ಕಾಗವಾಡ: ‘ಗಡಿ ಭಾಗದ ಕವಲಗುಡ್ಡ ಗ್ರಾಮದಲ್ಲಿ ಸಾವಿರಾರು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಧಾರ್ಮಿಕ ಕಾರ್ಯಕ್ರಮ ಕೈಗೊಂಡು ಸುತ್ತಲಿನ ಗ್ರಾಮಗಳ ಜನರನ್ನು ಧರ್ಮದ ಹಾದಿಯಲ್ಲಿ ಸಾಗುವ ಹಾಗೆ ಅಮರೇಶ್ವರ ಮಹಾರಾಜರು ಮಾಡುತ್ತಿದ್ದಾರೆ’ ಎಂದು ಮಖಣಾಪುರ ಸೋಮಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಕವಲಗುಡ್ಡ ಸಿದ್ಧಯೋಗಿ ಸಿದ್ಧಾಶ್ರಮದಲ್ಲಿ ಈಚೆಗೆ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರ ಗುರು ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ 7 ದಿನಗಳ ಕನಕ-ಬಸವ ಭಾವ ಬೆಳಕು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಚಿಂತಕ ವೀರೇಶ ಪಾಟೀಲ ಮಾತನಾಡಿ, ‘ಕನಕದಾಸರ ಮತ್ತು ಬಸವೇಶ್ವರರ ಸಂದೇಶಗಳ ಸಾರವನ್ನು ಎಲ್ಲರಿಗೂ ತಿಳಿಸುವುದಕ್ಕಾಗಿ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಈ ಕಾರ್ಯಕ್ರಮ ಹಮ್ಮಿಕೊಂಡು ಮನುಕುಲದ ಏಳಿಗೆಯನ್ನು ಬಯಸಿರುವರು’ ಎಂದು ಹೇಳಿದರು. ಅಮರೇಶ್ವರ ಮಹಾರಾಜರು, ಜೋಕಾನಟ್ಟಿ ಬಿಳಿಯಾಣಿಸಿದ್ದ ಮಹಾರಾಜರು, ಹಿಪ್ಪರಗಿ ಸಿದ್ಧಾರೂಢ ಶರಣರು, ಕೋಳಿಗುಡ್ಡ ಸ್ವರೂಪಾನಂದ ಸ್ವಾಮೀಜಿ, ಯಾದವಾಡ ಸಿದ್ದೇಶ್ವರ ಸ್ವಾಮೀಜಿ, ಬಾಡಗಿ ಬನಸಿದ್ದ ಮಹಾರಾಜರು ಇದ್ದರು. ಭಾಗ್ಯಶ್ರೀ ಕಾಳೆಗೋಳ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-21-285238447

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.