ಕೆಂಭಾವಿ: ‘ವೈವಿಧ್ಯಮಯ ಸಂಸ್ಕೃತಿ ಯನ್ನು ಪ್ರೀತಿಸೋಣ, ಗೌರವಿಸೋಣ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯೋಣ. ಸೂಫಿ ಸಂತರು, ದಾಸ ಶ್ರೇಷ್ಠರು, ಮಹಾತ್ಮರು, ಶಿವಶರಣರು ತೋರಿದ ಮಾರ್ಗದಲ್ಲಿ ಸಾಗೋಣ’ ಎಂದು ಸಜ್ಜಾದ ನಶಿನ್ ಮಾಸಾಬಿ ದರ್ಗಾದ ಸಾಹೇಬ್ ಶಾಹೀದ್ ಹುಸೇನ್ ಫಾರೂಕಿ ಹೇಳಿದರು.

ಪಟ್ಟಣದ ಶ್ರೀಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯಲ್ಲಿ ಇಲಿಯಾಸ್ ಪಟೇಲ್ ರಚಿತ ‘ಅತಿಥಿ ಹೃದಯ’ ಚೊಚ್ಚಲ ಕಾದಂಬರಿಯ ಮುಖಪುಟ ಅನಾವರಣಗೊಳಿಸಿ ಮಾತನಾಡಿದರು.

ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಮಲ್ಲಯ್ಯ ಸ್ವಾಮಿ ವಡಿಗೇರಿ ಅವರು, ‘ಹೆಣ್ಣು, ಹೊನ್ನು, ಮಣ್ಣು, ಅಧಿಕಾರ, ಅಂತಸ್ತು ಬಯಸದೆ ಬದುಕಿನುದ್ದಕ್ಕೂ ಸೇವಾ ಮನೋಭಾವ ಮೈಗೂಡಿಸಿಕೊಂಡರೆ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ’ ಎಂದರು.

‘ಚನ್ನಬಸವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯುವ ಮಾಸಿಕ ಸತ್ಸಂಗವು ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ, ಆಚಾರ ವಿಚಾರ, ಶ್ರದ್ಧೆ, ಸಂಪ್ರದಾಯಗಳ ಪಾಠಶಾಲೆಯಾಗಿದೆ’ ಎಂದು ಶ್ಲಾಘಿಸಿದರು.

ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸೋಮನಾಥ ಯಾಳಗಿ ಹಾಗೂ ಯಮನೇಶ ಯಾಳಗಿಯವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಶಿವಾನುಭವ ಗೋಷ್ಠಿಯಲ್ಲಿ ಸಾಹಿತಿ ನಿಂಗನಗೌಡ ದೇಸಾಯಿ, ನಿಜಗುಣಿ ವಿಶ್ವಕರ್ಮ, ಪುರಸಭೆ ಸದಸ್ಯ ಭೀಮನಗೌಡ ಮಲ್ಕಾಪುರ, ದೇವಿಂದ್ರ ಕರಡಕಲ್, ನಯೋಮ್ ಖಾಜಿ, ಅಬ್ದುಲ್ ರಜಾಕ್ ಸಾಸನೂರ, ಬಂದೇನವಾಜ್ ನಾಲತವಾಡ, ಯಂಕನಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-30-378185779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.