ಸುಂಟಿಕೊಪ್ಪ: ತಮ್ಮ ಶ್ರೀಮಂತ ಮತ್ತು ವಿಶಿಷ್ಟವಾದ ಮೂಲ ಸಂಸ್ಕೃತಿಯನ್ನು ಪ್ರಾಮಾಣಿಕ ರೀತಿಯಲ್ಲಿ ಸಂರಕ್ಷಿಸಿಕೊಂಡು ಹೋಗುವ ಮೂಲಕ ಕೊಡವ ಸಮುದಾಯವರು ಮಾದರಿಯಾಗಿದ್ದಾರೆ. ಆ ಮೂಲಕ ಪ್ರಪಂಚದಲ್ಲಿಯೇ ಕೊಡವರು ತಮ್ಮ ತನವನ್ನು ಮೆರೆಯುತ್ತಿದ್ದಾರೆ ಎಂದು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

ಸಮೀಪದ ನಾದಾಪುರದಲ್ಲಿ ಕೊಡವ ಸಮಾಜದ ನೂತನ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡವರ ಪ್ರಾಮಾಣಿಕತೆ ಇಂದಿನ ಸಮಾಜಕ್ಕೆ ಅತ್ಯಗತ್ಯ. ಜಗತ್ತು ಕೂಡ ಪ್ರಾಮಾಣಿಕ ಜನರನ್ನೇ ಇಂದಿನ ದಿನಗಳಲ್ಲಿ ಹೆಚ್ಚು ಬಯಸುತ್ತಿದೆ ಎಂದೂ ಅವರು ಹೇಳಿದರು.

ಎಲ್ಲರೂ ಆಧುಕತೆಯತ್ತ ಆಕರ್ಷಿತರಾಗುತ್ತಿದ್ದರೆ, ಕೊಡವರು ಮಾತ್ರ ತಮ್ಮ ಹಳೇ ಸಂಸ್ಕೃತಿಯ ಬುನಾದಿಯೊಂದಿಗೆ ಆಧುನಿಕತೆಯನ್ನೂ ಅಳವಡಿಸಿಕೊಂಡು ಪ್ರಬಲ ಮತ್ತು ಶ್ರೀಮಂತ ಸಂಸ್ಕೖತಿಯನ್ನು ಹೊಂದಿದ ಜನಾಂಗವಾಗಿದ್ದಾರೆ. ಕೊಡವರ ಈ ಜೀವನ ಕ್ರಮ ಎಲ್ಲ ಸಮುದಾಯಕ್ಕೂ ಮಾದರಿಯಾಗಿದೆ. ತೀವ್ರ ರೀತಿಯಲ್ಲಿ ಬೆಳೆಯುತ್ತಾ ಸಾಗಿರುವ ನಮ್ಮ ನಾಗರಿಕತೆಯಲ್ಲಿ ಯಾವಾಗ ನಾವು ಸಂಸ್ಕೃತಿಯನ್ನೂ ಒಳಗೊಳ್ಳುತ್ತೆವೆಯೋ ಅಂತಹ ಸಂದರ್ಭ ನಮ್ಮ ನಾಗರಿಕತೆ ಎಂದಿಗೂ ನಶಿಸಲು ಸಾಧ್ಯವಿಲ್ಲ. ಕೊಡಗಿನ ಅಭಿವೃದ್ಧಿಗಾಗಿ, ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಾಕಷ್ಟು ಅನುದಾನ ನೀಡಿದ್ದೆ. ಅನುದಾನ ನೀಡಿದ್ದು ಖಂಡಿತಾ ಸಾಧನೆಯಲ್ಲ. ಕೊಡಗಿನ ಜನರು ಸರ್ಕಾರಕ್ಕೆ ನೀಡಿದ್ದ ಆರ್ಥಿಕ ಸಂಪನ್ಮೂಲವನ್ನು ಮತ್ತೆ ಕೊಡಗಿನ ಜನತೆಗೆ ನೀಡುವ ಮೂಲಕ ಪುಣ್ಯ ಸಂಪಾದನೆಯ ಅವಕಾಶ ಮಾತ್ರ ತನ್ನದಾಯಿತು. ಇದರಲ್ಲಿ ಹೆಚ್ಚುಗಾರಿಕೆಯಿಲ್ಲ ಎಂದು ಭಾವನಾತ್ಮಕವಾಗಿ ಹೇಳಿದರು.

ಜಗತ್ತಿನಲ್ಲಿ ಅತ್ಯಂತ ಗುಣವಾಗಿರುವ ಕೖತಜ್ಞತಾ ಸ್ಮರಣೆಯು ಕೊಡವರಿಗೆ ಸಿದ್ಧಿಸಿದೆ. ತಮಗೆ ನೀಡಿದ ನೆರವನ್ನು ಕೊಡವರು ಎಂದಿಗೂ ಮರೆಯುವುದಿಲ್ಲ. ಕೊಡವರಿಗೆ ನೀಡಿದ ನೆರವು ಸದಾ ಕೖತಜ್ಞತಾಪೂರ್ವಕವಾಗಿ ಸ್ಮರಿಸಲ್ಪಟ್ಟು, ಮತ್ತಷ್ಟು ಕೊಡುಗೆ ನೀಡಲು ಮನಸ್ಸು ಪ್ರೇರೇಪಿಸುತ್ತದೆ ಎಂದೂ ಹೇಳಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು– ಮೈಸೂರು ಸಂಸದ ಯದುವೀರ್ ಒಡೆಯರ್, ಮಾದಾಪುರ ಕೊಡವ ಸಮಾಜದ ಭವನಕ್ಕೆ ಸಂಸದರ ಅನುದಾನದಲ್ಲಿ ₹25 ಲಕ್ಷ ನೀಡುವುದಾಗಿ ಘೋಷಿಸಿ, ಇದು ಕೊಡವರಿಗೆ ಸಲ್ಲಬೇಕಾದ ಗೌರವದ ಅನುದಾನ ಎಂದರಲ್ಲದೇ, ಕೊಡವ ಸಂಸ್ಕೃತಿ ಸಂರಕ್ಷಣೆಗೆ ಈ ಭವನ ಸೂಕ್ತ ವೇದಿಕೆಯಾಗಲಿ. ತಮ್ಮ ಮೂಲ ಸಂಸ್ಕೃತಿ, ಸಂಪ್ರದಾಯ ಸಂರಕ್ಷಣೆಗೆ ಕೊಡವ ಸಮುದಾಯ ಆದ್ಯತೆ ನೀಡುತ್ತಿರುವುದು ಮಾದರಿಯಾಗಿದೆ. ಮೂಲ ಸಂಸ್ಕೃತಿ ಸಂರಕ್ಷಣೆ ನಿಟ್ಟಿನಲ್ಲಿ ಕೊಡವರ ಪ್ರಯತ್ನ ಕರ್ನಾಟಕದ ಇತರ ಸಮುದಾಯವರಿಗೂ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.

ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದ ಸಂದರ್ಭ ಕೆಆರ್ಎಸ್, ಹಾರಂಗಿ ಸೇರಿ ಕೊಡಗು, ಮೈಸೂರಿನ ವಿವಿಧ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ನೀಡಿ ಸಹಕರಿಸಿದ್ದನ್ನೂ ಯದುವೀರ್ ಸ್ಮರಿಸಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವರ ಸಂಸ್ಕೃತಿಯ ಹಿರಿಮೆಯ ಸಂರಕ್ಷಣೆಗಾಗಿ ಕೊಡವ ಸಮಾಜಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಮಾದಾಪುರ ಕೊಡವ ಸಮಾಜದ ಕಟ್ಟಡದ ಉಳಿದ ಕಾಮಗಾರಿಗಳಿಗೆ ಶಾಸಕರ ಅನುದಾನದಿಂದ ₹10 ಲಕ್ಷ ನೀಡುವುದಾಗಿ ತಿಳಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಮಾದಾಪುರ ವ್ಯಾಪ್ತಿಗೆ ಈ ನೂತನ ಕಟ್ಟಡ ಐನ್ ಮನೆಯಿದ್ದಂತೆ. ಪ್ರಬಲವಾದ ಪರಂಪರೆ ಇರುವುದರಿಂದಾಗಿಯೇ ಕೊಡವರ ಅಸ್ತಿತ್ತವನ್ನು ಎಂದಿಗೂ ಅಲುಗಾಡಿಸಲಾಗುವುದಿಲ್ಲ. ಒಂದು ಲಕ್ಷ ಜನಸಂಖ್ಯೆಯಿದ್ದರೂ ತಮ್ಮ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳಿಂದಾಗಿ ಕೊಡವರು ದೇಶದಾದ್ಯಂತ ಹೆಸರುವಾಸಿಯಾಗಿದ್ದಾರೆ ಎಂದರು.

ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್ ಮಾತನಾಡಿ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊಡವರ ಮೇಲಿನ ವಿಶೇಷ ಅಭಿಮಾನದಿಂದ ಮಾದಾಪುರ ಕೊಡವ ಸಮಾಜದ ಭವನ ನಿರ್ಮಾಣಕ್ಕಾಗಿ ₹1 ಕೋಟಿ ಅನುದಾನನ್ನು ಬಿಡುಗಡೆ ಮಾಡಿದ್ದರು. ಕೊಡವ ಸಮುದಾಯದ ಅಭಿವೃದ್ಧಿಗಾಗಿ ನೀಡಿದ್ದ ₹10 ಕೋಟಿ ಅನುದಾನದಲ್ಲಿ ₹5 ಕೋಟಿಯನ್ನು ಕೊಡವ ಸಮಾಜದ ಒಕ್ಕೂಟಕ್ಕೆ ನೀಡಲಾಗಿದ್ದು, ಉಳಿದ ₹6 ಕೋಟಿ ಅನುದಾನವನ್ನು ಎಲ್ಲ ಕೊಡವ ಸಮಾಜಗಳಿಗೆ ತಲಾ ₹10 ಲಕ್ಷಗಳಂತೆ ನೀಡಲಾಗಿತ್ತು. ಮಡಿಕೇರಿಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆಧುನೀಕರಣಕ್ಕೆ ₹200 ಕೋಟಿ ಅನುದಾನ ನೀಡಿದ್ದಲ್ಲದೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಮೊದಲ ಬಾರಿ ₹1 ಕೋಟಿ ಅನುದಾನ ನೀಡಿದ್ದರು ಎಂದೂ ಸ್ಮರಿಸಿದರು.

ಬೆಂಗಳೂರು ಕೊಡವ ಸಮಾಜಕ್ಕೆ 7 ಎಕರೆ ಜಮೀನು ಕೊಡಿಸುವಲ್ಲೂ ಬೊಮ್ಮಾಯಿ ಪ್ರಮುಖ ಪಾತ್ರ ವಹಿಸಿದ್ದರು. ಶೀಘ್ರ ಬೊಮ್ಮಾಯಿ ಅವರು ಕೇಂದ್ರ ಸಚಿವರಾಗಲಿ ಎಂದು ಹಾರೈಸಿದರು.

ವಿಧಾನ ಪರಿಷತ್ ಮಾಜಿ ಶಾಸಕಿ ಶಾಂತೆಯಂಡ ವೀಣಾ ಅಚ್ಚಯ್ಯ, ಎಸ್ಎಲ್ಎನ್ ಸಂಸ್ಥೆಯ ಉದ್ಯಮಿ ಸಾತಪ್ಪನ್, ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನುಮೇದಪ್ಪ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ, ಉದ್ಯಮಿಗಳಾದ ವಿಶ್ವನಾಥನ್, ನಾಪಂಡ ಮುತ್ತಪ್ಪ, ತೆರಿಗೆ ಇಲಾಖೆಯ ಆಯುಕ್ತ ಜಯರಾಮ್, ಪದ್ಮಶ್ರೀ ಪುರಸ್ಕೃತ ಮಚ್ಚಂಡ ರೋಹನ್ ಬೋಪಣ್ಣ ಅವರ ತಂದೆ ಮಚ್ಚಂಡ ಬೋಪಣ್ಣ, ಸಮಾಜದ ಉಪಾಧ್ಯಕ್ಷ ಪಾಸುರ ಎನ್.ಉತ್ತಪ್ಪ, ಆಡಳಿತ ಮಂಡಳಿಯ ನಿರ್ದೇಶಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-813229383

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.