ಕಾಳಗಿ: ‘ಹಿಂದಿನ ಕಾಲದಲ್ಲಿ ಶಿಕ್ಷಣಕ್ಷೇತ್ರ ಅಷ್ಟೊಂದು ವಿಸ್ತಾರ ಇರಲಿಲ್ಲ. ಆಗ ಮಠಗಳು ಅನ್ನದಾಸೋಹದ ಜತೆಗೆ ಶಿಕ್ಷಣ ದಾಸೋಹಕ್ಕೆ ಶ್ರಮಿಸುತ್ತಿದ್ದವು. ಈಗ ಸರ್ಕಾರವೇ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಹಾಗಾಗಿ ಮಠಾಧೀಶರು ಹಳ್ಳಿಗಳಿಗೆ ಹೋಗಿ ದುಶ್ಚಟ ಬಿಡಿಸುವ, ಸಂಸ್ಕಾರದ ಶಿಕ್ಷಣ ಕೊಡುವ ಕೆಲಸ ಮಾಡಬೇಕು’ ಎಂದು ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಸೋಮವಾರ ಮುರುಘೇಂದ್ರ ಶಿವಯೋಗಿಗಳ ವಿರಕ್ತಮಠದ ನೂತನ ಪೀಠಾಧಿಪತಿಗಳ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘ಸಮಾಜಕ್ಕೆ ಮಠಗಳ ಕೊಡುಗೆ ದೊಡ್ಡದಿದೆ. ನೂತನ ಪೀಠಾಧಿಪತಿ ವಯಸ್ಸಿನಲ್ಲಿ ಚಿಕ್ಕವರಿದ್ದಾರೆ. ಪೂರ್ವಾಶ್ರಮದ ತಂದೆ–ತಾಯಿಗೆ ಒಬ್ಬನೇ ಮಗನಾಗಿದ್ದರೂ ಮಠಕ್ಕೆ ಕೊಟ್ಟಿದ್ದಾರೆ. ಏನೇ ಆದರೂ ಭಕ್ತರು ಪ್ರೀತಿ, ವಿಶ್ವಾಸದಿಂದ ಸಹಿಸಿಕೊಂಡು ಮಠದ ಬೆಳವಣಿಗೆಯಲ್ಲಿ ಕೈಜೋಡಿಸಬೇಕು’ ಎಂದರು.

ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ‘ರಟಕಲ್ ಗ್ರಾಮ ಭಕ್ತಿ, ಶ್ರದ್ಧೆಯ ತಾಣವಾಗಿದೆ. ಸಮಾಜ ಸೇವೆ ಮಾಡುವ ಜವಾಬ್ದಾರಿ ಸ್ವಾಮೀಜಿ ಮೇಲಿದೆ, ಭಕ್ತರು ನೂತನ ಶ್ರೀಗಳಿಗೆ ಸಹಕರಿಸಿ ಪೋಷಿಸಬೇಕು’ ಎಂದರು.

ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ನೂತನ ಪೀಠಾಧಿಪತಿ ನೀಲಕಂಠ ಸ್ವಾಮೀಜಿ, ನಿವೃತ್ತ ನ್ಯಾಯಾಧೀಶ ಚನ್ನಮಲ್ಲಪ್ಪ ಬೆನಕನಳ್ಳಿ, ಮಾಜಿ ಸಂಸದ ಡಾ.ಉಮೇಶ ಜಾಧವ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿದರು.

ಬಬಲಾದ ಮಠದ ಗುರುಪಾದಲಿಂಗ ಸ್ವಾಮೀಜಿ, ಸೊಂತ ಮುಲ್ಲಾಮರಿ ಕ್ಷೇತ್ರದ ದತ್ತ ದಿಗಂಬರ ಸ್ವಾಮೀಜಿ, ಹಿರೇನಾಗಾಂವದ ಜಯಶಾಂತಲಿಂಗ ಸ್ವಾಮೀಜಿ, ಸ್ಥಳೀಯ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು, ಗೌರಿಗಣೇಶ ಗುಡ್ಡದ ರೇವಣಸಿದ್ದ ಶರಣರು, ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಹುಡಗಿ ಶ್ರೀ, ಮಂಠಾಳ ಶ್ರೀ, ನರಗುಂದಾ ಶ್ರೀ, ಬಿಲಗುಂದಿ ಶ್ರೀ, ಮುಖಂಡರಾದ ಮಲ್ಲಿಕಾರ್ಜುನ ಗಾಜರೆ, ಶಿವರಾಜ ಪಾಟೀಲ, ನೀಲಕಂಠ ಗುತ್ತೇದಾರ, ಸಂತೋಷ ಪತಂಗೆ, ದತ್ತಾತ್ರೇಯ ರಾಯಗೋಳ ಉಪಸ್ಥಿತರಿದ್ದರು.

ಶರಣಬಸಪ್ಪ ಮಮಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಗೌರಿಶಂಕರ ಕಿಣ್ಣಿ ನಿರೂಪಿಸಿದರು. ವೀರಣ್ಣ ಗಂಗಾಣಿ ವಂದಿಸಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ ಅವರಿಂದ ನೂತನ ಪೀಠಾಧಿಪತಿಗೆ ಚಿನ್ಮಯಾನುಗೃಹ ಷಟಸ್ಥಲ ಬ್ರಹ್ಮೋಪದೇಶ ನೀಡಿ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-31-1521161527

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.