ಕೆಂಭಾವಿ: ‘ರವಿಶಂಕರ್ ಗುರೂಜಿ ಅವರ ಸಂದೇಶ ಸಮಾಜಕ್ಕೆ ದಾರಿದೀಪ’ ಎಂದು ಆರ್ಟ್ ಆಫ್ ಲೀವಿಂಗ್ನ ಪ್ರಮುಖ ಮೋಹನರೆಡ್ಡಿ ಡಿಗ್ಗಾವಿ ಹೇಳಿದರು.

ಪಟ್ಟಣದ ಸ್ಪಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರ್ಟ್ ಆಫ್ ಲೀವಿಂಗ್ ಸ್ಥಾಪಕ ರವಿಶಂಕರ ಗುರೂಜಿ ಅವರ 70ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುರೂಜಿ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಸವಿಸ್ತಾರವಾಗಿ ಹೇಳಿದ ಅವರು, ‘ರವಿಶಂಕರ ಗುರೂಜಿ ಕೇವಲ ಒಬ್ಬ ಆಧ್ಯಾತ್ಮಿಕ ಗುರುಗಳಲ್ಲ, ಅವರು ಜಗತ್ತಿಗೆ ಶಾಂತಿ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ಚೇತನ. ಸುದರ್ಶನ ಕ್ರಿಯೆಯ ಮೂಲಕ ಕೋಟ್ಯಾಂತರ ಜನರ ಜೀವನದಲ್ಲಿ ನೆಮ್ಮದಿ ತಂದಿದ್ದಾರೆ. ಒತ್ತಡ ಮುಕ್ತ ಸಮಾಜ ನಿರ್ಮಾಣ ಮಾಡುವ ಅವರ ಸಂಕಲ್ಪ ನಮಗೆಲ್ಲರಿಗೂ ಪ್ರೇರಣೆಯಾಗಿದೆ’ ಎಂದರು.

ಗುರೂಜಿ ಅವರ ಸರಳತೆ, ಕೊಡುಗೆ ಶ್ಲಾಘಿಸಿದರು. ರಾಘವೇಂದ್ರ, ನವೀನ, ಶ್ರೀನಿವಾಸ, ವೆಂಗಮಾಂಬ.ಎಸ್, ರೇವಣಸಿದ್ದಯ್ಯ ಮಠ, ಮಧು ಬಂದೆ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-30-125718053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.