ವಾಡಿ: ‘ನಿಜವಾಗಲೂ ಅಂಬೇಡ್ಕರ್ ಬಗ್ಗೆ ಗೌರವ ಅಭಿಮಾನ ಇದ್ದರೆ ಡಿಜೆ ಸಂಸ್ಕೃತಿಗೆ ವಿದಾಯ ಹೇಳಿ ಅವರ ತತ್ವಗಳನ್ನು ಅಳವಡಿಕೊಳ್ಳುವ ಕಾರ್ಯ ಮಾಡಿ’ ಎಂದು ಶಿಕ್ಷಕ ಜೀತೆಂದ್ರ ಕೆ.ತಳವಾರ ಸಲಹೆ ನೀಡಿದರು.

ಪಟ್ಟಣದ ಬೌದ್ಧ ಸಮಾಜದ ವತಿಯಿಂದ ಆಯೋಜಿಸಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತೋತ್ಸವ ಹಾಗೂ ಅವರು 1945 ಮತ್ತು 1952ರಲ್ಲಿ ಪಟ್ಟಣಕ್ಕೆ ಎರಡು ಬಾರಿ ಭೇಟಿ ನೀಡಿದ ಐತಿಹಾಸಿಕ ದಿನದ ಸ್ಮರಣೆಯ 81ನೇ ಜಯಂತಿಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಅಂಬೇಡ್ಕರ್ ಅವರನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿದೆಯೇ ಹೊರತು ತಲೆಯೊಳಗೆ ತುಂಬಿಕೊಳ್ಳುತ್ತಿಲ್ಲ. ಭಾವನಾತ್ಮಕವಾಗಿ ಅಪ್ಪಿಕೊಂಡಿರುವ ನಮಗೆ ಸೈದ್ಧಾಂತಿಕವಾಗಿ ಒಪ್ಪಿಕೊಳ್ಳಲು ಏನು ಕಷ್ಟ’ ಎಂದು ಪ್ರಶ್ನಿಸಿದರು.

‘ಬ್ರಿಟಿಷ್ ಸರ್ಕಾರ ಅಂಬೇಡ್ಕರ್ ಅವರನ್ನು ತಿಂಗಳಿಗೆ ₹8 ಸಾವಿರ ರೂಪಾಯಿ ಸಂಬಳ ನೀಡಿ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಆಹ್ವಾನಿಸಿದಾಗ ಅದನ್ನು ತಿರಸ್ಕರಿಸಿದರು. ಆದರೆ ಬ್ರಿಟಿಷ್ ಸರ್ಕಾರದ ₹60 ಪಿಂಚಣಿಗಾಗಿ ತಪ್ಪೊಪ್ಪಿಗೆ ಪತ್ರ ಬರೆದು ಜೈಲಿಂದ ಬಿಡುಗಡೆಯಾಗಿ ಬಂದ ಸಾವರ್ಕರ್ ಅಂಬೇಡ್ಕರ್ ಅವರಿಗಿಂತ ಶ್ರೇಷ್ಠ ನಾಯಕನಾಗುತ್ತಿರುವುದು ಈ ದೇಶದ ದೊಡ್ಡ ದುರಂತ’ ಎಂದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಚಿಂಚೋಳಿ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಆರ್ಪಿಎಫ್ ಪಿಎಸ್ಐ ಪೌರಸಕುಮಾರ, ದಲಿತ ಮುಖಂಡ ಸುರೇಶ ಮೇಂಗನ ಮಾತನಾಡಿದರು

ಜಿ.ಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಸಬೆಯ ಅಧ್ಯಕ್ಷತೆ ವಹಿಸಿದ್ದರು. ಭಿಕ್ಖುಣಿ ಅರ್ಚಸ್ಮತಿ ಮಾತಾಜಿ, ಭಂತೆ ಶಾಂತಿ ಸಮಣ, ಭಂತೆ ಸಂಘ ಸೇವಕ ಸಾನ್ನಿಧ್ಯ ವಹಿಸಿದ್ದರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸುನೀಲ ದೊಡ್ಡಮನಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮರಲಿಂಗ ಹೊನಗುಂಟಿಕರ, ಸಿನಿಮಾ ನಿರ್ದೇಶಕ ಕೀರ್ತೀಪಾಲ ಗಾಯಕವಾಡ, ಸುರೇಶ ಮೆಂಗನ, ಮುಖಂಡರಾದ ರಾಜು ಮುಕ್ಕಣ್ಣ, ಬಶೀರ್ ಖುರೇಷಿ, ಮಜರ್ ಹುಸೇನ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಭೀಮಣ್ಣ ಹವಾಲ್ದಾರ, ಶರಣಗೌಡ ಚಾಮನೂರ, ಚಂದಪ್ಪ ಕಟ್ಟಿಮನಿ, ಶರಣು ನಾಟೇಕರ, ಜುಮ್ಮಣ್ಣ ಪೂಜಾರಿ, ಭೀಮರಾಯ ದೊರಿ, ನಾಗೇಂದ್ರ ಜಯಗಂಗಾ, ಅರುಣಕುಮಾರ ಬರ್ಮಾ, ಶರಣಬಸು ಸಿರೂರಕರ, ಚಂದ್ರಸೇನ ಮೇನಗಾರ, ಶರಣು ವಾರದ, ಮಲ್ಲೇಶ ನಾಟೇಕರ, ಗೊಲ್ಲಾಳಪ್ಪ ಬಡಿಗೇರ, ಸಂಜಯ ಠಾಣೆದಾರ, ಅಮೃತ ಕೋಮಟೆ, ರಮೇಶ ಬಡಿಗೇರ, ಉದಯಕುಮಾರ ಯಾದಗಿರ, ಬಸವರಾಜ ಕೇಶ್ವರ, ಗೋವಿಂದ ಸಗರ, ಮಹಾಂತಗೌಡ, ಪ್ರೀತಮ ಜೈನ್, ಅಲ್ತಾಫ್ ಸೌದಾಗರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-31-1761637139

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.