ಕಾಪು (ಪಡುಬಿದ್ರಿ): ಹಿರಿಯರು ಕುಟುಂಬದಂತೆ ಸಂಘದ ಚಟುವಟಿಕೆ ಮಾಡಿದ್ದರು. ಸಮಾಜದ ಸಂಘಟನೆಗಳ ಸಹಕಾರದಿಂದ ತಾಲ್ಲೂಕಿನ ಸಂಘಗಳನ್ನು ಬಲಪಡಿಸಬೇಕಿದೆ ಎಂದು ಮುಖಂಡ ವಿನಯಕುಮಾರ್ ಸೊರಕೆ ಹೇಳಿದರು.

ಕಾಪು ಬಿಲ್ಲವ ಭವನ ಮತ್ತು ನಾರಾಯಣ ಗುರು ಸಭಾಂಗಣದ ಉದ್ಘಾಟನೆ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಾನಿಗಳನ್ನು ಗೌರವಿಸಿ ಅವರು ಮಾತನಾಡಿದರು.

ಬಿಲ್ಲವರ ಅಸ್ತಿತ್ವದ ಸಂಕೇತವಾಗಿ ಕಾಪು ಬಿಲ್ಲವ ಭವನ ಮತ್ತು ನಾರಾಯಣ ಗುರು ಸಭಾಂಗಣದ ರೂಪುಗೊಂಡಿದೆ. ರಾಜ್ಯ ಸರ್ಕಾರದಿಂದ ₹50 ಲಕ್ಷ ಅನುದಾನ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಲ್ಲವ ಮುಖಂಡ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಬಿಲ್ಲವ ಸಮುದಾಯದವರು ಇತರ ಸಮಾಜದವರನ್ನು ಗೌರವಿಸುವ ಸಹೃದಯರು. ನಮಗೆ ರಾಜಕೀಯ ಶಕ್ತಿಯ ಅಗತ್ಯವಿದೆ. ನಮ್ಮ ಒಗ್ಗಟ್ಟನ್ನು ತೋರಿಸಬೇಕಿದೆ. ಯಾವುದೇ ಸಮಾಜವನ್ನು ದ್ವೇಷಿಸದೆ ಸರ್ವರನ್ನೂ ಗೌರವಿಸಬೇಕಿದೆ ಎಂದು ಹೇಳಿದರು.

ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದ ಕುಮಾರ್, ಬೆಳಪು ಸಹಕಾರಿ ಸೊಸೈಟಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಬಿಲ್ಲವ ಮುಖಂಡರಾದ ಗೋವಿಂದ ಬಾಬು ಪೂಜಾರಿ, ಸಂತೋಷ್ ಬೈರಂಪಳ್ಳಿ, ಪ್ರವೀಣ್ ಪೂಜಾರಿ ಮಾತನಾಡಿದರು.

ಸಭಾಭವನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು, ಸಹಕರಿಸಿದ ಸಂಘ ಸಂಸ್ಥೆಗಳನ್ನು ಅಭಿನಂದಿಸಲಾಯಿತು. ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು ಅಧ್ಯಕ್ಷತೆ ವಹಿಸಿದ್ದರು.

ಸಂಘದ ಗೌರವಾಧ್ಯಕ್ಷ ಪ್ರಭಾಕರ ಎಸ್ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲ್ಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಪುರಸಭಾ ಸದಸ್ಯೆ ಸರಿತಾ ಪೂಜಾರಿ, ಬಿಲ್ಲವ ಮುಖಂಡರಾದ ದಿನೇಶ್ ಪೂಜಾರಿ, ಉಮೇಶ್ ಕಾಪು, ಭಾಸ್ಕರ್ ಎಮ್ ಸಾಲ್ಯಾನ್, ಸುನಿಲ್ ಡಿ. ಬಂಗೇರ, ಮುದ್ದು ಪೂಜಾರಿ ಕರಂದಾಡಿ, ಸದಾನಂದ ಅಂಚನ್, ಹರೀಶ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅನಿಲ್ ಕುಮಾರ್ ಸ್ವಾಗತಿಸಿದರು.

ಸಚ್ಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಉದಯ ಸನಿಲ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-28-1381479446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.