ಕಲಬುರಗಿ: ‘ದೇವರು ಜ್ಞಾನ ಕೊಡಲ್ಲ; ಅದು ಪುಸ್ತಕಗಳ ಓದಿನಿಂದ ಸಿಗುತ್ತದೆ. ದೇವರ ಪೂಜೆ, ಪುನಸ್ಕಾರ ಬಿಟ್ಟು ಮಕ್ಕಳಿಗೆ ಪುಸ್ತಕಗಳನ್ನು ಓದಿಸಬೇಕು’ ಎಂದು ಜೇವರ್ಗಿ ತಾಲ್ಲೂಕಿನ ನೆಲೋಗಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಲಹೆ ನೀಡಿದರು.

ನಗರದ ಸಾಂಚಿ ನಗರದ ಪ್ರಬುದ್ಧ ಬುದ್ಧ ವಿಹಾರದಲ್ಲಿ ಭೀಮಶಕ್ತಿ ಯುವಕರ ಸಂಘ, ಪ್ರಬುದ್ಧ ಅಭಿವೃದ್ಧಿ ಸೇವಾ ಸಂಸ್ಥೆ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ ಹಾಗೂ ಸಮಸ್ತ ಬಡಾವಣೆಯ ನಾಗರಿಕರ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ದೇಶದಲ್ಲಿ ದೇವರುಗಳು ಪೂಜಾರಿಗಳ ಕೈಯಲ್ಲಿ ಆಡುಂಬೋಲ ಆಗಿವೆ. ಜೈಭೀಮ ಎನ್ನಬೇಕಿದ್ದ ಮಕ್ಕಳು ಜೈಶ್ರೀರಾಮ ಎನ್ನುತ್ತಿವೆ. ಮಕ್ಕಳಿಗೆ ತಿದ್ದಿ ಬುದ್ಧಿ ಹೇಳದ್ದಿದ್ದರೆ ಆಘಾತ ಕಾದಿದೆ’ ಎಂದು ಎಚ್ಚರಿಸಿದರು.

‘ಭಾರತ ಸಾವಿರ ವರ್ಷಗಳ ದಾಸ್ಯ ಅನುಭವಿಸಿದೆ. 800 ವರ್ಷ ಮೊಘಲರು ಆಳಿದರೆ, 200 ವರ್ಷ ಬ್ರಿಟಿಷರು ಆಡಳಿತ ನಡೆಸಿದ್ದಾರೆ. ಸಂವಿಧಾನದ ಮೂಲಕ ಈ ದಾಸ್ಯ ನಿವಾರಿಸಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ಗೆ ಸಲ್ಲುತ್ತದೆ. ಬಹುಭಾಷೆ, ಬಹು ಸಂಸ್ಕೃತಿ, ಬಹು ಧರ್ಮಗಳ, ಬಹುದೇವರಗಳು ಇರುವ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ, ಸಮಾನತೆ ಕೊಟ್ಟಿದ್ದು ಅಂಬೇಡ್ಕರ್’ ಎಂದು ಸ್ಮರಿಸಿದರು.

‘ದೇಶದಲ್ಲಿ ಜಾತೀಯತೆ ಇನ್ನೂ ಅಳಿಯದಿದ್ದರೆ ಭಾರತ ದೋಷ ಎನಿಸುವುದೇ ಹೊರತು ದೇಶ ಎನಿಸಲಾರದು. ಆ ನಿಟ್ಟಿನಲ್ಲಿ ಅಂಬೇಡ್ಕರ್ ವಿಚಾರಗಳನ್ನು ಮನೆ–ಮನಗಳಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ’ ಎಂದರು.

ಕಲಬುರಗಿಯ ಕಾಂತಾ ಕಾಲೊನಿಯ ಶ್ರಾವಸ್ಥಿಯ ಬುದ್ಧವಿಹಾರದ ಬಿಕ್ಕುಣಿ ಸುಮನ್ ಆರ್ಯಜಿ ಸಾನ್ನಿಧ್ಯ ವಹಿಸಿದ್ದರು. ಪ್ರಕಾಶ ರಾಠೋಡ, ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷ ಕಾಶೀರಾಯ ನಂದೂರಕರ, ಭೋವಿ ಸಮಾಜದ ಮುಖಂಡ ತಿಪ್ಪಣ್ಣ ಒಡೆಯರಾಜ್, ದೇವೀಂದ್ರಪ್ಪ ಕಟ್ಟಿ ಮನಿ, ಪದ್ಮಾ ಧನ್ನಿ, ಮಯೂರ ವಾಘಮೋರೆ ಭೀಮಶಕ್ತಿ ಯುವಕ ಸಂಘದ ಗೌರವಾಧ್ಯಕ್ಷ ಹಣಮಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಸರ್ಕಾರಿ ಸೇವೆಯಿಂದ ನಿವೃತ್ತರಾದವರು, ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರಿದವರು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-34-9216974

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.