ಕಲಬುರಗಿ: ‘ಮಹಾತ್ಮ ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಈ ದೇಶದ ಎರಡು ಕಣ್ಣುಗಳು ಹಾಗೂ ಮಹಾನ್ ಚೇತನಗಳು. ಅವರ ಜಯಂತಿ ಅದ್ದೂರಿ ನಡೆಯುತ್ತಿದ್ದು, ಅರ್ಥಪೂರ್ಣವಾಗಬೇಕಿದೆ’ ಎಂದು ಚಿಂತಕಿ ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.

ನಗರದ ಜಗತ್ ವೃತ್ತದ ಬಸವೇಶ್ವರ ಮೂರ್ತಿಯ ಹಿಂದಿರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ 893ನೇ ಬಸವ ಜಯಂತಿ ಅಂಗವಾಗಿ ಗುರುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಸವಣ್ಣರದ್ದು ಎಲ್ಲ ಸಮುದಾಯವರನ್ನೂ ಜೋಡಿಸಿದ ಸೂಜಿಯಂಥ ವ್ಯಕ್ತಿತ್ವ. ಬಸವಾದಿ ಶರಣರ ತತ್ವ ಸಿದ್ಧಾಂತದೆಡೆಗೆ ಜೆನ್–ಜಿಗಳನ್ನು ಸೆಳೆಯುವ ಅಗತ್ಯವಿದೆ. ಈ ಮಹತ್ವದ ಸಿದ್ಧಾಂತದೆಡೆಗೆ ಯುವಕರು–ಯುವತಿಯರನ್ನು ಆಕರ್ಷಿಸಲು, ಅವರ ಆಲೋಚನಾ ಲಹರಿಗೆ ಸಂವೇದಿಸಬಲ್ಲ ಹೊಸ ವಿನ್ಯಾಸಗಳನ್ನು ಸೃಷ್ಟಿಸಬೇಕಿದೆ’ ಎಂದು ಪ್ರತಿಪಾದಿಸಿದರು.

‘ವಚನಗಳು ಸೇರಿದಂತೆ ಯಾವುದೇ ಧರ್ಮಗಳ ತತ್ವ–ಸಿದ್ಧಾಂತಗಳನ್ನು ಧಾರ್ಮಿಕ ಚೌಕಟ್ಟಿನೊಳಗೆ ಕಟ್ಟಿಹಾಕಿದ್ದಾರೆ. ಅದನ್ನು ಸಾಮಾಜಿಕ ವಲಯ, ನಿತ್ಯದ ಉಪಯೋಗಿ ವಲಯ, ಅವರ ಬದುಕಿನ ಸಮಸ್ಯೆಗಳ ವಲಯಕ್ಕಾಗಲಿ ತೆಗೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ತತ್ವ–ಸಿದ್ಧಾಂತಗಳು ಬರೀ ಭಾವನಾತ್ಮಕವಾಗಿ, ಶ್ರದ್ಧಾತ್ಮಕವಾಗಿ ಬೇಕು ಎನಿಸುತ್ತಿದೆಯೇ ಹೊರತು ಬದುಕಿನ ಅನಿವಾರ್ಯ ಎಂದು ಅನಿಸುತ್ತಿಲ್ಲ’ ಎಂದು ವಿಶ್ಲೇಷಿಸಿದರು.

‘ವಚನ ಸಾಹಿತ್ಯ ಮತ್ತು ಉದ್ಯೋಗ, ವಚನ ಸಾಹಿತ್ಯ ಮತ್ತು ಬಡತನ, ವಚನ ಸಾಹಿತ್ಯ ಮತ್ತು ಹಸಿವು, ವಚನ ಸಾಹಿತ್ಯ ಮತ್ತು ಶಿಕ್ಷಣ, ವಚನ ಸಾಹಿತ್ಯ ಮತ್ತು ಮಹಿಳಾ ಸಮಾನತೆ... ಇವೆಲ್ಲವುಗಳನ್ನು ಪ್ರಾಯೋಗಿಕವಾಗಿ ಅಳವಡಿಸಬೇಕಾದ ಅಗತ್ಯವಿದೆ’ ಎಂದರು.

‘ಲಿಂಗಾಯತರು ಸನಾತನಿಗಳಲ್ಲ, ಪುರಾತನಿಗಳು. ವಚನಗಳು ವೇದ ಭಂಜಕ. ವಚನ ಸಾಹಿತ್ಯ ಇನ್ನಷ್ಟು ಪ್ರಚಾರ, ಪ್ರಸಾರವಾದರೆ ಸನಾತನ ಧರ್ಮ ಮೂಲೆಗುಂಪಾಗುತ್ತದೆ. ವಹಿವಾಟಿನ ಮೂಲವಾಗಿರುವ ದೇವೋದ್ಯಮ ನಿಂತು ಹೋಗುತ್ತದೆ ಎಂಬುದು ಸನಾತನಿಗಳ ಆತಂಕ’ ಎಂದರು. ಸಾನ್ನಿಧ್ಯ ವಹಿಸಿದ್ದ ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಮಾತಾ ಪ್ರಭುಶ್ರೀ ಮಾತನಾಡಿದರು. ಜಯಂತ್ಯುತ್ಸವ ಸಮಿತಿಯ ಕಾರ್ಯಾಧ್ಯಕ್ಷ ಬಿ.ಜಿ.ಪಾಟೀಲ ಮಾತನಾಡಿದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಿ.ಆರ್.ಪಾಟೀಲ, ಸಮಿತಿಯ ಕಾರ್ಯದರ್ಶಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ವೇದಿಕೆಯಲ್ಲಿದ್ದರು. ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-34-598461504

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.