ಜೇವರ್ಗಿ: ಷಣ್ಮುಖ ಶಿವಯೋಗಿಗಳು ತಾತ್ವಿಕ ತಳಹದಿ ಮೇಲೆ ಸಾತ್ವಿಕ ಸಮಾಜ ನಿರ್ಮಿಸಿದ್ದಾರೆ. ಅವರ ವಚನ ಸಾಹಿತ್ಯವನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ’ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ ಹೇಳಿದರು.

ಪಟ್ಟಣದ ಷಣ್ಮುಖ ಶಿವಯೋಗಿಗಳ ವಿರಕ್ತಮಠದಲ್ಲಿ ಸೋಮವಾರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಗರನಾಡಿನ ಹೆಬ್ಬಾಗಿಲು ಎನಿಸಿಕೊಂಡಿರುವ ಜೇವರ್ಗಿ ವಚನ ಸಾಹಿತ್ಯದ ತವರೂರು. ಶರಣರ ಎಲ್ಲ ಆದರ್ಶಗಳನ್ನು ಅಳವಡಿಸಿಕೊಂಡ ಷಣ್ಮುಖ ಶಿವಯೋಗಿಗಳು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದರು. 740ಕ್ಕೂ ಅಧಿಕ ವಚನಗಳನ್ನು ರಚಿಸಿ ವಚನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ’ ಎಂದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ‘12ನೇ ಶತಮಾನದ ಬಸವಾದಿ ಶರಣರ ನಂತರ ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿದ ಷಣ್ಮುಖ ಶಿವಯೋಗಿಗಳು ಮಹಾನ್ ಶರಣರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರವಾಗಲಿದೆ’ ಎಂದರು.

ವಿರಕ್ತಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಶೇಖರ ಸೀರಿ, ಉಪಾಧ್ಯಕ್ಷ ಸೋಮಣ್ಣ ಕಲ್ಲಾ, ಕಾರ್ಯದರ್ಶಿ ಸಂಗಣಗೌಡ ಗುಳ್ಯಾಳ, ಷಣ್ಮುಖಪ್ಪ ಸಾಹು ಗೋಗಿ, ವಿಶ್ವನಾಥ ಸಾಹು ಅರಳಿ, ಸಿದ್ದಣಗೌಡ ಹಳಿಮನಿ, ಈರಣ್ಣ ಬನ್ನೆಟ್ಟಿ, ಶರಣಬಸವ ಕಲ್ಲಾ, ನೀಲಕಂಠ ಅವಂಟಿ, ವಿಶ್ವನಾಥ ಇಮ್ಮಣ್ಣಿ, ಶಿವಾನಂದ ಮಠಪತಿ, ದಂಡಪ್ಪಗೌಡ ಪೊಲೀಸ್ ಪಾಟೀಲ, ರವಿ ಕೋಳಕೂರ, ಅಖಂಡು ಶಿವಣ್ಣಿ, ನೀಲಕಂಠರಾಯಗೌಡ ಪಾಟೀಲ, ನಾಗರಾಜ ಬುಟ್ನಾಳ, ಸುರೇಶ ಹಳ್ಳಿ, ಶಂಕರ ಸಜ್ಜನ್, ಸಂತೋಷಗೌಡ ಮಾಲಿಪಾಟೀಲ, ವಿಶ್ವನಾಥ ಕಲ್ಲಾ, ಚಂದ್ರು ಸೀರಿ, ರಾಜಶೇಖರ ಕಲ್ಮಠ, ಶಿವಲಿಂಗಯ್ಯಸ್ವಾಮಿ ಘಂಟಿಮಠ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಶರಣು ಅವರಾದ, ಪ್ರಕಾಶಗೌಡ ಹರನೂರ, ಸಾಹೇಬಗೌಡ ಜೇವರ್ಗಿ.ಕೆ, ಪ್ರಕಾಶ ನಾಶಿ, ಶರಣು ಶಿವಣ್ಣಿ, ಶಾಂತಪ್ಪ ಬಿರಾದಾರ, ಮಹಾಂತಗೌಡ ಚನ್ನೂರ, ಮಲ್ಲಣಗೌಡ ಕನ್ಯಾಕೋಳೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-31-1112010688

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.