ ಕಾನೂನು ಮತ್ತು ಸಮಾಜದ ಭಯ, ಜತೆಗೆ ಮನಸ್ಸಾಕ್ಷಿಯ ಭಯ ಇದ್ದರೆ ಮಾತ್ರ ನಾವು ಉತ್ತಮ ಮನುಷ್ಯರಾಗಲು ಸಾಧ್ಯ. ಬಸವಣ್ಣನವರ ಸಪ್ತಶೀಲಗಳ ಅನುಸರಿಸುವಿಕೆಯಿಂದ ಈ ರೀತಿಯ ಬದುಕು ಸಾಧ್ಯವಾಗುತ್ತದೆ’ ಎಂದರು.

ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ, ‘ದುಷ್ಟರ ಕ್ರಿಯೆಗಿಂತ ಸಜ್ಜನರ ನಿಷ್ಕ್ರಿಯತೆ ಅಪಾಯಕಾರಿ. ಇದರಿಂದ ಸಮಾಜದ ದೃಷ್ಟಿಕೋನವೇ ಬದಲಾಗುತ್ತಿದೆ. ನಮ್ಮ ಸಂಸ್ಕೃತಿಯಾದ ಜನಪದ, ಮಹಾಭಾರತ, ರಾಮಾಯಣಗಳು ಸಮಾಜವನ್ನು ಸಾಹಿತ್ಯಕ ದೃಷ್ಟಿಯಿಂದ ಬದಲಿಸುವ ಮಾನದಂಡಗಳನ್ನು ರೂಪಿಸಿವೆ. ನಮ್ಮ ಸಂಸ್ಕೃತಿ ಹಬ್ಬುವ ಬೆಳಕಾಗಬೇಕು. ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕು’ ಎಂದರು.

ಬಿ.ಟಿ. ಗಂಗಾಧರ ನಾಯ್ಕ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷೆ ಎಂ. ಜಯಮ್ಮ, ಅಜ್ಜಂಪುರದ ಮಧು ಮಾಲತಿ, ಕೆ.ಎಂ. ಸೋಮಶೇಖರ, ಗುರುರಾಜ ಹಾಲ್ಮಠ್, ಕಸಾಪ ತಾಲ್ಲೂಕು ಅಧ್ಯಕ್ಷ ಎಸ್. ಪರಮೇಶ್, ವೈ.ಎಂ. ತಿಪ್ಪೇಶ್, ಮರುಗುದ್ದಿ ಮನು, ಕಾಂತರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-126-1771173549

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.