ಕನಕಗಿರಿ: ವಿದೇಶಗಳಲ್ಲಿರುವ ನೂರಾರು ದೇಗುಲಗಳನ್ನು ನೋಡಿದ್ದು ಇಲ್ಲಿನ ಸುವರ್ಣಗಿರಿಯು ಸುಂದರ, ಮನಮೋಹಕವಾಗಿದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ವತಿಯಿಂದ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ನಿಮಿತ್ತ ಸೋಮವಾರ ರಾತ್ರಿ ಆಯೋಜಿಸಿದ್ದ ಸುವರ್ಣಗಿರಿ ವೈಭವ, ಸುವರ್ಣಗಿರಿ ಪ್ರಶಸ್ತಿ ಪ್ರದಾನ ಹಾಗೂ ಪರಿಪೂರ್ಣದೆಡೆಗೆ ಆಧ್ಯಾತ್ಮಿಕ ಪ್ರವಚನದ ಸಮಾರೋಪ ಕಾರ್ಯಕ್ರಮದಲ್ಲಿ ಸುವರ್ಣಗಿರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಮೂರು ಸಲ ಇಲ್ಲಿಗೆ ಭೇಟಿ ನೀಡಿದ್ದು ದೇಶದಲ್ಲಿಯೇ ಇದೊಂದು ಅದ್ಭುತ ಮಠ ಎಂದು ಶ್ಲಾಘಿಸಿದರು. ಸುವರ್ಣಗಿರಿ ವಿರಕ್ತಮಠದ ಪೀಠಾಧಿಪತಿ ಚನ್ನಮಲ್ಲಸ್ವಾಮಿ ಹಾಗೂ ಮಠದ ಭಕ್ತರ ಪ್ರೀತಿ ಅಮೂಲ್ಯವಾಗಿದೆ, ಜೀವನದಲ್ಲಿ ಮರೆಯಲಾರದ್ದು’ ಎಂದು ಹೇಳಿದರು.

ಸಂಕದ ವಿರಕ್ತಮಠದ ಶಿವಲಿಂಗೇಶ್ವರ ಸ್ವಾಮಿ ಮಾತನಾಡಿ, ‘ಭಕ್ತರ ಸಂಕಷ್ಟಗಳನ್ನು ದೂರ ಮಾಡುವ ಶಕ್ತಿ ಗುರುವಿಗೆ ಇದೆ. ಸಾವು ಬಯಸಿದ ವ್ಯಕ್ತಿಯಲ್ಲಿ ಚೈತನ್ಯ ತುಂಬುವ ಕೆಲಸವನ್ನು ಪೀಠಾಧಿಪತಿ ಮಾಡುತ್ತಿದ್ದಾರೆ. ಬದುಕು ಸುಂದರವಾಗಿದ್ದು ಹಾಳು ಮಾಡಿಕೊಳ್ಳಬಾರದು’ ಎಂದು ಹೇಳಿದರು.

ಬೆಂಗಳೂರು ಹೈಕೋರ್ಟ್ ವಕೀಲ ಎಂ.ವಿ.ಹಿರೇಮಠ ಮಾತನಾಡಿದರು.

ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯಲ್ಲಿ 13 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಪಡೆದ ತಾಲ್ಲೂಕಿನ ಕನ್ನೇರಮಡಗು ಗ್ರಾಮದ ವಿದ್ಯಾರ್ಥಿ ಚಂದ್ರಶೇಖರ ಕುಷ್ಟಗಿ ಹಾಗೂ ಆಯಾ ಗ್ರಾಮಗಳಲ್ಲಿ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟ ಗ್ರಾಮಸ್ಥರಿಗೆ ಈ ಸಮಯದಲ್ಲಿ ಗುರುರಕ್ಷೆ ನೀಡಿ ಗೌರವಿಸಲಾಯಿತು.

ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯ, ವಿರಕ್ತಮಠದ ಚನ್ನಮಲ್ಲಸ್ವಾಮಿ, ತುರ್ವಿಹಾಳದ ಅಮರಗುಂಡ ಶಿವಾಚಾರ್ಯ, ಪಿಐ ನಾರಾಯಣ ವಿ, ಪ್ರವಚನಕಾರ ಗಣೇಶ ಶಾಸ್ತ್ರಿ, ಕಲಾವಿದರಾದ ಎಚ್, ಮೃತ್ಯುಂಜಯ ಕಂಬಳನೆತ್ತಿ, ವೀರೇಶ ಕುಮಾರ ನವಲಿ ಇತರರು ಇದ್ದರು. ಬೆಳಿಗ್ಗೆ ಮಹಾಂತ ಶಿವಾಚಾರ್ಯ ನೇತೃತ್ವದಲ್ಲಿ ಅಯ್ಯಚಾರ ಹಾಗೂ ಲಿಂಗದೀಕ್ಷೆ ನಡೆದರೆ ಸಂಜೆ ಬಸವೇಶ್ವರರ ಮೂರ್ತಿ ಹಾಗೂ ಎತ್ತುಗಳ ಮೆರವಣಿಗೆ ನಡೆಯಿತು. ಕಾರಟಗಿಯ ಶರಣಬಸವೇಶ್ವರ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-35-77555262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.