ಬಾದಾಮಿ: ‘ಕರ್ನಾಟಕದ ಸರ್ವೋದಯ ಕಾರ್ಯಕರ್ತ ನೀಲಕಂಠಜಿ ಗಣಾಚಾರಿ ಅವರು ಮಹಾತ್ಮಾ ಗಾಂಧೀಜಿ ಮತ್ತು ಆಚಾರ್ಯ ವಿನೋಬಾ ಭಾವೆ ಅವರ ನಿಕಟವರ್ತಿಗಳಿಗಾಗಿ ದೇಶ ಸೇವೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಕರ್ನಾಟಕದ ಒಬ್ಬ ಶ್ರೇಷ್ಠ ಸಂತರಾಗಿದ್ದರು’ ಎಂದು ಕಪ್ಪತಗುಡ್ಡ ನಂದಿವೇರಿಮಠ ಶಿವಕುಮಾರ ಸ್ವಾಮೀಜಿ ಹೇಳಿದರು.

ಕುಮಾರೇಶ್ವರ ಸಭಾ ಭವನದಲ್ಲಿ ಭಾನುವಾರ ಮುಖ್ಯ ಶಿಕ್ಷಕಿ ಜಯಶ್ರೀ ಗಣಾಚಾರಿ (ಭಂಡಾರಿ ) ಸೇವಾ ನಿವೃತ್ತಿ ಮತ್ತು ‘ಗಾಂಧೀಜಿಯವರ ತತ್ವಾನುಯಾಯಿ ನೀಲಕಂಠಜಿ ಗಣಾಚಾರಿ ಸಂಸ್ಮರಣ ಗ್ರಂಥ’ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಹಾತ್ಮಾ ಗಾಂಧೀಜಿಯವರು 1924ರಲ್ಲಿ ಬೆಳಗಾವಿಗೆ ಬಂದಾಗ ನೀಲಕಂಠ ಗಣಾಚಾರಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಗಾಂಧೀಜಿ ಅವರ ಜೊತೆಗೆ ಸಾಬರಮತಿ ಮತ್ತು ವರ್ಧಾ ಆಶ್ರಮದಲ್ಲಿ ನೆಲೆಸಿ ಬ್ರಿಟಿಷರ ವಿರುದ್ಧ ಹೋರಾಟದ ರೂಪು ರೇಷೆಗಳನ್ನು ತಯಾರಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಸಲುವಾಗಿ ಕರ್ನಾಟಕದಿಂದ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದರು ’ ಎಂದು ಹೇಳಿದರು.

‘ಸ್ವಾತಂತ್ರ್ಯದ ನಂತರವೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ನೀಲಕಂಠಜಿ ಅವರು ಬರಿ ಮೈಯಲ್ಲಿ ಮತ್ತು ಬರಿಗಾಲಿನಿಂದ ಗ್ರಾಮಗಳಿಗೆ ತೆರಳುತ್ತ ಗ್ರಾಮೋದ್ಯೋಗ, ಗೋಹತ್ಯೆ ನಿಷೇಧ, ಮದ್ಯಪಾನ ನಿರ್ಮೂಲನೆ, ಕೃಷಿ ಅಭಿವೃದ್ಧಿ, ಹೈನುಗಾರಿಕೆ, ಸಹಕಾರ ಸಂಘಗಳ ಸ್ಥಾಪನೆ, ಶಿಕ್ಷಣಕ್ಕಾಗಿ ಶಾಲೆಗಳ ಆರಂಭ ಮುಂತಾದ ಕಾರ್ಯಗಳಿಗೆ ಜನಜಾಗೃತಿಯನ್ನುಂಟು ಮಾಡುತ್ತಿದ್ದರು’ ಎಂದರು.

‘ನೀಲಕಂಠಜಿ ಅವರಿಗೆ ಆರು ಮಕ್ಕಳು ಇದ್ದರು. ಸ್ವಾತಂತ್ರ್ಯದ ಹೋರಾಟದ ಸಲುವಾಗಿ ಮತ್ತು ಸ್ವಾತಂತ್ರ್ಯದ ನಂತರವೂ ಕುಟುಂಬದತ್ತ ತಿರುಗಿ ನೋಡಲಿಲ್ಲ. ಮಹಾತ್ಮ ಗಾಂಧೀಜಿಯವರಂತೆ ಜನ ಜಾಗೃತಿಗೆ ನಾಡನ್ನು ಸುತ್ತು ಹಾಕುತ್ತ ವೈರಾಗ್ಯ ಮೂರ್ತಿಯಾಗಿದ್ದರು’ ಎಂದು ತಿಳಿಸಿದರು.

‘ನಾಡಿನ ಸರ್ವೋದಯ ಕಾರ್ಯಕರ್ತ ನೀಲಕಂಠಜಿ ಗಣಾಚಾರಿ ಅವರ ದೇಶಾಭಿಮಾನ, ನಿಸ್ವಾರ್ಥ ಸೇವೆಯನ್ನು ಯುವಕರು ಅರಿತುಕೊಳ್ಳಬೇಕಿದೆ. ಅವರ ಚರಿತ್ರೆಯನ್ನು ಅಧ್ಯಯನ ಮಾಡಬೇಕು ’ ಎಂದು ಪ್ರಾಧ್ಯಾಪಕ ಚಂದ್ರಶೇಖರ್ ಹೆಗಡೆ ಹೇಳಿದರು.

‘ಭಾರತೀಯ ಪರಂಪರೆಯಲ್ಲಿ ಅನೇಕ ಶರಣರು, ದಾರ್ಶನಿಕರು ಜೀವನದ ಮೌಲ್ಯಗಳನ್ನು ಸಮಾಜಕ್ಕೆ ಕೊಟ್ಟಿರುವಂತೆ ಕರ್ನಾಟಕದ ಸರ್ವೋದಯ ಕಾರ್ಯಕರ್ತ ನೀಲಕಂಠಜಿ ಅವರು ದೇಶಾಭಿಮಾನ ಮತ್ತು ಸಾಮಾಜಿಕ ಮೌಲ್ಯಗಳನ್ನು ಕೊಟ್ಟಿದ್ದಾರೆ ಅವರ ಆದರ್ಶಗಳನ್ನು ತಿಳಿದುಕೊಳ್ಳಬೇಕು’ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ಎಸ್.ಆರ್. ಮನಹಳ್ಳಿ ಹೇಳಿದರು.

ಎಂ.ಬಿ. ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ಎಲ್.ಬಿ. ಕುರ್ತಕೋಟಿ, ಅಜೀಜ್ ಮುಲ್ಲಾ ವೇದಿಕೆಯಲ್ಲಿ ಇದ್ದರು.

ಸೇವಾ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಮತ್ತು ಪುಸ್ತಕ ಸಂಪಾದಕಿ ಜಯಶ್ರೀ ಗಣಾಚಾರಿ (ಭಂಡಾರಿ) ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-19-1300952094

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.