ಕಾರಟಗಿ: ‘ಸ್ವರ್ಗ ಮೇಲಿಲ್ಲ. ನಮ್ಮ ನಿಮ್ಮೆಲ್ಲರ ತಾಯಿಯ ಪಾದದಲ್ಲಿದೆ. ನಮ್ಮ ಆಚಾರ, ವಿಚಾರ, ಕಾಯಕ ಪರಿಶುದ್ಧವಾಗಿದ್ದರೆ ಸ್ವರ್ಗ ನಮ್ಮೆಲ್ಲರ ಕೈಗಟುಕುವುದು. ಪೈಗಂಬರರ ಸಂದೇಶಗಳು ಭಾವೈಕ್ಯವನ್ನು ಸಾರಿ ಹೇಳುತ್ತವೆ’ ಎಂದು ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬೂದಗುಂಪ ಗ್ರಾಮದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಅಲಾವಿ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ನಡೆದ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸರ್ವ ಧರ್ಮ ಭಾವೈಕ್ಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗ್ರಾಮದ ಆಶರಖಾನ್ ಮಸೀದಿಯಿಂದ ಶಾದಿಮಹಲ್ವರೆಗೆ ಭಾವೈಕ್ಯದ ನಡಿಗೆ ಕಾರ್ಯಕ್ರಮ ನಡೆಯಿತು. ರಾಜ್ಯ ಅಲಾವಿ ಸಂಘದ ರಾಜ್ಯಾಧ್ಯಕ್ಷ, ಬಾದಾಮಿ ಪೀಠದ ಹಜರತ್ ಸೈಯದ್ ಮುಬಾರಕ್ ಬಾದಷಾ, ರಾಜ್ಯ ಕಾರ್ಯದರ್ಶಿ ಹುಸೇನಸಾಬ ನೀಡಿಗೊಳ, ಸಂಘದ ಹಲವು ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಭಾವೈಕ್ಯದ ನಡಿಗೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಮರುಳಸಿದ್ದಯ್ಯಸ್ವಾಮಿ ಹಿರೇಮಠ ಕಾರಟಗಿ, ಭೀಮೇಶಪ್ಪ ಅಪ್ಪಾಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮೆಹಬೂಬಸಾಬ ಬಳಗಾನೂರ, ಹೋರಾಟಗಾರ ಎಚ್.ಎನ್.ಬಡಿಗೇರ ಮಾತನಾಡಿದರು. ತಾಲ್ಲೂಕು ಅಲಾವಿ ಸಂಘಕ್ಕೆ ಅಧ್ಯಕ್ಷರಾಗಿ ಬಾಳಪ್ಪ ದಿಂಡೂರ, ಕಾರ್ಯದರ್ಶಿಯಾಗಿ ಮೌಲಾಲಿ ಕಾರಟಗಿ ನೇಮಕಗೊಂಡಿದ್ದು, ಅವರಿಗೆ ಸಂಘದ ರಾಜ್ಯಾಧ್ಯಕ್ಷರು ನೇಮಕಾತಿ ಪತ್ರ ನೀಡಿ ಸನ್ಮಾನಿಸಿದರು.

ವಿವಿಧೆಡೆಯಿಂದ ಆಗಮಿಸಿದ್ದ ಶರಣರನ್ನು ಸನ್ಮಾನಿಸಲಾಯಿತು. ವೀರೇಶ ಗದ್ದಿ ನಾಗನಕಲ್ ಮತ್ತು ಖಲೀಲ್ಸಾಬ ನಾಗನಕಲ್ ಕಾರ್ಯಕ್ರಮ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-35-1603391834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.