ಕಲಬುರಗಿ: ‘ವಿವಿಧ ಕಾಲಘಟ್ಟಗಳಲ್ಲಿ ಆದರ್ಶ ಸಮಾಜ ಮತ್ತು ನಾಗರಿಕತೆ ಹುಟ್ಟಿಗೆ ಕಾರಣರಾದ ಅನೇಕ ತತ್ವಜ್ಞಾನಿಗಳು ಶಾಂತಿ, ಸತ್ಯ, ಪ್ರೀತಿ, ಕರುಣೆ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ. ಬುದ್ಧನ ವೈಜ್ಞಾನಿಕ ಚಿಂತನೆಗಳು ಮಾನವ ಕುಲಕ್ಕೆ ದಾರಿದೀಪವಾಗಿವೆ’ ಎಂದು ಕುಲಸಚಿವ ಪ್ರೊ.ರಮೇಶ್ ಲಂಡನಕರ್ ಹೇಳಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ರಾಧಾಕೃಷ್ಣ ಸಭಾಂಗಣದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧನ ಮೂರ್ತಿಗೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು.

‘ದ್ವೇಷ ಮತ್ತು ಅಸೂಯೆಯಿಂದ ಮನುಷ್ಯ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕಾರ್ಮಿಕರ ದಿನವಾದ ಇಂದು ದೇಶದ ಅಭಿವೃದ್ಧಿಯಲ್ಲಿ ಶ್ರಮಜೀವಿಗಳ ಪಾತ್ರವನ್ನು ಗುರುತಿಸುವ ಮಹತ್ವದ ದಿನವಾಗಿದೆ’ ಎಂದರು.

ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ‘ಬುದ್ಧ ಏಷ್ಯಾದ ಬೆಳಕು ಎಂದು ಕರೆದಿದ್ದಾರೆ. ಜಗತ್ತಿಗೆ ಬುದ್ಧನೇ ಬೆಳಕು ಎಂದು ಮನವರಿಕೆಯಾಗಿದೆ’ ಎಂದರು.

ವಾಣಿಜ್ಯ ನಿಕಾಯದ ಡೀನ್ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಮಾತನಾಡಿ, ‘ವಾಸ್ತವ ಸಮಾಜದಲ್ಲಿ ಧರ್ಮದ ಬಗ್ಗೆ ವಿಭಿನ್ನ ಅರ್ಥ ನೀಡಲಾಗುತ್ತಿದೆ. ಧರ್ಮವೆಂದರೆ ಶಾಂತಿ, ನೆಮ್ಮದಿ, ಸತ್ಯ, ನೀತಿ ಮತ್ತು ಮನುಷ್ಯ ಭಾವನೆ ಬೆಳೆಸುವುದು. ಸಂಘರ್ಷ, ಅಶಾಂತಿ, ತಲ್ಲಣ, ಭಯವನ್ನು ಬಿತ್ತುವುದಲ್ಲ’ ಎಂದರು.

ಪ್ರೊ. ದೇವಿದಾಸ ಮಾಲೆ, ಪ್ರೊ. ಜಿ.ಎಂ. ವಿದ್ಯಾಸಾಗರ್, ಪ್ರೊ. ಬಸವರಾಜ ಸಣ್ಣಕ್ಕಿ, ಹನುಮಂತ ಜಂಗೆ, ಅಶೋಕ ಜಿಗಳಮಡಿ, ಜಿ.ರಾಜಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿ.ಎಂ. ರುದ್ರವಾಡಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-34-198187119

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.