ಕಲಬುರಗಿ: ‘ಜನಸಾಮಾನ್ಯರ ಮಧ್ಯೆ ವಾಸವಿದ್ದು, ಜಾತಿ–ಮತ–ಧರ್ಮಗಳ ಭೇದವಿಲ್ಲದೆ ಮಾನವೀಯತೆಯ ಸಂದೇಶ ಸಾರಿದವರು ಸೂಫಿ ಸಂತ ಹಜರತ್ ಖಾಜಾ ಬಂದಾನವಾಜರು’ ಎಂದು ಬೋಡೆ ರಿಯಾಜ್ ಅಹ್ಮದ್ ಹೇಳಿದರು.

ನಗರದ ವಿಶ್ವನಾಥರೆಡ್ಡಿ ಮುದ್ನಾಳ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಆಯೋಜಿಸಿದ್ದ ‘ಬಂದಾನವಾಜ ಮತ್ತು ಸೂಫಿ ಸಾಹಿತ್ಯ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಖಾಜಾ ಬಂದಾನವಾಜರು ಬಾಲ್ಯದಲ್ಲಿಯೇ ದೇವಗಿರಿ (ದೌಲತಾಬಾದ್) ಪ್ರದೇಶಕ್ಕೆ ಬಂದು ತಮ್ಮ ತಂದೆಯ ನಿಧನದ ಬಳಿಕ ದೆಹಲಿಗೆ ತೆರಳಿ ಅಲ್ಲಿನ ಸೂಫಿ ಪರಂಪರೆಯ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಶಿಕ್ಷಣ ಪಡೆದರು. ಸುಮಾರು 44 ವರ್ಷಗಳ ಕಾಲ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉಪನ್ಯಾಸಗಳ ಮೂಲಕ ಸಾವಿರಾರು ಶಿಷ್ಯರನ್ನು ರೂಪಿಸಿದರು’ ಎಂದರು.

‘ಕ್ರಿ.ಶ. 1398ರಲ್ಲಿ ತೈಮೂರನ ದೆಹಲಿಯ ಮೇಲಿನ ದಾಳಿಯ ಸಂದರ್ಭದಲ್ಲಿ ದಕ್ಷಿಣ ಭಾರತಕ್ಕೆ ಆಗಮಿಸಿದ ಬಂದಾನವಾಜರು, ಬಳಿಕ ಕಲಬುರಗಿಯಲ್ಲಿ ನೆಲೆಸಿದರು. ಅವರ ಜ್ಞಾನ, ಸರಳತೆ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವದಿಂದ ಪ್ರಭಾವಿತರಾದ ಬಹಮನಿ ಸುಲ್ತಾನ ಫಿರೋಜ್ ಶಾ ಬಹಮನಿ ಅವರಿಗೆ ಆಶ್ರಯ ಕಲ್ಪಿಸಿದರು. ಅವರು ಜಾತಿ–ಮತ–ಧರ್ಮಗಳ ಭೇದವಿಲ್ಲದೆ ಮಾನವೀಯತೆಯ ಸಂದೇಶ ಸಾರಿದರು’ ಎಂದು ಹೇಳಿದರು.

ಸೂಫಿ ಸಾಹಿತಿ ಪರ್ವಿನ್ ಸುಲ್ತಾನಾ ಮಾತನಾಡಿ, ‘ಬಂದಾನವಾಜರ ಸಂದೇಶ ಒಂದು ಧರ್ಮಕ್ಕೆ ಸೀಮಿತವಾಗಿರದೆ ಸಮಸ್ತ ಮಾನವಕುಲದ ಒಳಿತಿಗಾಗಿ ರೂಪುಗೊಂಡ ವಿಶ್ವಮಾನವೀಯ ಚಿಂತನೆಯಾಗಿದೆ. ಪ್ರೀತಿ, ಕರುಣೆ, ಸೇವೆ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಅವರು ಪ್ರತಿಪಾದಿಸಿದ್ದು, ಇಂದಿನ ಸಮಾ ಜಕ್ಕೂ ಅತ್ಯಂತ ಪ್ರಸ್ತುತವಾಗಿದೆ’ ಎಂದರು.

ಶರಣಗೌಡ ಪಾಟೀಲ ಪಾಳಾ ಮಾತನಾಡಿ, ‘ಬಸವಣ್ಣನ ಸಮಾನತೆಯ ಆಶಯವನ್ನು ಈ ಭಾಗದಲ್ಲಿ ಬಿತ್ತಿ ಬೆಳೆಸಿದವರಲ್ಲಿ ಸೂಫಿಗಳ ಪಾತ್ರ ಮಹತ್ವದ್ದಾಗಿದೆ. ಇಂದಿನ ಸಮಾಜಕ್ಕೆ ಸೂಫಿ–ಶರಣರ ಸೌಹಾರ್ದ ಬದುಕಿನ ಮೌಲ್ಯಗಳು ಅತ್ಯಗತ್ಯ’ ಎಂದು ಹೇಳಿದರು.

‘ಪ್ರಜಾವಾಣಿ’ ಹಿರಿಯ ವರದಿಗಾರ ಮನೋಜಕುಮಾರ್ ಗುದ್ದಿ ಉದ್ಘಾಟಿಸಿ, ಮಾತನಾಡಿದರು. ವೀರಶೆಟ್ಟಿ ಗಾರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಬಸವರಾಜ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಾ ಅಪಚಂದ, ಶರಣಬಸಪ್ಪ ವಡ್ಡನಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಾಗೇಶ ಮಡಿವಾಳ ನಿರೂಪಿಸಿದರು. ಸಿದ್ದರಾಮ ಕಲಬುರ್ಗಿ ಸ್ವಾಗತಿಸಿದರು. ವೀಣಾ ರಾವೂರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-34-117206508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.