ವಾಡಿ: ಏ.1ರಿಂದ ಆರಂಭಗೊಳ್ಳಲಿರುವ ಕುಂದನೂರ ಗ್ರಾಮದ ವಿಶ್ವಕರ್ಮ ಕುಲದೇವತೆ ಕಾಳಿಕಾದೇವಿಯ ಜಾತ್ರಾ ಉತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಸೋಮವಾರ ಪಟ್ಟಣದಲ್ಲಿ ಜರುಗಿತು.

ಕಾಳಿಕಾದೇವಿ ಕ್ಷೇತ್ರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಂಚಾಳ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪ್ರತಿವರ್ಷದಂತೆ ಈ ವರ್ಷವೂ ಕಾಳಿಕಾದೇವಿ ಜಾತ್ರೆ ಉತ್ಸವ ಬಹುವಿಜೃಂಭಣೆಯಿಂದ ಆಯೋಜಿಸಲು ತೀರ್ಮಾನಿಸಲಾಗಿದ್ದು, ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏಕದಂಡಗಿ ಮಠಾಧೀಶ ಸುರೇಂದ್ರ ಸ್ವಾಮೀಜಿ, ಅಳ್ಳೊಳ್ಳಿ ಗದ್ದಗಿ ಮಠದ ನಾಗಪ್ಪಯ್ಯ ಸ್ವಾಮೀಜಿ, ಕುಂದನೂರಿನ ವೇದಮೂರ್ತಿ ಕಾಂತಾಚಾರ್ಯ ಅವರ ಪ್ರಧಾನ ಪೌರೋಹಿತ್ಯದಲ್ಲಿ, ಬುಧವಾರ ಬೆಳಿಗ್ಗೆ 8ಕ್ಕೆ ಹೋಮಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.

ಅಂದು ಸಂಜೆ 4 ಗಂಟೆಗೆ ಗೌರವ ಸತ್ಕಾರ, ಸಂಜೆ 6 ಗಂಟೆಗೆ, ಕಾಳಿಕಾ ಮಹಿಳಾ ಮಂಡಳಿಯಿಂದ ದಾಂಡಿಯಾ ನೃತ್ಯ, ಭಜನಾ ಕಾರ್ಯಕ್ರಮ ಜರುಗಲಿದೆ. 2ರಂದು ಬೆಳಗ್ಗೆ 8 ಗಂಟೆಗೆ ಪಲ್ಲಕ್ಕಿ ಮೆರವಣಿಗೆ, ಪುರವಂತರ ಸೇವೆ, ಮಧ್ಯಾಹ್ನ 2 ಗಂಟೆಗೆ ದೇವಸ್ಥಾನದದಲ್ಲಿ ಮಹಾಪ್ರಸಾದ ವಿತರಣೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಯ ದರ್ಶನ ಪಡೆದು ಕೃತಾರ್ಥರಾಗಬೇಕು ಎಂದು ಮನವಿ ಮಾಡಿದರು.

ನಂತರ ಜಾತ್ರಾಮಹೋತ್ಸವದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಕಾಳಿಕಾದೇವಿ ಕ್ಷೇತ್ರಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳಾದ ದೇವೀಂದ್ರ ಬಡಿಗೇರ, ಮೋನಪ್ಪ ವಿಶ್ವಕರ್ಮ, ಸುನಿಲ ಪಂಚಾಳ, ಮೌನೇಶ ಬಡಿಗೇರ, ಕಾಳಪ್ಪ ಬಡಿಗೇರ, ಸಿದ್ದು ಪಂಚಾಳ, ಸುಭಾಷ ಪಂಚಾಳ, ಕಾಳಪ್ಪ ಸಿ. ಬಡಿಗೇರ, ಓಂಪ್ರಕಾಶ ಬಡಿಗೇರ, ಮಾಣಿಕ ವಿಶ್ವಕರ್ಮ, ಅಶೋಕ ಪಂಚಾಳ, ವೀರಣ್ಣ ಯಾರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-31-774609029

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.