ಕಾರವಾರ: ‘ಕ್ಷತ್ರೀಯ ಸಮಾಜದ ಆರಾಧ್ಯ ದೈವವಾಗಿರುವ ಅಗ್ನಿಬನ್ನಿರಾಯರು ಭಾರತೀಯ ಪರಂಪರೆ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಕೇವಲ ಒಂದೇ ಸಮಾಜಕ್ಕೆ ಸೀಮಿತರಾಗದೇ, ಸಮಸ್ತ ಜನಾಂಗದ ಏಳಿಗೆಗಾಗಿ ಶ್ರಮಿಸಿದವರು’ ಎಂದು ಜಿಲ್ಲಾ ಚುನಾವಣಾ ಶಾಖೆಯ ತಹಶೀಲ್ದಾರ್ ಪ್ರಮೋದ ನಾಯ್ಕ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಅಗ್ನಿಬನ್ನಿರಾಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ಷಾತ್ರಗುಣ ಸಮಾಜದ ಹಿತ ಕಾಯಲು, ಧ್ವನಿ ಇಲ್ಲದವರ ರಕ್ಷಣೆಗೆ ಬಳಕೆಯಾಗಬೇಕು ಎಂಬುದನ್ನು ಬನ್ನಿರಾಯ ಪ್ರತಿಪಾದಿಸಿದ್ದರು. ಸತ್ಯ ಮತ್ತು ಧರ್ಮಕ್ಕೆ ಹೋರಾಡುವ ಸಂದೇಶ ಸಾರಿದ್ದರು’ ಎಂದರು.

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಎ.ಜಿ. ಕೇರಳೆಕರ, ‘ಕ್ಷತ್ರಿಯ ಜನಾಂಗದ ಅಗ್ನಿಬನ್ನಿರಾಯರು ಸರ್ವಜನರ ಕಲ್ಯಾಣಕ್ಕಾಗಿ ತಮ್ಮ ಜೀವನ ಸಮರ್ಪಿಸಿಕೊಂಡವರು. ತಿಗಳ ಸಮಾಜದ ಆರಾಧ್ಯದೈವ್ಯ ಅಷ್ಟೇ ಅಲ್ಲದೇ ಸರ್ವ ಜನಾಂಗದ ಆರಾಧ್ಯ ದೈವರಾಗಿದ್ದಾರೆ. ಜನರಲ್ಲಿ ಮಾನವೀಯತೆ, ಕರುಣೆ ಮತ್ತು ಧರ್ಮದ ಮೌಲ್ಯಗಳನ್ನು ಬಿತ್ತಿದ್ದರು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಕುಮಾರ ನಾಯ್ಕ, ಸ್ಟಾರ್ ಚಾಯ್ಸ್ ತಂಡದ ರಾಜನ್ ಬಾನಾವಳಿಕರ, ಎಲ್. ತ್ರಿವೇಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-20-1401164169

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.