ಕಲಬುರಗಿ: ‘ದಯೆ, ಕರುಣೆ, ಪ್ರೀತಿಗೆ ಮತ್ತೊಂದು ಹೆಸರೇ ಗೌತಮ ಬುದ್ಧ. ಅವರು ಬೋಧಿಸಿದ ಅಷ್ಟಾಂಗ ಮಾರ್ಗ ಇಂದಿನ ಅಗತ್ಯವಾಗಿದೆ’ ಎಂದು ಪ್ರಾಚಾರ್ಯ ಶಿವಶಂಕರರಾವ್ ಹೇಳಿದರು.

ನಗರದ ಚಂದ್ರಕಾಂತ ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯನಿಗೆ ಆಸೆ ಜಾಸ್ತಿ, ನೋಡಿದ್ದಲ್ಲವನ್ನೂ ಬಯಸುತ್ತಾನೆ. ಆದರೆ ಕಾಲಕ್ಕೆ ಪ್ರಕೃತಿಗೆ, ನೈಜತೆ ಜಾಸ್ತಿ, ಅದು ನಮಗೆ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟನ್ನೇ ಕೊಡುತ್ತದೆ. ಸಾಮರ್ಥ್ಯಕ್ಕೆ ತಕ್ಕಂತೆ ದುಡಿಯಬೇಕು ಅಗತ್ಯಕ್ಕೆ ತಕ್ಕಷ್ಟೇ ಪಡೆಯಬೇಕು; ಇದೇ ಬುದ್ಧನ ಸಿದ್ದಾಂತ’ ಎಂದರು.

‘ಅಳುಕಿಲ್ಲದ ನಡೆ, ಹುಳುಕಿಲ್ಲದ ಮನಸ್ಸು, ಮುಖವಾಡವಿಲ್ಲದ ವ್ಯಕ್ತಿತ್ವ, ಕಪಟವಿಲ್ಲದ ಸ್ನೇಹ, ಇವಿಷ್ಟೇ ಸಾಕಲ್ಲವೇ ಉತ್ತಮ ಜೀವನಕ್ಕೆ’ ಎಂದ ಅವರು, ‘ಬುದ್ಧನ ಜೀವನ ಸತ್ಯಗಳನ್ನು ಅನುಸರಿಸುವುದು ಇಂದಿನ ಅಗತ್ಯವಾಗಿದೆ. ಆದರ್ಶ, ಗುರಿ ಮತ್ತು ತತ್ವಗಳನ್ನು ಮರೆತರೆ ನಮಗೆ ಸೋಲುಂಟಾಗುತ್ತದೆ. ಯಾರೂ ಪರಿಶುದ್ಧರಲ್ಲ, ಯಾರೂ ಪರಿಪೂರ್ಣರಲ್ಲ ಸಮಯ ಹಾಗೂ ಪರಿಸ್ಥಿತಿಗೆ ತಕ್ಕಂತೆ ಎಲ್ಲರೂ ಬದಲಾಗುತ್ತಾರೆ. ಇದೇ ಇಂದಿನ ವಾಸ್ತವ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-34-1106690855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.