ಕಂಪ್ಲಿ: ‘ಮಾನವೀಯ ಮೌಲ್ಯ ಹಾಗೂ ಜೀವನ ಮೌಲ್ಯವೇ ನಿಜವಾದ ಸಂಸ್ಕೃತಿ’ ಎಂದು ಜೈನ ಗುರು ಆಚಾರ್ಯ ವಿಮಲಸಾಗರ್ ಸೂರ್ ಜಿ ತಿಳಿಸಿದರು.

ಪಟ್ಟಣದ ಶ್ರೀಮುನಿ ಸುವ್ರತ್ಸ್ವಾಮಿ ಹುಂಡಿಯಾ ಛತ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಹಂ ಯಾರಲ್ಲಿ ಇರುತ್ತದೆಯೋ ಅವರಲ್ಲಿ ವ್ಯಕ್ತಿತ್ವ ಜ್ಯೋತಿ ಬೆಳಗುವುದಿಲ್ಲ’ ಎಂದರು.

ಗುರು ಹಿರಿಯರು ಬೋಧಿಸಿದ ಸತ್ಸಂಗ, ಸತ್ಕರ್ಮ, ಸದಾಲೋಚನೆ, ದೇಶಪ್ರೇಮ, ಕುಟುಂಬ ಪ್ರೀತಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ, ತಾಯಿ ಆಶೋತ್ತರಗಳನ್ನು ಮಕ್ಕಳು ಅರಿತು ಈಡೇರಿಸಬೇಕು. ಯುವಜನತೆ ಭವಿಷ್ಯದ ಸುಭದ್ರ ಭಾರತವನ್ನು ನಿರ್ಮಿಸಬೇಕಿದೆ ಎಂದು ತಿಳಿಸಿದರು.

ಶಾಸಕ ಜೆ.ಎನ್. ಗಣೇಶ್, ಜೈನ್ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಪ್ರಮುಖರಾದ ಶಾಂತಿಲಾಲ್ ಸಿಂಘ್ವಿ, ಶಾಂತಿಲಾಲ್ ಬಾಲಾರ್, ಫತೇಕುಮಾರ್ ಭಾಫ್ಣ, ರಾಜು ಹುಂಡಿಯಾ, ಅಮೃತಲಾಲ್, ರಾಮಲಾಲ್, ಜೈನ್ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಜೈನ ಸಮುದಾಯದವರು ಹಾಜರಿದ್ದರು.

ಇದಕ್ಕು ಮುನ್ನ ಆಚಾರ್ಯ ವಿಮಲಸಾಗರ್ಸೂರ್ಜಿ ಅವರೊಂದಿಗೆ ಐದು ಜನ ಶಿಷ್ಯರ ಮೆರವಣಿಗೆ ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-25-642928118

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.