ಕಲಬುರಗಿ: ‘ಕಾಯಕವನ್ನು ಸತ್ಯ ಮತ್ತು ನಿಷ್ಠೆಯಿಂದ ಮಾಡಬೇಕು. ಸಮಾನತೆ ಮತ್ತು ಸಹಬಾಳ್ವೆಯ ಜೀವನ ಪ್ರತಿಯೊಬ್ಬ ವ್ಯಕ್ತಿಗೂ ಸಿಗಬೇಕು ಎಂಬುದು ಶರಣರ ಆಶಯವಾಗಿತ್ತು. ಶರಣರ ಜೀವನಾನುಭವ ಮತ್ತು ಪ್ರಖರ ಸಂದೇಶಗಳು ಸಮಾಜಕ್ಕೆ ಕೈಗನ್ನಡಿಯಾಗಿವೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಮತ್ತು ಕಾಯಕ ಶರಣರ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘12ನೇ ಶತಮಾನದ ಬಸವಣ್ಣ ಅವರಿಗಿಂತ ಹಿರಿಯ ಶರಣರಾದ ದೇವರ ದಾಸಿಮಯ್ಯ, ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರು ಸಮಾಜದ ನೈಜ ಸಂಗತಿಗಳನ್ನು ಕಂಡು ವಚನಗಳನ್ನು ರಚಿಸಿದ್ದಾರೆ’ ಎಂದರು.

ಲೇಖಕ ಶ್ರೀಶೈಲ ನಾಗರಾಳ ಮಾತನಾಡಿ, ‘12ನೇ ಶತಮಾನದ ಪೂರ್ವದಲ್ಲಿ ಜನಿಸಿದ ದೇವರ ದಾಸಿಮಯ್ಯ ಮನುಕುಲದ ಒಳಿತಿಗೆ ಜನಾಂದೋಲನ ಮಾಡಿದರು. ವಚನ ಚಳವಳಿಯಲ್ಲಿ ಜೀವಧ್ವನಿಯಾಗಿದ್ದರು. ನೇಯ್ಗೆ ಕಾಯಕದ ಮೂಲಕ ಇತರರಿಗೆ ಕಾಯಕ ಪ್ರಜ್ಞೆ ಮೂಡಿಸಿದರು. ಹಸಿವು ಮತ್ತು ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ದಾಸಿಮಯ್ಯ ಸ್ವಾವಲಂಬಿ ಬದುಕಿಗೆ ಮಾರ್ಗ ತೋರಿಸಿ, ಬಡತನ ನಿವಾರಿಸಿದರು’ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕಿ ಅಮೃತಾ ಕಟಕೆ ಮಾತನಾಡಿ, ‘ಶರಣ ಸಾಹಿತ್ಯ ಪರಂಪರೆಯಲ್ಲಿ ಕಾಯಕ ಶರಣರು ಶುದ್ಧ ಮತ್ತು ಸತ್ಯ ಕಾಯಕವನ್ನು ಜನಪ್ರಿಯಗೊಳಿಸಿದರು. ಆಡಳಿತ ಸೇವೆಯಷ್ಟೇ ಕಸ ಗುಡಿಸುವ ಕೆಲಸಕ್ಕೂ ಶ್ರೇಷ್ಠತೆ ಇದೆ. ಎಲ್ಲಾ ಕುಲ ಕಸುಬುಗಳಿಗೂ ತನ್ನದೇ ಆದ ಮಹತ್ವ ಇದೆ ಎಂಬುದನ್ನು ಕಾಯಕ ಶರಣರು ತಿಳಿಸಿದರು’ ಎಂದು ಅವರು ಹೇಳಿದರು.

ಕಾಯಕ ಶರಣರ ಜಯಂತ್ಯುತ್ಸವ ಸಮಿತಿ ಸಂಚಾಲಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ‘ಜಾಗತಿಕ ನೆಲೆಯಲ್ಲಿ ಬುದ್ಧನ ನಂತರ ಕಲ್ಯಾಣ ಕರ್ನಾಟಕದಲ್ಲಿ ಶರಣ ಚಳವಳಿ ನಡೆದಿದೆ. ಜನಪರ ಕಳಕಳಿ, ಮಾನವೀಯ ತತ್ವಗಳನ್ನು ಬಿತ್ತಲು ಕ್ರಾಂತಿ ನಡೆಯಿತು’ ಎಂದರು.

‘ಬಸವಣ್ಣನ ಮೂರ್ತಿ ಲಂಡನ್ನಲ್ಲಿ ಸ್ಥಾಪಿಸಲಾಗಿದೆ. ಅವರ ತತ್ವಗಳನ್ನು ಗೌರವಿಸಲಾಗುತ್ತಿದೆ. ಆದರೆ, ದೇಶದಲ್ಲಿ ಜಾತಿ, ವರ್ಗ ತಾರತಮ್ಯ ಹೆಚ್ಚಾಗಿದೆ. ವಿದ್ಯಾರ್ಥಿಗಳು ಶರಣರ ಚಿಂತನೆ ಮತ್ತು ಕಾಯಕ ಪ್ರಜ್ಞೆ ಮೂಲಕ ಶಾಂತಿ, ಪ್ರೀತಿ, ಸಮಾನ ಸಂದೇಶಗಳನ್ನು ಜಗತ್ತಿಗೆ ಸಾರಬೇಕು’ ಎಂದು ಹೇಳಿದರು.

ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ.ಭೈರಪ್ಪ, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ.ಟಿ.ಶಂಕರಪ್ಪ ಕುಲಸಚಿವ ಪ್ರೊ.ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಜಿ.ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕ ಉಪಸ್ಥಿತರಿದ್ದರು.

ಎಂ.ಬಿ.ಕಟ್ಟಿ ನಿರೂಪಿಸಿದರು. ದೇವರ ದಾಸಿಮಯ್ಯ ಜಯಂತ್ಯುತ್ಸವ ಸಮಿತಿ ಸಂಚಾಲಕ ಬಿ.ಎಂ.ರುದ್ರವಾಡಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-34-425931934

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.