ಕಲಬುರಗಿ: ‘ಭಗವಂತನ ಅನುಗ್ರಹ ಪಡೆಯಲು ಪರಿಶುದ್ಧವಾದ ಭಕ್ತಿಯೇ ಅತ್ಯಂತ ಸುಲಭ ಉಪಾಯ’ ಎಂದು ವಿದ್ವಾಂಸ ಡಾ. ಕೃಷ್ಣ ಕಾಕಲವಾರ ತಿಳಿಸಿದರು.

ಅಧಿಕ ಮಾಸದ ಪ್ರಯುಕ್ತ ಕರುಣೇಶ್ವರ ನಗರದ ಜೈವೀರ ಹನುಮಾನ್ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪ್ರವಚನದಲ್ಲಿ ಅವರು ಮಾತನಾಡಿದರು.

ಭಕ್ತಿಯ ಸ್ವರೂಪ ಮತ್ತು ಭಕ್ತಿಯ ಮಹತ್ವ ವಿವರಿಸಿ, ‘ಜ್ಞಾನಿಯಾದವನು ಬಾಲ್ಯದಿಂದಲೇ ಭಾಗವತ ಧರ್ಮ ಅನುಸರಿಸಬೇಕು. ಮನುಷ್ಯ ಜನ್ಮವು ಅತ್ಯಂತ ದುರ್ಲಭವಾದದ್ದು, ಪುರುಷಾರ್ಥಗಳನ್ನು ಪಡೆಯುವುದಾದರೆ ಅದು ಮನುಷ್ಯ ದೇಹದಿಂದ ಮಾತ್ರ. ಭಗವಂತ ಒಲಿಯಲು ನಾವು ಪ್ರಾಮಾಣಿಕರಾದರೆ ಸಾಕು’ ಎಂದು ಹೇಳಿದರು.

ಪ್ರಮುಖರಾದ ಶೇಷಮೂರ್ತಿ ಅವಧಾನಿ, ರಾಮಾಚಾರ ನಗನೂರು, ವಿನುತ ಜೋಶಿ, ಆರ್.ಕೆ.ಕುಲಕರ್ಣಿ, ಪದ್ಮನಾಭಾಚಾರ್ಯ ಜೋಶಿ, ಜಗನ್ನಾಥಾಚಾರ್ಯ ಸಗರ್, ನರಸಿಂಗರಾವ್ ಕುಲಕರ್ಣಿ, ಶಾಮರಾವ್ ಕುಲಕರ್ಣಿ, ಶಂಕರರಾವ್ ಸಿಂದಗಿಕರ್, ಶಾಮಾಚಾರ್ಯ ವನದುರ್ಗ, ಅನಂತ ಚಿಂಚನಸೂರು, ಗುರುರಾಜ ಹಾಲಾವಿ, ಸಮೀರ್ ಕುಲಕರ್ಣಿ, ಶಶಿಧರ್ ಜೋಶಿ, ಲಕ್ಷ್ಮಿಕಾಂತ್ ಕುಲಕರ್ಣಿ, ಕಿಶನರಾವ್ ಕುಲಕರ್ಣಿ, ಚಿದಂಬರ ದೇಶಪಾಂಡೆ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-34-469993923

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.