ಮಡಿಕೇರಿ: ಏಕಪತ್ನಿವ್ರತಸ್ಥನಾಗಿರುವ, ಪಿತೃವಾಕ್ಯ ಪರಿಪಾಲನೆ ಮಾಡಿದ ಮರ್ಯಾದಾ ಪುರುಷೋತ್ತಮ, ಧರ್ಮದ ಪ್ರತಿರೂಪವೇ ಆದ ಶ್ರೀರಾಮಚಂದ್ರನಲ್ಲದೇ ಮತ್ತಾರು ನಮಗೆ ಆದರ್ಶರಾಗಲು ಸಾಧ್ಯ ಎಂದು ಬೆಂಗಳೂರಿನ ಹಲಸೂರಿನ ರಾಮಕೃಷ್ಣಮಠದ ಸ್ವಾಮಿ ಬೋಧಸ್ವರೂಪಾನಂದ ಮಹಾರಾಜ್ ಹೇಳಿದರು.

ಇಲ್ಲಿನ ಮಲ್ಲಿಕಾರ್ಜುನಗರದ ಕೋದಂಡರಾಮ ದೇಗುಲದಲ್ಲಿ ರಾಮನವಮಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀರಾಮ ಭಾರತದ ಆತ್ಮ, ಆಧ್ಯಾತ್ಮಿಕತೆ ಜೀವನದೊಂದಿಗೆ ನಿತ್ಯ ಆರಾಧಿಸುವ ಸಜೀವ ಆತ್ಮ. ರಾಮನ ನಾಮ ಸ್ಮರಣೆ ನಿತ್ಯ ಮಾಡಿದರೆ ಎಲ್ಲ ಅಪವಿತ್ರ, ಪಾಪಗಳನ್ನು ದೂರ ಮಾಡುತ್ತದೆ. ಭಕ್ತರ ಈಡೇರಿಕೆಗಳನ್ನೂ ಆತ ಪೂರೈಸುತ್ತಾನೆ. ಲೋಕದಲ್ಲಿ ಎಲ್ಲರ ಆಶ್ರಯಧಾತನೂ ರಾಮನೇ ಎಂಬದು ಸಹಸ್ರಾರು ವರ್ಷಗಳ ನಂಬಿಕೆ ಎಂದರು.

ಮನುಷ್ಯನಾಗಿ ನೋಡಿದಾಗ ರಾಮ ಪುತ್ರ, ಪತಿ, ರಾಜ, ಮುತ್ಸದ್ದಿಯಾಗಿ ಆದರ್ಶಪುರುಷನಾಗಿದ್ದಾರೆ. ಶತ್ರುಗಳ ಮೇಲೆಯೂ ಆತನಿಗೆ ಅನುಕಂಪ ಇತ್ತು. ಸಕಲ ಸಂಪನ್ಮೂಲಗಳ ಅತ್ಯುತ್ತಮ ನಿರ್ವಾಹಕ. ಮರ್ಯಾದಪುರುಷೋತ್ತಮ ಆತ. ಎಂತಹ ಕಷ್ಟಗಳಲ್ಲೂ ಮರ್ಯದೆಯನ್ನು ಮೀರಿ ಆತ ನಡೆಯಲಿಲ್ಲ ಎಂದರು.

ಸುಖ ಬಂದರೆ ಹಿಗ್ಗದೇ ದುಃಖ ಬಂದರೆ ಕುಗ್ಗದೇ ಸಮಚಿತ್ತತೆಯನ್ನು ಕಾಪಾಡಿಕೊಂಡಾತ ರಾಮ. ತಂದೆ ಬಹುಪತ್ನಿತ್ವ ಅನುಸರಿಸಿದರೂ ತಾನು ಏಕಪತ್ನಿ ವ್ರತಸ್ಥನಾಗಿದ್ದುಕೊಂಡಿದ್ದರು ಎಂದು ಹೇಳಿದರು.

ವಾಲ್ಮೀಕಿ ರಾಮನನ್ನು ಸತ್ಯಪರಾಕ್ರಮ ಎಂದು ಕರೆಯುತ್ತಾರೆ. ತಂದೆ ನೀಡಿದ ಸತ್ಯವಚನವನ್ನು ಪಾಲಿಸುವುದು ನನ್ನ ಧರ್ಮ ಎಂದು ಅದನ್ನೇ ಪಾಲಿಸಿದವರು ರಾಮ ಎಂದರು.

ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಪರಹಿತಾನಂದ ಮಹಾರಾಜ್ ಅವರು ಹಾರ್ಮೋನಿಯಂ ನುಡಿಸಿ ದೇವರಹಾಡು ಹಾಡಿ ಗಮನ ಸೆಳೆದರು. ರಾಮ ರಾಮ ರಾಮ ರಾಮ ರಾಮ ರಾಮ ನಾಮ ತಾರಕಂ, ರಾಮಕೃಷ್ಣ ವಾಸುದೇವ ಭಕ್ತಿ ಮುಕ್ತಿ ಸಾಧಕಂ... ಎಂಬ ಭಜನೆ ಹಾಡಿದರು.

ನಂತರ ಮಾತನಾಡಿದ ಅವರು, ’ನಮ್ಮ ಹೃದಯದಲ್ಲಿ ಭಗವಂತ ಇರಲಿ. ದೇವರಲ್ಲಿ ನಂಬಿಕೆ ಇರಲಿ. ಅಪಾರವಾದ ಶ್ರದ್ಧೆಯನ್ನಿಟ್ಟುಕೊಳ್ಳಬೇಕು. ರಾಮ ನಾಮ ಮುಕ್ತಿಗೆ ದಾರಿ‘ ಎಂದರು.

ಕೋದಂಡ ರಾಮೋತ್ಸವ ಸಮಿತಿಯ ಪ್ರಧಾನ ಸಲಹೆಗಾರ ಜಿ.ರಾಜೇಂದ್ರ ಮಾತನಾಡಿ, ’ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಮ್ಮ ಮನಸ್ಸನ್ನು ಶುದ್ಧಗೊಳಿಸೋಣ‘ ಎಂದು ಹೇಳಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಜನೆಯ ಮೂಲಕ ಕಾರ್ಯಕ್ರಮ ಅಂತ್ಯಗೊಂಡಿತು.

ಸೋಮನಾಥಾನಂದಪುರಿ ಸ್ವಾಮೀಜಿ, ಸಮಿತಿಯ ಮುಖಂಡರಾದ ಜಿ.ಚಿದ್ವಿಲಾಸ್, ವಿನೋದ್, ನಂಜುಂಡ, ತಿಮ್ಮಯ್ಯ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-51-341149914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.