ಕಾರ್ಕಳ: ‘ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಸಾಮಾಜಿಕ ಬದ್ಧತೆ, ಸಾಂಪ್ರದಾಯದ ಉಳಿವಿಗೆ ಪೂರಕ. ಪ್ರತಿದಿನ ಬೇಗ ಎದ್ದು ದೇವರ ನಾಮಸ್ಮರಣೆ, ಮಂತ್ರ ಜಪಿಸಿದರೆ ಆಲಸ್ಯ ದೂರವಾಗಿ ಹುರುಪು ಮೂಡಿ ಏಕಾಗ್ರತೆ ಹೆಚ್ಚುತ್ತದೆ’ ಎಂದು ಪಡುಕುತ್ಯಾರು ಆನೆಗುಂದಿ ಸರಸ್ವತಿ ಸ್ವಾಮೀಜಿ ಹೇಳಿದರು.

ವಿಶ್ವ ಬಾಹ್ಮಣ ಯುವ ಸೇವಾ ಬಳಗ, ಮಹಿಳಾ ಬಳಗದ ದಶಮಾನೋತ್ಸವದ ಪ್ರಯುಕ್ತ ತಾಲ್ಲೂಕಿನ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ವೈಶ್ವಕರ್ಮಣ ಯಜ್ಞ, ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ವೇದಮೂರ್ತಿ ಪ್ರಸಾದ್ ತಂತ್ರಿ ಕಿನ್ನಿಗೋಳಿ ನೇತೃತ್ವ ವಹಿಸಿದ್ದರು. ಮುಂಬೈ ಉದ್ಯಮಿ ಕೃಷ್ಣ ವಿ. ಆಚಾರ್ಯ ಉದ್ಘಾಟಿಸಿದರು. ವಿಶ್ವ ಬ್ರಾಹ್ಮಣ ಯುವ ಸೇವಾ ಬಳಗ ಮತ್ತು ಮಹಿಳಾ ಬಳಗದ ಗೌರವ ಸಲಹೆಗಾರ ಪ್ರಸಾದ್ ತಂತ್ರಿ ಅಧ್ಯಕ್ಷತೆ ವಹಿಸಿದ್ದರು.

ಸಂಗೀತ ಕ್ಷೇತ್ರದ ಸಾಧಕ ಮಿಲನ್ ಕೆ.ಪಿ. ಆಚಾರ್ಯ, ರಂಗೋಲಿ ಕಲಾವಿದೆ ಗಾಯತ್ರಿ ಆಚಾರ್ಯ, ನಿರೂಪಕಿ ವಾರುಣಿ ನಾಗರಾಜ್ ಆಚಾರ್ಯ ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ಮಿಲನ್ ಆಚಾರ್ಯ, ನವ್ಯಾ ಪಿ. ಆಚಾರ್ಯ ಅವರಿಂದ ಸಂಗೀತ ರಸಮಂಜರಿ, ರಂಗೋಲಿ ಕಲಾವಿದೆ ಗಾಯತ್ರಿ ಆಚಾರ್ಯ ಅವರಿಂದ ಲೈಫ್ ಆರ್ಟ್ ಕಾರ್ಯಕ್ರಮ, ಸಂಘದ ಸದಸ್ಯರಿಂದ ಸಾಂಸ್ಕೃತಿಕ ನೃತ್ಯ ರೂಪಕ ಕಾರ್ಯಕ್ರಮ ನಡೆದವು. 10 ಮಂದಿ ವಟುಗಳಿಗೆ ಬ್ರಹ್ಮೋಪದೇಶ ನಡೆಯಿತು. ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಠದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ, ರಾಜೀವಿ ಕೆ.ವಿ. ಅಚಾರ್ಯ ಮುಂಡ್ಕೂರು, ಕಾಷ್ಠ ಶಿಲ್ಪಿ ಹರೀಶ್ ಆಚಾರ್ಯ ಸಂಪಿಗೆ, ವಕೀಲ ಸುರೇಶ್ ಆಚಾರ್ಯ ಸಂಕಲಕರಿಯ, ಉದ್ಯಮಿಗಳಾದ ಪೃಥ್ವಿರಾಜ್ ಆಚಾರ್ಯ ಕಿನ್ನಿಗೋಳಿ, ದಿನೇಶ್ ಆಚಾರ್ಯ ಶಿರ್ವ, ಗೌರವಾಧ್ಯಕ್ಷ ಎಂ.ಎಸ್. ದಿನೇಶ್, ಯುವ ಬಳಗದ ಅಧ್ಯಕ್ಷ ಶಾಂತರಾಮ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಕೃತಿ ಎಸ್. ಆಚಾರ್ಯ ಭಾಗವಹಿಸಿದ್ದರು.ಕಾರ್ಯದರ್ಶಿ ಗಿರೀಶ್ ಆಚಾರ್ಯ ಸ್ವಾಗತಿಸಿದರು. ಪೂರ್ವಿಕಾ ಆಚಾರ್ಯ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-28-760090922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.