ಕಾರವಾರ: ‘ಜಗತ್ತು ಯಾವುದೇ ವ್ಯತ್ಯಾಸವಿಲ್ಲದೇ, ಬಯಸುತ್ತಿರುವ ಸುಖ, ಶ್ರೇಯಸ್ಸು ಧರ್ಮದಿಂದ ಮಾತ್ರ ಸಿಗುತ್ತದೆ. ಲೌಕಿಕ ಕಾರ್ಯದಿಂದ ತಾತ್ಕಾಲಿಕವಾಗಿ ಸುಖ ಸಿಗುತ್ತದೆ. ಧರ್ಮ ಕಣ್ಣಿಗೆ ಕಾಣದೇ ಪ್ರಪಂಚವನ್ನು ನಡೆಸುತ್ತಿದೆ’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.

‘ಸನಾತನ ಹಿಂದೂ ಧರ್ಮ ಶ್ರೇಷ್ಠವಾದದ್ದು. ಧರ್ಮದ ಆಚರಣೆಯಿಂದ ಶ್ರೇಯಸ್ಸು ಸಿಗಲಿದೆ. ಈ ಧರ್ಮ ಜಗತ್ತಿಗೆ ಆಧಾರವಾಗಿದೆ. ಧರ್ಮ ಇಲ್ಲದಿದ್ದರೆ ಕಷ್ಟ ಪಟ್ಟರೂ ಫಲ ಸಿಗದು. ಯಾರೇ ಆಕ್ಷೇಪಿಸಿದರೂ ಧರ್ಮ ಬದಲಾಗದು. ಈ ಧರ್ಮಕ್ಕೆ ತೊಂದರೆಯಾದರೆ ಪ್ರಪಂಚಕ್ಕೆ ತೊಂದರೆ’ ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಜಿ.ಉಮಾ, ‘ಸನಾತನ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಅರಿವು ನೀಡದಿರುವುದು ಬಹುಸಂಖ್ಯಾತರಾದ ನಮ್ಮ ದೌರ್ಬಲ್ಯ. ಸಮಾಜ ಒಂದಾಗಿ ಒಗ್ಗಟ್ಟಿನಿಂದ ಇರುವ ಸಂದರ್ಭ ಈಗ ಎದುರಾಗಿದೆ. ಸನಾತನ ಸಂಸ್ಕೃತಿ ಉಳಿಯಲು ಮಾತೆಯರೇ ಕಾರಣ. ನಮ್ಮ ಮಕ್ಕಳನ್ನು ಸದೃಢವಾಗಿ ಬೆಳೆಸಬೇಕಿದೆ’ ಎಂದರು.

ಕಾರ್ಯಕ್ರಮ ಆಯೋಜಿಸಿದ್ದ ಬಿಜಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು ಕುಟುಂಬದ ಜೊತೆ ಗುರುಕಾಣಿಕೆ ಅರ್ಪಿಸಿದರು. ನಾಟ್ಯಶಾರದೆ ಮೂರ್ತಿ, ಬೆಳ್ಳಿ ಅಭಿನಂದನಾ ಪತ್ರ ನೀಡಿದರು. ಶಿವಮೂರ್ತಿ ಜೋಯಿಸ್ ಅಭಿನಂದನಾ ಪತ್ರ ವಾಚಿಸಿದರು. ರವಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರ್ಬತ್ ನಾಯ್ಕ ದಂಪತಿ ದೂಳಿ ಪೂಜೆ ನೆರವೇರಿಸಿದರು. ಪದ್ಮಜಾ ಜೋಯಿಸ್ ಪ್ರಾರ್ಥನೆ ನೆರವೇರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-20-1081076561

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.