ಕಿಕ್ಕೇರಿ: ಪಟ್ಟಣದ ವಿಪ್ರ ಮಹಿಳಾ ಸಮಾಜದವರು ಸುಬ್ಬರಾಯಛತ್ರದಲ್ಲಿ ಅಧಿಕಮಾಸದಲ್ಲಿ ನೆಮ್ಮದಿಗಾಗಿ ಭಾನುವಾರ ಸಾಮೂಹಿಕವಾಗಿ ಲಲಿತ ಸಹಸ್ರನಾಮ ಪಠಣ ನೆರವೇರಿಸಿದರು.

ಗುರುವಾರದಿಂದ ಆರಂಭ ವಾದ ಲಲಿತ ಸಹಸ್ರನಾಮ ಪಠಣವನ್ನು ಭಾನುವಾರ ಒಂದು ಸಾವಿರ ಸ್ತೋತ್ರಕ್ಕೆ ಸಮಾಪ್ತಿಗೊಳಿಸಿದರು. ಹೋಬಳಿಯ ವಿವಿಧೆಡೆಯಿಂದ ವಿಪ್ರ ಮಹಿಳೆಯರು ಸಂಭ್ರಮದಿಂದ ಭಾಗವಹಿಸಿದ್ದರು. ವಿಪ್ರ ಬಾಂಧವ ಸೇವಾ ಸಮತಿ ಸಹಕಾರದಲ್ಲಿ ನಿತ್ಯ ಸಂಜೆ ಮಹಿಳೆಯರು ಒಂದೆಡೆ ಸೇರಿ ಶಂಕರಾಚಾರ್ಯರು, ಜಗನ್ಮಾತೆ ಮಹಾಲಕ್ಷ್ಮೀ , ಸರಸ್ವತಿ ದೇವಿ ಪೂಜೆ ನಡೆಸಿದರು. ಆರತಿ ಬೆಳಗಿ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿದರು.ವೇದಬ್ರಹ್ಮ ಅನಿಲ್ಶಾಸ್ತ್ರೀ ಮಾರ್ಗದರ್ಶನದಲ್ಲಿ ಲಲಿತ ಸಹಸ್ರಹೋಮ, ಗಣಹೋಮ ನಡೆದು, ವಿವಿಧ ಪೂಜೆಗಳು , ಅಷ್ಟದ್ರವ್ಯಗಳ ಸೇವೆ ನೆರವೇರಿತು. ಮಹಮಂಗಳಾರತಿ, ತೀರ್ಥ ಪ್ರಸಾದ, ಅನ್ನ ಪ್ರಸಾದ ಇತ್ತು.

ಭಾಗ್ಯಮ್ಮ, ಸುಮಾ, ವೇದಾವತಿ, ಹೇಮಲತಾ, ಮಧು, ಗಿರಿಜಾ, ಸುಧಾಮಣಿ, ಸುರಭಿ, ಮೇಘನಾ, ಅನುರಾಧ, ಲಕ್ಷ್ಮೀ , ಕಲಾವತಿ, ಶಶಿಕಲಾ, ರಜಿನಿ, ಅನಂತಸ್ವಾಮಿ, ವೆಂಕಟೇಶ್, ಮಹಾಬಲರಾವ್, ಮಹಾಬಲಶರ್ಮ, ಅನಿಲ್ಶಾಸ್ತ್ರೀ , ಸೀತಾರಾಮು, ಚಂದ್ರಶೇಖರಯ್ಯ, ಕೆ.ಎಸ್. ಪರಮೇಶ್ವರಯ್ಯ, ನರಸಿಂಹ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-40-1445694851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.