ಕುಷ್ಟಗಿ: ತಾಲ್ಲೂಕಿನ ಬಣಜಿಗ ಸಮಾಜ ಸಂಘಟನೆ ನೂತನ ಅಧ್ಯಕ್ಷರನ್ನಾಗಿ ಶಶಿಧರ ಕವಲಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.

ಪಟ್ಟಣದಲ್ಲಿ ಶನಿವಾರ ನಡೆದ ಸಮಾಜದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ‘ಬಣಜಿಗ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆ ಸಂಘಟನೆ ಶ್ರಮಿಸಬೇಕು. ಯುವಪೀಳಿಗೆಯಲ್ಲಿ ಸಂಘಟನಾತ್ಮಕ ಶಕ್ತಿ ವೃದ್ಧಿಸುವುದಕ್ಕೆ ನೂತನ ಪದಾಧಿಕಾರಿಗಳು ಮುತುವರ್ಜಿವಹಿಸಬೇಕು’ ಎಂದು ಹೇಳಿದರು.

ನೂತನ ಅಧ್ಯಕ್ಷ ಶಶಿಧರ ಕವಲಿ ಮಾತನಾಡಿ, ‘ಸಮಾಜ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ, ಹಿರಿಯರ ಮಾರ್ಗದರ್ಶನ, ಯುವಕರ ಸಲಹೆಗಳೊಂದಿಗೆ ಸಮಾಜದಲ್ಲಿ ಬಣಜಿಗ ಸಮುದಾಯದ ಗೌರವ ಹೆಚ್ಚಿಸಲು ಪ್ರಯತ್ನ ನಡೆಸುತ್ತೇನೆ’ ಎಂದು ಹೇಳಿದರು.

ಬಣಜಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ಪ್ರಮುಖರಾದ ವಿಶ್ವನಾಥ ಕನ್ನೂರು, ಬಸಟೆಪ್ಪ ಕುಂಬಳಾವತಿ, ಬಸವರಾಜ ಕುದರಿಮೋತಿ, ಮುದುಕಪ್ಪ ಜಿಗಜಿನ್ನಿ, ಉಮಾಪತಿ ಅಕ್ಕಿ, ಬಸವರಾಜ ಪಡಿ, ಮಲ್ಲಿಕಾರ್ಜುನ ದೋಟಿಹಾಳ, ಈರಣ್ಣ ಸೊಬರದ, ಸಿದ್ದಲಿಂಗಪ್ಪ ಕಲಕಬಂಡಿ, ಚೇತನ್ ಕುಡತಿನಿ, ರಾಚಪ್ಪ ಹಾಗೂ ಬಣಜಿಗ ಸಮಾಜದ ಇತರೆ ಪ್ರಮುಖರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-35-810012724

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.