ಕಾಸರಗೋಡು: ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಮತ್ತು ಕಳಿಯಾಟ ಮಹೋತ್ಸವ ಏ.18ರಿಂದ 28ರವರೆಗೆ ನಡೆಯಲಿದೆ.

ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇರುವೈಲು ಕೇಶವ ತಂತ್ರಿ ವೈದಿಕ ವಿಧಿವಿಧಾನದ ನೇತೃತ್ವ ವಹಿಸುವರು ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎ.ಮಾಧವನ್ ನಾಯರ್ ಕಳಕ್ಕರ ತಿಳಿಸಿದರು.

18ರಂದು ಬೆಳಿಗ್ಗೆ 10 ಗಂಟೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ, 11 ಗಂಟೆಗೆ ಮಾತೃ ಸಂಗಮ, 19ರಂದು ಮಧ್ಯಾಹ್ನ 3.30ಕ್ಕೆ ಧಾರ್ಮಿಕ ಸಭೆ, 20ರಂದು ಮಧ್ಯಾಹ್ನ 3 ಗಂಟೆಗೆ ನಮ್ಮೂರ ಇತಿಹಾಸ ಸಂವಾದ, 21ರಂದು ಮಧ್ಯಾಹ್ನ 3 ಗಂಟೆಗೆ ಸರ್ವ ಧರ್ಮ ಸಮ್ಮೇಳನ, 22ರಂದು ಮಧ್ಯಾಹ್ನ 3 ಗಂಟೆಗೆ ಚರಿತ್ರೆ ವಿಚಾರ ಸಂಕಿರಣ, 23ರಂದು ಮಧ್ಯಾಹ್ನ 12 ಗಂಟೆಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. 25, 26, 27, 28ರಂದು ಕಳಿಯಾಟ ನಡೆಯಲಿದ್ದು, ವಿವಿಧ ದೈವಗಳ ಕೋಲ ನಡೆಯಲಿದೆ ಎಂದರು.

ಕುಞಿಕೃಷ್ಣನ್ ಪನಿಚ್ಚಿಲಿಂಕಾಲ್, ಪಿ.ವಿ.ಗೋಪಾಲನ್, ಪಿ.ವಿ.ಶ್ರೀಧರನ್, ಬಿ.ವಿಜಯನ್, ಕೆ.ಅರವಿಂದನ್, ರತೀಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-29-1473842939

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.