ಕಲಬುರಗಿ: ‘ನಮ್ಮೆಲ್ಲರ ದೇಹದಲ್ಲಿರುವ ರಕ್ತ, ಮೂಳೆ–ಮಾಂಸ ಎಲ್ಲವೂ ಒಂದೇ. ನಾನು ಹಿಂದೂ, ನಾನು ಮುಸ್ಲಿಂ, ನಾನು ಕ್ರೈಸ್ತ ಎಂಬುದೆಲ್ಲವೂ ಬರೀ ಮಿದುಳಿನ ಆಟ. ಸಮಾಜವು ಧರ್ಮ ಆಧಾರದಲ್ಲಿ ವಿಘಟಿತಗೊಂಡಿದೆ’ ಎಂದು ಕಲಬುರಗಿ ಗುರುದ್ವಾರದ ದೀಪಸಿಂಗ್ ಕಳವಳ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಕಲಬುರಗಿ ಅಭಿವೃದ್ಧಿಪರ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ‘ಈಸ್ಟರ್ ಹಬ್ಬ ಹಾಗೂ ಈದ್ ಮಿಲಾಪ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಸ್ಲಿಮರು ನಿತ್ಯ ಐದು ಹೊತ್ತು ನಮಾಜ್ ಮಾಡುತ್ತಾರೆ. ಹಿಂದೂಗಳು ಎರಡು ಸಲ ದೇವಸ್ಥಾನಗಳಿಗೆ ಹೋಗುತ್ತಾರೆ. ಸಿಖರೂ ಎರಡು ಸಲ ಗುರುದ್ವಾರಕ್ಕೆ ಹೋಗುತ್ತಾರೆ. ದೇವರ ಆರಾಧನೆಯಲ್ಲಿ ಯಾವುದೇ ಭೇದ–ಭಾವವಿಲ್ಲ. ನಾವೆಲ್ಲ ಯಾವುದೇ ಧರ್ಮದವರಾದರೂ ಪ್ರತಿಯೊಬ್ಬರಿಗೂ ಎಲ್ಲ ಧರ್ಮಗಳ ಬಗೆಗೆ ಅರಿಯಬೇಕಿದೆ’ ಎಂದು ಪ್ರತಿಪಾದಿಸಿದರು.

‘ಎಲ್ಲ ಗುರುದ್ವಾರಗಳಿಗೆ ನಾಲ್ಕು ಬಾಗಿಲು ಇರುತ್ತವೆ. ಯಾವುದೇ ಸಮಾಜದವರು ಯಾವುದೇ ದ್ವಾರದಿಂದ ಪ್ರವೇಶಿಸಲು ಸ್ವತಂತ್ರರು. ಯಾರಿಗೂ ತಡೆಯೇ ಇಲ್ಲ. ಯಾಕೆಂದರೆ ಆತ ಯಾವ ಧರ್ಮದವನು ಎಂಬುದಕ್ಕಿಂತ ಮೊದಲು ಆತ ಮನುಷ್ಯ. ದೇವರ ಮನೆಯಲ್ಲಿ ಮನುಷ್ಯತ್ವ ಮಾತ್ರ ಗಣನೆಗೆ ಬರುತ್ತದೆ. ಅದುವೇ ಶ್ರೇಷ್ಠ’ ಎಂದರು.

‘ಇತ್ತೀಚೆಗೆ ಯುವಜನರು ಹಿರಿಯ ತಲೆಮಾರಿನಿಂದ ಬೇರ್ಪಟ್ಟಿದ್ದಾರೆ. ಅವರು ತಮ್ಮದೇ ಲೋಕದಲ್ಲಿ ಮುಳುಗಿದ್ದಾರೆ. ಅವರನ್ನು ಹಿರಿಯರು ಜೊತೆಗೂಡಿಸಿಕೊಂಡು ಮುನ್ನಡೆಯಬೇಕಿದೆ. ಯುವಜನರು ತಂದೆ–ತಾಯಿ ಸೇವೆ ಮಾಡಿದರೆ, ಅವರನ್ನು ಪ್ರೀತಿಸಿದರೆ ದೇಶವನ್ನು ಪ್ರೀತಿಸುತ್ತಾರೆ. ಸಮಾಜವನ್ನೂ ಪ್ರೀತಿಸುತ್ತಾರೆ’ ಎಂದರು.

ಸೇಂಟ್ ಮೇರಿ ಚರ್ಚ್ನ ಫಾದರ್ ಸ್ಟ್ಯಾನಿ ಲೋಬೊ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸೈಯದ್ ಶಾ ಯಾದುಲ್ಲಾ ಹುಸೇನಿ ನಿಜಾಮ್ ಬಾಬಾ, ಶ್ರೀನಿವಾಸ ಸರಡಗಿ ರೇವಣಸಿದ್ಧ ಶಿವಾಚಾರ್ಯ, ಸುಮಂತ್ ಸರಡಗಿ, ಸ್ಯಾಮುಯೆಲ್ ಭಾಲೇಕರ್, ಬಹಮನಿ ಫೌಂಡೇಷನ್ನ ಕಾಜಿ ರಿಜ್ವಾನ್ ಸಿದ್ದಿಕಿ, ಸಾಹಿತಿ ರೌಫ್ ಖಾದ್ರಿ, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ವಕೀಲ ವೈಜನಾಥ್ ಝಳಕಿ ಹಾಗೂ ಸಯ್ಯದ್ ನಜೀರುದ್ದೀನ್ ಮುತ್ತವಲ್ಲಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ವಿವಿಧ ಧರ್ಮಗಳ ಮುಖಂಡರು ಭಾಗವಹಿಸಿ ಸೌಹಾರ್ದ ಹಾಗೂ ಮಾನವೀಯ ಮೌಲ್ಯಗಳ ಮಹತ್ವದ ಮೇಲೆ ಬೆಳಕು ಚೆಲ್ಲಿದರು.

ಕಲಬುರಗಿ ಅಭಿವೃದ್ಧಿಪರ ಸಮಿತಿಯ ಅಧ್ಯಕ್ಷ ಲೂಯಿಸ್ ಕೋರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಬೀನ್ ಅಹ್ಮದ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-34-1099109434

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.